Please assign a menu to the primary menu location under menu

NEWSಕೃಷಿನಮ್ಮಜಿಲ್ಲೆ

ಬನ್ನೂರು- ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿಯಲ್ಲೆ ಕಾಲಹರಣ: ಸಿಟ್ಟಿಗೆದ್ದ ರೈತರಿಂದ ರಸ್ತೆಗೆ ಭತ್ತ ಸುರಿದು ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದು ಖರೀದಿ ಮಾಡದೆ ಕೇವಲ ನೋಂದಣಿ ಪ್ರಕ್ರಿಯೆಯಲ್ಲೆ ಕಾಲಹರಣ ಮಾಡಿದ ಕಾರಣ ಭತ್ತ ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟ ಹೊಂದಿದ್ದು ಕೂಡಲೇ ಪರಿಹಾರ ಕೊಡಿ ಕೊಡಬೇಕು ಎಂದು ಒತ್ತಾಯ ಮೈಸೂರು-ಮಳ್ಳವಳ್ಳಿ ಹೆದ್ದಾರಿ ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದರು.

ಬನ್ನೂರು ಸಂತೆಮಾಳ ಬಳಿ ಮೈಸೂರು – ಮಳವಳ್ಳಿ ಮುಖ್ಯ ರಸ್ತೆಗೆ ಭತ್ತ ಸುರಿದು, ಪ್ರತಿಭಟನೆ ನಡೆಸಿ ಗಮನ ಸೆಳೆದ ನೂರಾರು ರೈತರು ಭತ್ತ ಖರೀದಿ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್, ಭತ್ತ ಖರೀದಿ ಕೇಂದ್ರ ತೆರೆದು ಖರೀದಿ ಮಾಡದೆ ನೋಂದಣಿ ಪ್ರಕ್ರಿಯೆ ಮಾಡುವಲ್ಲೆ ಸರ್ಕಾರ ಕಾಲ ಹರಣ ಮಾಡುತ್ತಿದ್ದು, ಭತ್ತ ಬೆಳೆಗಾರರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಇನ್ನು ಈ ಬಾರಿ ಭತ್ತದ ಬೆಲೆ ಕಳೆದ ವರ್ಷಕ್ಕಿಂತ 1000 ರೂಪಾಯಿ ಕಡಿಮೆಯಾಗಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ತಿ.ನರಸೀಪುರ ತಾಲೂಕು ಘಟಕದಲ್ಲಿ ಸರ್ಕಾರ ಖರೀದಿ ಕೇಂದ್ರ ಪ್ರಾರಂಭ ಮಾಡಿ ಖರೀದಿ ಮಾಡದೇ ಇರುವುದೇ ಇದಕ್ಕೆಲ್ಲ ಕಾರಣವಾಗಿದೆ ಎಂದ ಅವರು, ವೇದಿಕೆಗಳಲ್ಲಿ ರೈತರ ಹಾಡಿ ಹೊಗಳಿ ಪ್ರಶಂಸೆ ಮಾಡಿ ಮೊಸಳೆ ಕಣ್ಣೀರು ಸುರಿಸಿದರೆ ಸಾಲದು ರೈತರ ರಕ್ಷಣೆ ಮಾಡಲು ನಷ್ಟ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ಕೆ.ಆರ್.ನಗರ, ನಂಜನಗೂಡು, ತಿ.ನರಸೀಪುರ ತಾಲೂಕುಗಳಲ್ಲಿ ಉತ್ತಮ ಭತ್ತ ಬೆಳೆದಿದ್ದು, ಸರ್ಕಾರ ಖರೀದಿ ಕೇಂದ್ರ ತೆರೆದು ಖರೀದಿ ಮಾಡದೆ ಇರುವುದರಿಂದ ಇದರ ಲಾಭ ಬಂಡವಾಳ ಶಾಹಿಗಳು, ರೈಸ್ ಮಿಲ್ ಮಾಲೀಕರು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿದ್ದು ರೈತರು ನಷ್ಟಕ್ಕೆ ಒಳಗಾಗಿದ್ದಾರೆ.

ಇತ್ತ ಭತ್ತ ಖರೀದಿ ಮಾಡುವಂತೆ ಒತ್ತಾಯಿಸಿದರು ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶಗೊಂಎಉ ಇಂದು ನಾವು ಬನ್ನೂರು ಸಂತೆಮಾಳದ ಬಳಿ ಮೈಸೂರು – ಮಳವಳ್ಳಿ ಮುಖ್ಯ ರಸ್ತೆಗೆ ಭತ್ತ ಸುರಿದು, ಪ್ರತಿಭಟನೆ ನಡೆಸಿ ತಮ್ಮ ಗಮನ ಸೆಳೆಯುತ್ತಿದ್ದೇವೆ ಎಂದರು.

ಸರ್ಕಾರ ಭತ್ತ ಖರೀದಿ ಮಾಡದೆ ರೈತರನ್ನು ಬೀದಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ ಭತ್ತ, ರಾಗಿ, ಖಟಾವು ಪ್ರಾರಂಭವಾಗಿ ತಿಂಗಳೇ ಕಳೆದಿದ್ದರು ಖರೀದಿ ಮಾಡದೆ ಕಣ್ಣ ಮುಚ್ಚಾಲೆ ನಾಟಕವಾಡುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಸರ್ಕಾರಕ್ಕೆ ಚೆಲ್ಲಾಟ ರೈತರಿಗೆ ಪ್ರಾಣ ಸಂಕಟವಾಗಿದೆ ಎಂದು ಕಿಡಿಕಾರಿದರು.

ಅನ್ನದಾತ ರೈತ ಸಾಲ ಸೋಲ ಮಾಡಿ ಭತ್ತ ಬೆಳೆದಿದ್ದು ಸಾಲಗಾರರ ಕಿರುಕುಳ ಹಾಗೂ ಮಾನಕ್ಕೆ ಅಂಜಿ ಸರ್ಕಾರ ನಿಗದಿ ಪಡಿಸಿದ ಕ್ವಿಂಟಾಲ್‌ಗೆ 2320 ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಬಂಡವಾಳ ಶಾಹಿಗಳು, ರೈಸ್ ಮಿಲ್ ಮಾಲೀಕರು ಹಾಗೂ ಮಧ್ಯವರ್ತಿಗಲಿಗೆ ಕೇವಲ 2,000 ದಿಂದ 2,100 ರೂ.ಗಳಿಗೆ ಕಣದಲ್ಲೆ ಮಾರಾಟ ಮಾಡುತ್ತಿದ್ದಾರೆ.

ಹೀಗೆ ಮಾಡುತ್ತಿರುವುದರಿಂದ ಮತ್ತೆ ಸಾಲಕ್ಕೆ ಸಿಲುಕುತ್ತಿದ್ದಾರೆ. ವ್ಯಾಪಾರಸ್ಥರು ಶ್ರೀಮಂತರಾಗುತ್ತಿದ್ದಾರೆ. ರೈತರು ಮಾತ್ರ ಸಾಲಗಾರರಾಗಿಯೆ ಉಳಿದು ಸಾಲ ತೀರಿಸಲು ಸಾಧ್ಯವಾಗದೆ, ಇತ್ತ ಜೀವನ ನಡೆಸಲು ಆಗದೆ ಹೆಣಗಾಡಿ ಆತ್ಮಹತೆಗೆ ಶರಣಾಗುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಕೂಡ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಅನುಮಾನ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಸಮಸ್ಯೆಗಳ ಉಲ್ಬಣಕ್ಕೆ ಸರ್ಕಾರದಲ್ಲಿ ಕಠಿಣ ಕಾನೂನು ಕ್ರಮ ಇಲ್ಲದಿರುವುದೇ ಕಾರಣ. ರೈತರು ಬೆಳೆ ಬೆಳೆಯಲು ಮಾಡಿದ ಖರ್ಚಿನ ಹಣವು ಸಹ ಸಿಗದೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಇದನ್ನು ಕಂಡು ಕಾಣದಂತೆ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ವರ್ತಿಸುತ್ತಿರುವುದು ಸರಿಯಾದ ಕ್ರಮ ಅಲ್ಲ.

ರೈತನ ಹೊಗಳಿ ಮೊಸಳೆ ಕಣ್ಣೀರು ಸುರಿಸುವ ಬದಲು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ಬೆಳೆ ನಷ್ಟ ಪರಿಹಾರ ಕೊಡಿಸುವಂತಾಗಬೇಕು. ಈ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆ 2300 – 2320ರೂ.ಗಳ ಜೊತೆಗೆ 500 ರೂ. ಪ್ರೋತ್ಸಾಹ ಧನ ನೀಡಿ ಖರೀದಿ ಮಾಡಿ ಭತ್ತ ಬೆಳೆಗಾರ ರೈತರ ರಕ್ಷಣೆ ಮಾಡಬೇಕು. ಜತೆಗೆ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಮೋಕದಮ್ಮೆ ದಾಖಲಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಿ.ನರಸೀಪುರ ಉಪ ತಹಸೀಲ್ದಾರ್ ರೂಪ ಅವರ ಮೂಲಕ ಒತ್ತಾಯ ಪತ್ರ ಸಲ್ಲಿಸಿದ್ದು, ರೂಪ ಅವರು ನಿಮ್ಮ ಒತ್ತಾಯ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಬನ್ನೂರು ಸೂರಿ, ಕುರುಬೂರು ಸಿದ್ದೇಶ್, ಕುರುಬೂರು ಪ್ರದೀಪ್, ಹನುಮನಾಳು ಲೋಕೇಶ್, ಕುಂತನಹಳ್ಳಿ ಕುಳ್ಳೇಗೌಡ, ಸ್ವಾಮಿ, ಅತ್ತಹಳ್ಳಿ ಮಹೇಶ್, ಚೇತನ್, ರವಿ, ಚಾಮನಹಳ್ಳಿ ಕರಿಯಪ್ಪ, ಕೊಪ್ಪಲು ಕುಮಾರ್, ಮೆಡಿಕಲ್ ಮಹೇಶ್, ನಂದಿ ಸ್ಟೋರ್ ನಟೇಶ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು...