NEWSನಮ್ಮರಾಜ್ಯ

ಲಕ್ಷ್ಮಿ ಹೆಬ್ಬಾಳ್ಕರ್‌ ಕುರಿತು;‌ ಕೊಚ್ಚೆಗೆ ಕಲ್ಲೆಸೆದರೆ ಏನಾಗುತ್ತದೆ….

ಬೆಳಗಾವಿ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಒಬ್ಬರಿಗೊಬ್ಬರು ವಾಗ್ವಾದಕ್ಕೆ ಇಳಿದ ಘಟನೆಗೆ ಇಂದು ನಡೆದ ತಾಪಂ ಕೇಡಿಸಿ ಸಭೆ ಸಾಕ್ಷಿಯಾಯಿತು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಮ್ಮುಖದಲ್ಲೇ ಲಕ್ಷ್ಮಿ ಕೇಂದ್ರ ಸರ್ಕಾರವನ್ನು ಟೀಕಿಸಿದರು. 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಯಾರಿಗೆ ಎಷ್ಟು ಹಣ ಸಿಕ್ಕಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ನಡೆದದ್ದಿಷ್ಟು:  ನೀರು ಶುದ್ಧೀಕರಣ ಘಟಕದ ಬಗ್ಗೆ ಚರ್ಚೆ ನಡೆಯುವಾಗ ಮಧ್ಯಪ್ರವೇಶಿಸಿದ ಸಚಿವ ಅಂಗಡಿ ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರದ ಕಾರ್ಯಕ್ರಮ. ಅದು ಫೋಟೋ ಹಾಕಿಕೊಂಡ ಕಾರ್ಯಕ್ರಮವಷ್ಟೇ ಎಂದು ಕುಟುಕಿದರು. ಇದರಿಂದ ಸಿಟ್ಟಾದ ಶಾಸಕಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಮಾಡುವುದು ಬೇಡ ಆರೋಪ ಪ್ರತ್ಯಾರೋಪ ಬೇಡ ಎನ್ನುತ್ತಲೇ ಕಾಲೆಳೆದ ಲಕ್ಷ್ಮಿ ಪೆಟ್ರೋಲ್ ಪಂಪಲ್ಲಿ, ಸಿಲಿಂಡರ್‌ಗಳ ಮೇಲೆ ಫೋಟೋ ಹಾಕಿಸಿಕೊಳ್ಳುವವರು ಯಾರು ಎಂದು ತಿಳಿದಿದೆ ಎಂದರು.

ಅಷ್ಟೇ ಅಲ್ಲದೆ ನಾವು ಇರುವ ಉದ್ಯೋಗ ಉಳಿಸಿಕೊಳ್ಳಲು ಪ್ರಯತ್ನಿಸಿ ಎನ್ನುತ್ತಿದ್ದೇವೆ. ಆದರೆ ಎರಡು ಕೋಟಿ ಜನರಿಗೆ ನೌಕರಿ ಕೊಡ್ತೀವಿ ಎಂದು ನೀವು ಅಂದಿರಿ. ಅದು ಹೋಗಲಿ ಕೊರೊನಾದಿಂದ ಉಂಟಾದ ಲಾಕ್ ಟೌನ್ ಸಂದರ್ಭದಲ್ಲಿ ಶೇ. 46ರಷ್ಟು ನೌಕರರು ಕೆಲಸ ಕಳೆದುಕೊಂಡಿದ್ದಾರೆ ಅವರಿಗೆ ಉದ್ಯೋಗ ಕೊಡುವತ್ತ ಯೋಚಿಸಿ ಅದನ್ನು ಬಿಟ್ಟು ವ್ಯರ್ಥವಾಗಿ  ಸುಮ್ಮನೆ ಆರೋಪ ಪ್ರತ್ಯಾರೋಪ ಮಾಡಬೇಡಿ ಟೀಕಿಸಿದರು.

ಇನ್ನು ಹಸಿದ ಹೊಟ್ಟೆಗಳಿಗೆ ಅನ್ನ ಭಾಗ್ಯ, ಉದ್ಯೋಗ ಖಾತರಿ ಕೊಟ್ಟವರು ನಾವು. ಆಧಾರ್ ಕಾರ್ಡ್ ಪರಿಚಯಿಸಿದವರೂ ನಾವು. ಈಗ ನೀವು ಎಲ್ಲದಕ್ಕೂ ಆಧಾರ್ ಕಾರ್ಡನ್ನು ಹಿಡಿದುಕೊಂಡು ಓಡಾಡುತ್ತಿದ್ದೀರಿ. ಆರ್ ಟಿಒ ಆರ್ ಟಿಐ ಬಗ್ಗೆಯೂ ಮಾತನಾಡಬಹುದು. ಸುಮ್ಮನೆ ಚರ್ಚೆ ಬೇಡ ಎಂದು ಅಧಿಕಾರಿಗಳು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕುಟುಕಿದರು. ನಂತರ ಮೈಕ್‌ ಆಫ್‌ ಮಾಡಿ ಇಬ್ಬರು ವಾಗ್ವಾದದಲ್ಲಿ ತೊಡಗಿದರು.

ಸಭೆಯ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ರಮೇಶ್ ಜಾರಕಿ ಹೊಳಿ ಅವರ ಸರ್ಕಾರವನ್ನು ಅವರು ನಮ್ಮ ಸರ್ಕಾರವನ್ನು ನಾವು ಡಿಫೈನ್ ಮಾಡಿಕೊಳ್ಳುತ್ತೇವೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ. ಇನ್ನು ಹೇಳಬೇಕೆಂದರೆ ಆ ಶಾಸಕರಿಗೆ ಅನುಭವದ ಕೊರತೆ ಇದೆ. ಹೀಗಾಗಿ ಆಗೆಲ್ಲ ಮಾತನಾಡುತ್ತಾರೆ ಎಂದು ಲಕ್ಷ್ಮಿ ಅವರ ಬಗ್ಗೆ ಹೇಳಿದರು.

ಇಬ್ಬರು ಸಚಿವರ ಮುಂದೆಯೇ ಸವಾಲು ಹಾಕಿದರೂ ನೀವು ಪ್ರತಿಕ್ರಿಯೆ ನೀಡಿಲ್ಲವಲ್ಲ ಎಂಬ ಪ್ರಶ್ನೆಗೆ ಕೊಚ್ಚೆಯಲ್ಲಿ ಕಲ್ಲು ಎಸೆದರೆ ಏನಾಗುತ್ತದೆ ಎಂದು ಶಾಸಕರನ್ನು ರಮೇಶ್ ಜಾರಕಿ ಹೊಳಿ ಕೊಚ್ಚೆಗೆ ಹೋಲಿಸಿದರು.

ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಅದನ್ನು ಬಿಟ್ಟು ಸುಳ್ಳು ಸುಳ್ಳು ಪ್ರಚಾರ ಹೋಮ ಹವನಗಳನ್ನು ಮಾಡಿಸುವುದಿಲ್ಲ. ಅದಕ್ಕೆ ಜನರು ಮರುಳಾಗುವುದಿಲ್ಲ ಎಂದು ನಿನ್ನೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮಾಡಿಸಿದ ಪೂಜಾ ಕಾರ್ಯಕ್ರಮದ ಬಗ್ಗೆ ಟೀಕಿಸಿದರು.

ಇನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ ಕತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

Leave a Reply

error: Content is protected !!
LATEST
KSRTCಯ 4ನಿಗಮಗಳ ಸಾರಿಗೆ ನೌಕರರಿಗೆ ಶೇ.45ರಷ್ಟು ವೇತನ ಹೆಚ್ಚಳಕ್ಕೆ ವೇದಿಕೆ ಆಗ್ರಹ NWKRTC: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲಕನ ಕಾಲು ಮುರಿತ ಸಾರಿಗೆ ನೌಕರರು ಕರ್ತವ್ಯದ ವೇಳೆ ರೀಲ್ಸ್​ ಮಾಡಿದರೆ ಕೆಲಸದಿಂದ ವಜಾ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ಜು.22ರಂದು ಬೆಂವಿವಿಯ ಸಂವಹನ ವಿಭಾಗದ ಸುವರ್ಣ ಮಹೋತ್ಸವ- ರಾಷ್ಟ್ರೀಯ ಸಮ್ಮೇಳನ ಕಿರಿಯ ವಕೀಲರಿಗೆ ಗೌರವಾನ್ವಿತ ಸಂಬಳ ಕೊಡಿ: ಹಿರಿಯ ವಕೀಲರಿಗೆ ಸುಪ್ರೀಂ ಕೋರ್ಟ್‌ ಸಿಜೆ ಚಂದ್ರಚೂಡ್ ಕಿವಿ ಮಾತು ಬದಲಿ ಜಾಗದಲ್ಲಿ ಮನೆ ಕಟ್ಟಿಕೊಡ್ತೇವೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 24 ಗಂಟೆ ಉಚಿತ ವಿದ್ಯುತ್‌, ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ, ಯುವಕರಿಗೆ ಉದ್ಯೋಗ ಮಹಿಳೆಯರಿಗೆ ತಿ... ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೆ.ವೆಂಕಟೇಶ್ ಭೇಟಿ: ಮೃತ ಕುಟುಂಬಕ್ಕೆ ಸಾಂತ್ವನ ಪರಿಹಾರ ಧನ ವಿತರಣೆ ಗೊರೂರು ಜಲಾಶಯದಿಂದ 25ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ: ಇಂಜಿನಿಯರ್ ಆನಂದ್ ಶೈಕ್ಷಣಿಕ ಸಂಸ್ಥೆಗಳು ಶೇ. 25 ರಷ್ಟು ಸೇವಾ ಶುಲ್ಕ ಪಾವತಿಸಿ ಲಾಭ ಪಡೆಯಿರಿ: ತುಷಾರ್  ಗಿರಿನಾಥ್