NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರಿಗೆ ಸರಿ ಸಮಾನ ವೇತನ ಕೊಡಲು ಸರ್ಕಾರ- ಆಡಳಿತ ಮಂಡಳಿಗಳು ಸಿದ್ಧ ಆದರೇ, ನೌಕರರ ಕೆಲ ಸಂಘಟನೆಗಳ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದು ಅವರ ಬೇಡಿಕೆಯನ್ನು ಈಡೇರಿಸುವುದಕ್ಕೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮುಂದಾಗುತ್ತಿದ್ದರೂ ಕೆಲ ಸಂಘಟನೆಗಳ ಮುಖಂಡರೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಸರ್ಕಾರ ನೌಕರರ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನೀಡುವುದಕ್ಕೆ ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಾರಿಗೆ ನಿಗಮದ ಅಧಿಕಾರಿಗಳಿಗೆ 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವುದಕ್ಕೆ ಹಲವಾರು ಸುತ್ತಿನ ಮಾತುಕತೆಯನ್ನು ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ನಡೆಸಿತ್ತು.

ಅದರಂತೆ ಪ್ರಸ್ತುತ ಇರುವ ಕಾಂಗ್ರೆಸ್‌ ಸರ್ಕಾರ ಕೂಡ ನಾವು ಕೂಡ ಚುನಾವಣೆ ವೇಳೆ ನಮ್ಮ ಪ್ರಣಾಳಿಕೆಯಲ್ಲಿ ಸರಿ ಸಮಾನ ವೇತನ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದೇವೆ ಅದರಂತೆ ವೇತನ ಕೊಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶ ನೀಡಿದೆ. ಆದರೆ, ಸಾರಿಗೆ ನೌಕರರ ಪರ ಸಂಘಟನೆಗಳಲ್ಲಿ ಒಮ್ಮತದ ನಿರ್ಧಾರ ಮೂಡದಿದ್ದರಿಂದ ಸರ್ಕಾರ ವೇತನ ಆಯೋಗದಿಂದ ಹಿಂದೆ ಸರಿಯುತ್ತಿದೆ ಎನ್ನಲಾಗುತ್ತಿದೆ.

ಕೆಲ ಸಂಘಟನೆಗಳು ಸಾರಿಗೆ ನೌಕರರ ಹೋರಾಟವನ್ನು ಜೀವಂತವಾಗಿ ಇಟ್ಟುಕೊಂಡರೆ ನಾಲ್ಕುವರ್ಷಕ್ಕೊಮ್ಮೆಯಾದರೂ ಸಂಘಟನೆಗಳು ಇವೆ ಎಂಬುದನ್ನು ತೋರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಸಂಘಟನೆಗಳ ಮುಖಂಡರು ಸರ್ಕಾರಿ ನೌಕರರ ವೇತನ ಆಯೋಗ ಮಾದರಿ ಅಥವಾ ಸರಿ ಸಮಾನ ವೇತನದ ಬದಲಿಗೆ ಅಗ್ರಿಮೆಂಟ್‌ ಮೂಲಕವೇ ವೇತನ ಹೆಚ್ಚಳ ಮಾಡಿ ಎಂದು ಸರ್ಕಾರಕ್ಕೆ ಮತ್ತು ಆಡಳಿತ ಮಂಡಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಶೇ.95ರಷ್ಟು ನೌಕರರ ಬೇಡಿಕೆಯಾದ ಸರಿ ಸಮಾನ ವೇತನವನ್ನು ವೇತನ ಆಯೋಗ ಮಾದರಿಯಲ್ಲಿ ಕೊಡುವುದಕ್ಕೆ ಸರ್ಕಾರ ಒಪ್ಪಿಕೊಂಡು, ಅದರ ಜಾರಿಗೆ ಸಚಿವರು ಮುಂದಾಗುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನೌಕರರ ಸಂಘಟನೆಗಳ ಮುಂದೆ ಪದೇಪದೆ ಹೇಳಿಕೆ ನೀಡುತ್ತಿದ್ದು, ನಾವು ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತೇವೆ ಭಯಬೇಡ ಎನ್ನುತ್ತಿದ್ದಾರೆ. ಆದರೆ, ಕೆಲ ಸಂಘಟನೆಗಳ ನಡೆಯಿಂದ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ಮುಖ್ಯಮಂತ್ರಿಗಳು ಕೂಡ ಸಾರಿಗೆ ನೌಕರರ ಸಮಸ್ಯೆ ಏನೆಂದು ನಮಗೆ ಗೊತ್ತಿದೆ. ಹೀಗಾಗಿ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಒಂದು ಶಾಶ್ವತ ಪರಿಹಾರ ನೀಡುತ್ತೇವೆ ಎಂದು ವಿಧಾನಸೌಧದಲ್ಲಿ ಹಾಗೂ ಸಾರಿಗೆ ಸಮಾರಂಭಗಳಲ್ಲಿ ಮತ್ತು ನೌಕರರು ಮನವಿ ಸಲ್ಲಿಸುವ ವೇಳೆಯೂ ಈಗಾಗಲೇ ಭರವಸೆ ಕೂಡ ನೀಡಿದ್ದಾರೆ.

ಜತೆಗೆ ನಾವೆ ಚುನಾವಣೆ ವೇಳೆ ಕೊಟ್ಟಿರುವ ಭರವಸೆಯನ್ನು ಹುಸಿ ಮಾಡುವುದು ಬೇಡ. ಈಗ ನಾವು ಅದನ್ನು ಕೈ ಬಿಟ್ಟರೆ ಕೊಟ್ಟ ಮಾತು ತಪ್ಪಿದಂತಾಗುತ್ತದೆ. ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಸಾರಿಗೆ ನೌಕರರ ಸರಿ ಸಮಾನ ವೇತನವನ್ನು ಜಾರಿಗೆ ಮಾಡಿ ಬಿಡೋಣ ಎಂಬ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಿಎಂ ಮುಂದಾಗಿದ್ದಾರೆ ಎಂದು ನಬಲ್ಲ ಮೂಲಗಳು ಖಚಿತಪಡಿಸಿವೆ.

ಆದರೆ, ಈ ಸರ್ಕಾರದ ನಿರ್ಧಾರವನ್ನೇ ಬದಲಿಸುವ ಮಟ್ಟಿಗೆ ನೌಕರರ ಹಣಿಯುವ ಕೆಲಸವನ್ನು ಕೆಲ ಸಂಘಟನೆಗಳು ಈಗಲೂ ಮಾಡುತ್ತಿದ್ದು, ಸರಿ ಸಮಾನ ವೇತನ ಬೇಡ ಅಗ್ರಿಮೆಂಟ್‌ ಬೇಕು ಎಂದು ಪಟ್ಟು ಹಿಡಿದು ಕುಳಿತಿವೆ. ಈ ಸಂಘಟನೆಗಳ ಮೊಂಡುತನದಿಂದ ಸರ್ಕಾರ ಕೂಡ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಇನ್ನು 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೂಡ ಬಂದಿಲ್ಲ. ಜತೆಗೆ 2024 ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡಬೇಕು ಎಂಬ ಬೇಡಿಕೆ ನನೆಗುದಿಗೆ ಬಿದ್ದಿದೆ. ಈ ನಡುವೆ ನೌಕರರು ಅಧಿಕಾರಿಗಳ ನಡುವೆ ಭಾರಿ ಕಂದಕವೇ ನಿರ್ಮಾಣವಾಗುತ್ತಿದ್ದು, ನಿತ್ಯ ಕಿರುಕುಳವನ್ನು ಅನುಭವಿಸುತ್ತಿದ್ದಾರೆ.

2 Comments

  • ಸಾರಿಗೆಸಚಿವರು ಹಾಗು ಸರ್ಕಾರಕ್ಕೆ ನಿಜವಾಗಲೂ ಸಾರಿಗೆ ನೌಕರರಿಗೆ ಸರಿಸಮಾನ ವೇತನ ಕೊಡಬೇಕು ಎನ್ನುವ ಮನಸ್ಸಿದ್ದರೆ ಕೂಡಲೇ ಅದನ್ನ ಘೋಷಣೆ ಮಾಡಲಿ. ನಿಗಮಗಳಲ್ಲಿನ ಬಹುತೇಕ ನೌಕರರು ಅದರ ಪರವಾಗಿಯೇ ಇದ್ದಾರೆ, ಅದು ಎದುರಿಗೆ ಕಾಣಿಸುವ ಸತ್ಯ, ಹಾಗೂ ಇದನ್ನು ಜಾರಿ ಮಾಡಲು ಕೆಲವು ಸಂಘಟನೆಗಳು ಬಿಡುತ್ತಿಲ್ಲ ಎನ್ನುವುದಾದರೆ ಕೂಡಲೇ ಚುನಾವಣೆ ನಡೆಸಿ, ಅಧಿಕಾರ ಹಿಡಿದಂತ ಸಂಘಟನೆಯ ನಾಯಕರನ್ನು ಕರೆಸಿ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಿ.

    • ಸಂಪಾದಕರೇ ನೀವು ಸಾರಿಗೆನೌಕರರಿಗೆ ಸಮಾನ ವೇತನ ಕೊಡಲು ಸರ್ಕಾರ ಹಾಗೂ ಆಡಳಿತ ಮಂಡಳಿ ಸಿದ್ದವಿದೆ ಎಂಬ ವಿಷಯ ನೋಡಿ ತುಂಬಾ ಸಂತೋಷ ವಾಯಿತು. ತಮಗೆ ಧನ್ಯವಾದಗಳು.
      ಇನ್ನು ಕೆಲ ಸಂಘಟನೆಗಳು ಇದನ್ನು ವಿರೋದಿಸುತಿದ್ದಾರೆ ಎಂಬ ವಿಚಾರ ಕೇಳಿ ತುಂಬಾ ಬೇಜಾರಾಯಿತು. ಹಾಗೆ ಇಂದು ಯಾರೋ ಫೋನ್ ಮಾಡಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಿರಿ ಅವರಿಗೆ ನಮ್ಮ ದಿಕ್ಕಾರ ಹಾಗೆಯೇ ದಯವಿಟ್ಟು ಅವರ ಮೇಲೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿ. ಹಾಗೆಯೇ ನಮಗೆ ಸಮಾನ ವೇತನ ಕೊಡಿಸಲು ತಮ್ಮ ಪ್ರಯತ್ನ ಮುಂದುವರಿಯಲಿ

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು