NEWSನಮ್ಮಜಿಲ್ಲೆಸಿನಿಪಥ

ಅಪರ್ಣಾ ನಿಧನ: ಬ್ರಹ್ಮನ ಬರಹದ ಲೀಲೆಗೆ ಸ್ವರ್ಗಾರೋಹಣ ಮಾಡಿದ ಧ್ವನಿ, ಭೂಲೋಕದಲ್ಲಿ ಅಮರತ್ವ ಪಡೆದಿದೆ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ನಾಡಿನ ಹಲವಾರು ಗಣ್ಯರು ತಮ್ಮ ಸಂತಾಪ ಸೂಚಿಸುತ್ತಿದ್ದಾರೆ. ಅಪರ್ಣಾ ಅವರ ಸೊಗಸಾದ ಕನ್ನಡ ಭಾಷೆ, ನಿರೂಪಣೆಯ ಶೈಲಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು, ಸಿನಿ ತಾರೆಯರು ಅಪರ್ಣಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಿದ್ದರಾಮಯ್ಯ ಅವರು, ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.

ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಪರ್ಣಾ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದ್ದೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಅಪರ್ಣಾ ಅವರಿಗೆ ಒಂದು ಕೊನೆ ಆಸೆ ಇತ್ತಂತೆ. ಅದು ಒಂದು ನಿರೂಪಣೆ ಶಾಲೆ ತೆರೆಯಬೇಕು ಎಂಬುದು. ಸದ್ಯ ತಮ್ಮ ಕೊನೆ ಆಸೆ ಈಡೇರಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ ನಟಿ ಅಪರ್ಣಾ. ಈ ಬಗ್ಗೆ ಖುದ್ದಾಗಿ ಮಂಡ್ಯ ರಮೇಶ್‌ ಅವರೇ ಹೇಳಿಕೊಂಡಿದ್ದಾರೆ.

ಮಂಡ್ಯ ರಮೇಶ್​​ ಹೇಳಿದ್ದೇನು?: ಈ ಬಗ್ಗೆ ಮಾತಾಡಿದ ಮಂಡ್ಯ ರಮೇಶ್​ ಅವರು, ಅಪರ್ಣಾಗೆ ಒಂದು ನಿರೂಪಣೆ ಶಾಲೆ ಮಾಡಬೇಕು ಅಂತ ಆಸೆ ಇತ್ತು. ನನ್ನ ಬಳಿ ಹೇಳಿಕೊಂಡಿದ್ದರು. ಅದು ಈಡೇರುವ ಮುನ್ನವೇ ನಮ್ಮನ್ನು ಬಿಟ್ಟು ಹೋದ್ರು ಎಂದು ಅಪರ್ಣಾ ಸಾವಿರ ಕಂಬನಿ ಮಿಡಿದ್ದಾರೆ.

ಅಪರ್ಣಾ ಅವರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ ಮೇಲೆ ಆಘಾತದ ಬಗ್ಗೆ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಅವರು ಇಹಲೋಕದ ವ್ಯಾಪಾರವನ್ನು ತ್ಯಜಿಸಿ ಸ್ವರ್ಗಸ್ತಳಾಗಿದ್ದಾಳೆ.

ಕಳೆದ 2 ವರ್ಷಗಳಿಂದ ನಾನು ಮತ್ತು ಅವಳು ಅವಳ 4ನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಅನ್ನು ಸೆಣಸುತ್ತಾ ಇದ್ವಿ. ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ. ಅತ್ಯಂತ ವಿಷಾದದಿಂದ ಈ ಮಾತನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಅಪರ್ಣಾಳಿಗೆ ಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು. ಎಲ್ಲರ ಪ್ರೀತಿ, ಸಹಕಾರ ಒಡನಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾಷೆ ಮೇಲಿನ ಹಿಡಿತ: ಆ ಧ್ವನಿಗೆ ಮಾರು ಹೋಗದವರೇ ಇಲ್ಲ. ಭಾಷೆ ಮೇಲಿನ ಹಿಡಿತ. ಆ ಭಾಷೆಗೆ ತಕ್ಕಂತ ಭಾವನೆ. ಅಚ್ಚ ಕನ್ನಡ, ಸ್ವಚ್ಛ ಶೈಲಿ, ಅಕ್ಷರಗಳಿಗೂ ಜೀವ ತುಂಬುವ ಸ್ವರ. ಆ ಮಾಧುರ್ಯ ಕಂಠಸಿರಿಗೆ ನಿನ್ನೆ ವಿರಾಮ ಬಿದ್ದಿದೆ. ಖ್ಯಾತ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಕನ್ನಡ ಕಸ್ತೂರಿಯನ್ನು ಉಣಬಡಿಸ್ತಿದ್ದ, ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅಪರ್ಣಾರನ್ನು ಕ್ಯಾನ್ಸರ್ ಎಂಬ ಕ್ರೂರಿ ಒಳಗಿಂದೊಳಕ್ಕೆ ತಿಂದು ಹಾಕಿದೆ.

ಅಚ್ಚ ಕನ್ನಡ, ಸ್ವಚ್ಛ ಕನ್ನಡ, ಶುದ್ಧ ಕನ್ನಡ, ಸುಮಧುರ ಕಂಠ, ಸಾಟಿಯಿಲ್ಲದ ಮಾತಿನ ಶೈಲಿ. ಈ ಎಲ್ಲದಕ್ಕೂ ಪರ್ಯಾಯ ಅಂದ್ರೆ ಅದು ಅಪರ್ಣಾ. ಕನ್ನಡ ಮತ್ತು ಕರ್ನಾಟಕ ಎಂದಿಗೂ ಮರೆಯದ ಮಾಣಿಕ್ಯ. ಅಪರ್ಣಾ ಎಂಬ ಮಾಧುರ್ಯ ಕಂಠದ ಕನ್ನಡತಿ ಈಗ ನೆನಪು ಮಾತ್ರ.

ಇನ್ನು ನೆನಪು ಮಾತ್ರ!: ಆ ವಿಧಿಗೂ ಈ ಮುತ್ತಿನ ಮಾತಿನ ಒಡತಿಯ ಮೇಲೆ ಪ್ರೀತಿ ಉಕ್ಕಿತೋ ಏನೋ? ಕ್ಯಾನ್ಸರ್​​​ ಎಂಬ ಕಿಲ್ಲರ್‌ ಅಪರ್ಣಾ ಅವರನ್ನು ಕರೆಸಿಕೊಂಡಿದೆ. ಮೋಸ್ಟ್​​ಲೀ ಆ ದೇವಲೋಕವೂ ಈ ಮಧುರ ಕನ್ನಡದ ಕಂಪು ಬೀರುವ ಅಪರ್ಣಾರನ್ನು ಆಹ್ವಾನಿಸಿತೋ ಏನೋ? ಬ್ರಹ್ಮನ ಬರಹದ ಲೀಲೆಗೆ ಸ್ವರ್ಗಾರೋಹಣ ಮಾಡಿದ ಈ ಧ್ವನಿ, ಭೂಲೋಕದಲ್ಲಿ ಅಮರತ್ವ ಪಡೆದಿದೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ