ಬೆಳಗಾವಿ: ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತರೊಬ್ಬರು ಬೆಳೆದ ಅರಿಶಿಣ ದಾಖಲೆ ಮಟ್ಟಕ್ಕೆ ಮಾರಾಟವಾಗಿ ಇದು ಇಡೀ ಭಾರತದಲ್ಲೇ ಮೊದಲು ಎಂಬಂತಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಎಂಬುವರೆ ಅರಿಶಿನ ಬೇಳೆದ ಈಗ ಫುಲ್ ಖುಷಿಯಲ್ಲಿದ್ದಾರೆ. ಹೌದು! ಇದು ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿದ್ದು, ಪ್ರತಿ ಕ್ವಿಂಟಲ್ಗೆ ಬರೋಬ್ಬರಿ 41,101 ರೂ. ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.
ಮೂರು ಎಕರೆ ಜಮೀನಿನಲ್ಲಿ ಅರಿಶಿಣ ಬೆಳೆದ ರೈತ ಪ್ರತಿ ಎಕರೆಗೆ 25-28 ಕ್ವಿಂಟಲ್ ಅರಿಶಿನ ಇಳುವರಿ ಪಡೆದಿದ್ದು, ಸದ್ಯ ಇದು ಶ್ರಮಕ್ಕೆ ತಕ್ಕ ವರದಾನವಾಗಿದೆ ಎಂದು ಸೈಬಣ್ಣ ಸಂತಸ ಹಂಚಿಕೊಂಡಿದ್ದಾರೆ.
ಸೈಬಣ್ಣ ಶೈಲಂ ತಳಿಯ ಅರಿಶಿನ ಬಿಜ ನಾಟಿ ಮಾಡಿ ಸಮರ್ಪಕ ನೀರು ಔಷಧೋಪಚಾರದೊಂದಿಗೆ ಉತ್ತಮ ಇಳುವರಿ ಪಡೆದಿದ್ದಾರೆ. ಈಗಾಗಲೇ 18 ಕ್ವಿಂಟಲ್ ಅರಿಶಿನ ಮಾರಾಟವಾಗಿದ್ದು ಅದರಿಂದ 7ಲಕ್ಷ ರೂ. ನಿವ್ವಳ ಲಾಭ ಪಡೆದಿದ್ದಾರೆ.
ಪ್ರತಿ ಎಕ್ಕರೆಗೆ 30 ಸಾವಿರ ಖರ್ಚು ಮಾಡಿದ ಅವರು ಮೂರು ಎಕ್ಕರೆ ಅರಿಶಿನದಿಂದ ಅಂದಾಜು 30 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.