Search By Date & Category

CrimeNEWSನಮ್ಮಜಿಲ್ಲೆ

ಅಂಗನವಾಡಿ ಕಾಮಗಾರಿ ಬಿಲ್ ನಕಲಿ ಆರೋಪ: ಸಚಿವ ಭೈರತಿ  ವಿರುದ್ಧ ಲೋಕಾಯುಕ್ತಕ್ಕೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಅಂಗನವಾಡಿ ಕಾಮಗಾರಿ ಬಿಲ್ ನಕಲಿ ಆರೋಪದ ಹಿನ್ನೆಯಲ್ಲಿ ಸಚಿವ ಭೈರತಿ ಬಸವರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಸಚಿವ ಭೈರತಿ ಬಸವರಾಜ್ ವಿರುದ್ಧ ಇತ್ತೀಚೆಗೆ 97 ಕೋಟಿ ರೂ. ವಂಚನೆ ಬಗ್ಗೆ ಟಿ.ಜೆ. ಅಬ್ರಾಹಂ ದೂರು ನೀಡಿದ್ದರು. ಇದೀಗ ಮತ್ತೊಂದು ದೂರು ನೀಡಿದ್ದಾರೆ.

ಅಂಗನವಾಡಿ ಕಾಮಗಾರಿ ಬಿಲ್ ನಕಲಿ ಮಾಡಲಾಗಿದೆ. ವಿಜಿನಾಪುರ 50ನೇ ವಾರ್ಡ್‌ನ ಅಂಗನವಾಡಿ ಸಂಬಂಧ ಜಾಬ್ ಕಾರ್ಡ್, ಟೆಂಡರ್ ನೋಟಿಫಿಕೇಷನ್, ಬ್ಯಾಂಕ್ ಗ್ಯಾರಂಟಿ ಎಲ್ಲವೂ ನಕಲಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

Leave a Reply

error: Content is protected !!