NEWSನಮ್ಮರಾಜ್ಯರಾಜಕೀಯ

ಅಧಿವೇಶನದಲ್ಲಿ ನಮ್ಮ ಪರ ಧ್ವನಿಯಾಗಿ : ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆಗೆ ನೌಕರರ ಸಂಘ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇದೇ ಡಿಸೆಂಬರ್‌ 19ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕೆಂದು ಕಾಂಗ್ರೆಸ್‌ ಮುಖಂಡ ಪ್ರೀಯಾಂಕ್‌ ಖರ್ಗೆ ಅವರಿಗೆ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಶಾಸಕರೂ ಆದ ಪ್ರೀಯಾಂಕ್‌ ಖರ್ಗೆ ಅವರನ್ನು ಇಂದು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಸಮಸ್ತ ನಾಲ್ಕೂ ನಿಗಮಗಳ ಸಾರಿಗೆ ನೌಕರರ ಪರವಾಗಿ ಮುಷ್ಕರದ ಸಮಯದಲ್ಲಿ ಆದಂತಹ ತೊಂದರೆಗಳು ಮತ್ತು 2020 ರಿಂದ ಸಾರಿಗೆ ಸಂಸ್ಥೆಯ ನೌಕರರ ವೇತನ ಹೆಚ್ಚಳದ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವ ಮೂಲಕ ಸರ್ಕಾರದ ಗಮನ ಸೆಳೆದು ನೌಕರರ ಸಮಸ್ಯೆಗಳನ್ನು ಬರೆಹರಿಸಿಕೊಡಬೇಕೆಂದು ಕೇಳಿಕೊಂಡರು.

ಸಂಘದ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ ಪ್ರೀಯಾಂಕ್‌ ಖರ್ಗೆ ಅವರು ನಿಮ್ಮ ಸಮಸ್ಯೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ವೇತನದ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರಕ್ಕೆ ಸಂಘದ ಪದಾಧಿಕಾರಿಗಳು ಇಟ್ಟಿರುವ ಬೇಡಿಕೆಗಳು: 1) 07/04/2021 ರಿಂದ ನಡೆದ ಮುಷ್ಕರ ಸಂದರ್ಭದಲ್ಲಿ ವಜಾಗೊಂಡ ನೌಕರರನ್ನು ಯಾವುದೇ ಷರತ್ತು ವಿಧಿಸದೆ ಹಿಂಬಾಕಿ ಸಹಿತ ಮರುನೇಮಕ ಮಾಡಿಕೊಳ್ಳಬೇಕು.

2) ಮುಷ್ಕರ ಸಮಯದಲ್ಲಿ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಿಸಿರುವ ಎಲ್ಲ ಪೊಲೀಸ್‌ ಪ್ರಕರಣಗಳನ್ನು ಕೈಬಿಡಬೇಕು.

3) ಸರ್ಕಾರಿ ನೌಕರರಿಗೆ ನೀಡುವ ವೇತನದ ಮಾದರಿಯಲ್ಲೇ ಸಾರಿಗೆ ನೌಕರರಿಗೂ ಸಹ ಸರಿಸಮಾನ ವೇತನವನ್ನು ಜಾರಿಗೊಳಿಸಬೇಕು.

4) ಸರ್ಕಾರಿ ನೌಕರರಿಗೆ ನೀಡಿರುವ ನಗದು ರಹಿತ ಆರೋಗ್ಯಭಾಗ್ಯ ಯೋಜನೆಯನ್ನು ಸಾರಿಗೆ ನೌಕರರಿಗೆ ಹಾಗೂ ಅವರ ಕುಟುಂಬಸ್ಥರಿಗೂ ಅಳವಡಿಸಬೇಕು.

5) ಮಾಜಿ ಯೋಧರಿಗೆ ಸಾರಿಗೆ ಸಂಸ್ಥೆಯಲ್ಲಿ ಕರ್ನಾಟಕ ಸೇವಾ ನಿಯಮ ಪ್ರಕಾರ ಜಾರಿಗೆ ತಂದಿರುವುದು ಒಳ್ಳೆಯ ವಿಷಯ. ಆದರೆ ಅದನ್ನು ಸಾರಿಗೆ ಸಂಸ್ಥೆಗೆ ಸೇರಿದ ದಿನದಿಂದಲೇ ಪರಿಗಣಿಸಬೇಕು ಹಾಗೆ ಸಂಖ್ಯೆ 1467 ದಿನಾಂಕ: 24/07/2012 ರ ಸುತ್ತೋಲೆಯನ್ನು ತಿದ್ದುಪಡಿ ಮಾಡಬೇಕು.

6) ಸಾರಿಗೆ ಸಂಸ್ಥೆಯಲ್ಲಿ 2006ರಲ್ಲಿ ಸೇರಿದ ಮಾಜಿ ಯೋಧರ ವೇತನ ಸಾರಿಗೆ ಸಂಸ್ಥೆಗಿಂತ ಹೆಚ್ಚಾಗಿದ್ದರು. ವೇತನ ಪರಿಷ್ಕರಣೆ ಇಲ್ಲಿಯವರೆಗೂ ಆಗಿಲ್ಲ. ಕೂಡಲೇ ಈ ಸಮಸ್ಯೆಯನ್ನು ನಿವಾರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಈ ವೇಳೆ ಸಂಘದ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ರಾಮು ಡಿ., ಖಜಾಂಚಿ ಯೋಗೇಶ್ ಎಚ್.ಕೆ., ಉಪಾಧ್ಯಕ್ಷ ಸುಧಾಕರ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಶ್ರೀಧರ್ ತಹಶೀಲ್ದಾರ್, ಸಂಘದ ಎಲ್ಲ ಪದಾಧಿಕಾರಿಗಳು ಇದ್ದರು.

ನಿಮ್ಮ ಸತ್ಯಪಥ ವಿಜಯಪಥಕ್ಕೆ ಆರ್ಥಿಕವಾಗಿ ಬೆಂಬಲ ನೀಡಿ, ಸತ್ಯನಿಷ್ಠವರದಿಗೆ ಸಹಕರಿಸಲು ಬಯಸಿದರೆ ಈ QR ಕೋಡ್‌ ಸ್ಕ್ಯಾನ್‌ ಮಾಡಿ ಇಲ್ಲ 9986160163ಗೆ ಫೋನ್‌ಪೇ ಮಾಡುವ ಮೂಲಕ ಬೆಂಬಲಿಸಿ.

……………………….. ………………………. 

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ