NEWSಕೃಷಿನಮ್ಮಜಿಲ್ಲೆ

ಬನ್ನೂರು ದೊಡ್ಡ ಕೆರೆ ಎಡದಂಡೆ, ಬಲದಂಡೆ ನಾಲೆಗಳ ಹೂಳು ತೆಗೆಯಲು ರೈತ ಮುಖಂಡರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಬನ್ನೂರು ದೊಡ್ಡ ಕೆರೆಯ ಎಡದಂಡೆ ನಾಲೆ, ಬಲದಂಡೆ ನಾಲೆ ಹಾಗೂ ಚಿಕ್ಕ ದೇವರಾಯ ಬಡಾವಣೆ ನಾಲೆ ಮತ್ತು ಕೆರೆಯ ಅಚ್ಚುಕಟ್ಟು ಭಾಗದ ಹಳ್ಳ ಕೊಳ್ಳಗಳಲ್ಲಿ ಸರಾಗವಾಗಿ ನೀರು ಹರಿಯಲು ಗಿಡ ಗಂಟಿಗಳು ಹಾಗೂ ಹೂಳು ತೆಗೆಯುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕ ಒತ್ತಾಯಿಸಿದೆ.

ಈ ಸಂಬಂಧ ಇಂದು ಬನ್ನೂರು ಗ್ರಾಮಾಂತರ ಘಟಕ ಪದಾಧಿಕಾರಿಗಳು ಮಾದೇಗೌಡನ ಹುಂಡಿಯಲ್ಲಿರುವ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಒತ್ತಾಯ ಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಮ್ಮ ವ್ಯಾಪ್ತಿಗೆ ಬರುವ ಬನ್ನೂರು ದೊಡ್ಡ ಕೆರೆಯ ಎಡದಂಡೆ ನಾಲೆ, ಬಲದಂಡೆ ನಾಲೆ ಹಾಗೂ ಚಿಕ್ಕ ದೇವರಾಯ ಬಡಾವಣೆ ನಾಲೆಗಳಲ್ಲಿ ವಿಪರೀತ ಗಿಡ ಗಂಟಿಗಳು ಬೆಳೆದು ಹೂಳು ತುಂಬಿರುವುದರಿಂದ ಕೃಷಿ ಚಟುವಟಿಕೆಗೆ ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯದೆ ರೈತರಿಗೆ ತುಂಬಾ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಇನ್ನು ಬನ್ನೂರು ದೊಡ್ಡಕೆರೆ ಆಚ್ಚುಕಟ್ಟು ತಳಭಾಗದಲ್ಲಿ ಹಳ್ಳಕೊಳ್ಳಗಳು ಹೂತು ಹೋಗಿದ್ದು ಮಳೆಗಾಲದಲ್ಲಿ ನೀರು ಹಳ್ಳದಲ್ಲೀ ಸರಾಗವಾಗಿ ಹರಿಯದೆ ರೈತರ ಜಮೀನು ಹಾಗೂ ಬೆಳೆಗಳ ಮೇಲೆ ಹರಿದು ತುಂಬಾ ನಷ್ಟವಾಗುತ್ತಿದೆ. ಇದರಿಂದ ರೈತರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಇನ್ನೊಂದೆಡೆ ಕಳೆದ ವರ್ಷ ತಮಿಳುನಾಡಿಗೆ ನೀರು ಹರಿಸಿದ ಕಾರಣ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಬಾರಿಯಾದರು ಕೃಷಿ ಚಟುವಟಿಕೆ ಕೈಗೊಳ್ಳಲು ತುರ್ತಾಗಿ ಹೂಳು ಹಾಗೂ ಗಿಡ ಗಂಟಿಗನ್ನೂ ತೆಗೆಸಿ ನಾಲೆಗಳಿಗೆ ನೀರು ಹರಿಸಿ ಬೆಳೆಗಳ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

ಬನ್ನೂರು ಪೂರ್ಣಿಮಾ ಬಾರ್ ಪಕ್ಕದ ಹಳ್ಳ, ಗಾಣಿಗನ ಕೊಪ್ಪಲು ಹತ್ತಿರ ಹಾಗೂ ಅತ್ತಹಳ್ಳಿ ನಂಜಯ್ಯನ ಪುಟ್ಟರಾಜು ಜಮೀನು ಬಳಿ ಇರುವ ಹಳ್ಳಕ್ಕೆ ಜಮೀನಿಗೆ ನೀರು ಪೂರೈಸಲು ಒಡ್ಡು ನಿರ್ಮಾಣ ಮಾಡಿದ್ದು ಒಡ್ಡುಗಳು ಸಂಪೂರ್ಣ ಒಡೆದು ಹೋಗಿರುವ ಕಾರಣ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ ಬಿ.ಬೆಟ್ಟಹಳ್ಳಿ – ಕುಂತನಹಳ್ಳಿ ನಡುವೆ ಇರುವ ಎಸ್ಕೇಪ್ ಹಳ್ಳದ ಒತ್ತುವರಿಯಿಂದ ಹಳ್ಳ ಮುಚ್ಚಿ ಹೋಗಿದ್ದು ಮಳೆಯ ನೀರು ಹಾಗೂ ಕೆರೆಯ ನೀರು ಹೆಚ್ಚಾದಾಗ ರೈತರ ಜಮೀನುಗಳ ಬೆಳೆಗಳ ಮೇಲೆ ನೀರು ಹರಿದು ಬೆಳೆ ಸಂಪೂರ್ಣ ನಾಶವಾಗಿ ನಷ್ಟ ಅನುಭವಿಸುತ್ತಿದ್ದಾರೆ, ಆದ್ದರಿಂದ ಮಳೆಗಾಲದಲ್ಲಿ ಆಗುವ ಆನಾವುತ ತಪ್ಪಿಸಲು ಸೂಕ್ತ ಕ್ರಮ ಕೈಗೊಂಡು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಇನ್ನು ಒತ್ತಾಯ ಪತ್ರ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ 15 ದಿವಸದೊಳಗೆ ಕ್ರಮ ಕೈಗೊಳ್ಳದಿದ್ದರೆ ತಮ್ಮ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಗಮನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರುವುದಾಗಿ ವಿವರಿಸಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಅತ್ತಹಳ್ಳಿ ಸಿ.ಲಿಂಗಣ್ಣ, ಪಿ.ಚೇತನ್, ಬನ್ನೂರು ಸೂರಿ, ಕುಂತನಹಳ್ಳಿ ಸ್ವಾಮಿ, ರಾಮಕೃಷ್ಣ, ಹೊನ್ನಯ್ಯ, ಕಗ್ಗಲೀಪುರ ಮಲ್ಲಿಕಾರ್ಜುನ ಹನುಮನಾಳು ಚಿಕ್ಕಸ್ವಾಮಿ, ವೆಂಕಟೇಶ್ ಮುಂತಾದವರು ಇದ್ದರು.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ