NEWSನಮ್ಮಜಿಲ್ಲೆನಮ್ಮರಾಜ್ಯ

APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ವೇತನ ಆಯೋಗದಂತೆ ಸಂಬಳ ಕೊಟ್ಟರೆ ಕೆಲವು ಸೌಲಭ್ಯಗಳನ್ನು ಸರ್ಕಾರ ಕಸಿದುಕೊಳ್ಳುತ್ತದೆ. ಅದಕ್ಕೆ ಆಂಧ್ರಪ್ರದೇಶದ ಸಾರಿಗೆ ನೌಕರರು ಈಗ ಅನುಭವಿಸುತ್ತಿರುವುದೆ ನಿದರ್ಶನ ಎಂದು ಕೆಲ ಸಂಘಟನೆಗಳ ಮುಖಂಡರು ಕೆಎಸ್‌ಆರ್‌ಟಿಸಿ ನೌಕರರಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ.

ಕೆಲ ಸಂಘಟನೆಗಳ ಮುಖಂಡರ ಈ ನಡೆಯಿಂದ ರಾಜ್ಯದ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರು ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ ವಾಸ್ತವವಾಗಿ ನೋಡಿದರೆ, ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (APSRTC)ದ ಅಧಿಕಾರಿಗಳು ಮತ್ತು ನೌಕರರು ಈಗ ಅಂದರೆ ರಾಜ್ಯ ಸರ್ಕಾರದ ಖಜಾನೆಯಿಂದ ವೇತನ ಪಡೆಯುತ್ತ ಒತ್ತಡ ರಹಿತವಾಗಿ ಕರ್ತವ್ಯ ನಿರ್ವಾಹಿಸುತ್ತಿದ್ದಾರೆ.

ಈ ಬಗ್ಗೆ ಬೆಂಗಳೂರು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ (ಮೆಜೆಸ್ಟಿಕ್‌) ಸ್ವತಃ APSRTC ಚಾಲಕರೊಬ್ಬರು ತಮಗೆ ಸಿಕ್ಕಿರುವ ಸೌಲಭ್ಯಗಳನ್ನು ಹಂಚಿಕೊಂಡಿದ್ದು, ಸರ್ಕಾರಿ ನೌಕರರೆಂದು ನಮ್ಮನ್ನು ಪರಿಗಣಿಸಿದ ಬಳಿಕ ನಮಗೆ ಈ ಹಿಂದೆ ಕೊಡುತ್ತಿದ್ದ ಸೌಲಭ್ಯಗಳ ಜತೆಗೆ ಇನ್ನಷ್ಟು ಸೇರಿಕೊಂಡಿವೆ. ಹೀಗಾಗಿ ನಾವು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದೇವೆ. ಈಗ ಉಸಿರುಗಟ್ಟಿದ ವಾತಾವರವಿಲ್ಲ ಎಂದು ಮುಕ್ತವಾಗಿ ಹೇಳಿದ್ದಾರೆ.

8ಗಂಟೆ ಕೆಲಸದ ಸಮಯವಿದ್ದು, ಈ ಸಮಯ ಮೀರಿದರೆ ನಮಗೆ ಒಟಿ ಕೊಡುತ್ತಾರೆ. ಜತೆಗೆ ನಮಗೆ ಒಬ್ಬ ಕ್ಲೀನರನ್ನು ಕೂಡ ಕೊಟ್ಟಿದ್ದಾರೆ. ಬಸ್‌ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದು ಇಲ್ಲಿ ಹಾಲ್ಟಾಗಿ ಮತ್ತೆ ಹೊರಡಬೇಕಾದಾಗ ಪ್ರಯಾಣಿಕರು ಹತ್ತಿ ಇಳಿಯುವಾಗ ಬರುವ ಧೂಳು ಕಸವನ್ನು ಸ್ವಚ್ಚಗೊಳಿಸಲು ಮತ್ತಿತರ ಕೆಲಸ ಮಾಡುವುದಕ್ಕೆ ಒಬ್ಬರನ್ನು ಕೊಟ್ಟಿದ್ದಾರೆ.

ಇನ್ನು ನಾವು ಕುಟುಂಬ ಸಮೇತ ಪ್ರವಾಸ ಮಾಡುವುದಕ್ಕೆ ವರ್ಷದಲ್ಲಿ ಮೂರು ಬಾರಿ ಅಂದರೆ ಒಟ್ಟು 5 ತಿಂಗಳವರೆಗೆ ಫ್ಯಾಮಿಲಿ ಪಾಸ್‌ ಕೊಡುತ್ತಿದ್ದಾರೆ. ಜತೆಗೆ ಸರ್ಕಾರದ ಖಂಜಾನೆಯಿಂದ ವೇತನ ಬರುತ್ತಿದೆ. ಎಲ್ಲವನ್ನು ಸರ್ಕಾರವೇ ನೋಡಿಕೊಳ್ಳುತ್ತಿದೆ. ಹೀಗಾಗಿ ನಾವು ನಿಕಟಪೂರ್ವ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ಅಭಾರಿಯಾಗಿದ್ದೇವೆ. ಅವರೇ ನಮ್ಮ ಪಾಲಿನ ದೇವರು ಎಂದು ಸಂತಸದಿಂದ ಹೇಳಿದ್ದಾರೆ.

ನಮಗೆ ಈ ಹಿಂದೆ ವೇತನ ತುಂಬ ಕಡಿಮೆ ಇತ್ತು. ನಾವು ಸರ್ಕಾರಿ ನೌಕರರೆಂದು ಘೋಷಣೆ ಆದ ಬಳಿಕ 7ಸಾವಿರ ರೂ.ಗಳಿಂ 25 ಸಾವಿರ ರೂ.ಗಳವರೆಗೂ ವೇತನ ಹೆಚ್ಚಳವಾಗಿದೆ. ಈಗ ಯಾವುದೇ ತೊಂದರೆ ಇಲ್ಲ. ರಜೆ ಪಡೆಯುವುದಕ್ಕೂ ಸಮಸ್ಯೆ ಆಗುತ್ತಿಲ್ಲ. ಜತೆಗೆ ನೌಕರರಲ್ಲಿ ಒಗ್ಗಟ್ಟು ಮೂಡಿದೆ ಎಂದು ಹೇಳಿದ್ದಾರೆ.

ಇನ್ನು ನಾವು ಸರ್ಕಾರಿ ನೌಕರರು ಎಂದು ಪರಿಣಿಸಿದ ಬಳಿಕ ನಮಗೆ ಸಮಸ್ಯೆಗಳೆ ಹೆಚ್ಚಾಗಿವೆ ಎಂಬುವುದೆಲ್ಲ ಬರಿ ಸುಳ್ಳು. ಜತೆಗೆ ಸೌಲಭ್ಯಗಳನ್ನು ಮೊಟಕುಗೊಳಿಸಿದ್ದಾರೆ ಎಂಬುವುದು ಸತ್ಯಕ್ಕೆ ದೂರವಾದದ್ದು ಎಂದು ಕೂಡ ಹೇಳಿದ್ದಾರೆ.

ಕರ್ನಾಟಕದಲ್ಲಿ ಸಾರಿಗೆ ನೌಕರರ ಪರ ಇರುವ ಕೆಲ ಕಾರ್ಮಿಕ ಸಂಘಟನೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಈ ರೀತಿ ನೌಕರರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿವೆ. ಅದಕ್ಕೆ ಯಾರು ಒಳಗಾಗಬಾರದು ಎಂದು ರಾಜ್ಯದ ಚಾಲನಾ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಅಲ್ಲದೆ ಈ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಹೋರಾಟದಿಂದ ವಜಾ, ಅಮಾನತು, ವರ್ಗಾವಣೆ ಜತೆಗೆ ಪೊಲೀಸ್‌ ಕೇಸ್‌ ದಾಖಲಿಸಿಕೊಂಡು ನರಳುವುದು ಬೇಡ. ಅದಕ್ಕೆ ಪೂರ್ಣವಿರಾಮ ಬೀಳಬೇಕು. ಆ ನಿಟ್ಟಿನಲ್ಲಿ ನೌಕರರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ