NEWSನಮ್ಮರಾಜ್ಯವಿಜ್ಞಾನ

ಸಾರಿಗೆ ನೌಕರರಿಗೆ ವೇತನ ಕೊಡಲು ದುಡ್ಡಿಲ್ಲ ಆದರೆ ದುಂದುವೆಚ್ಚಕ್ಕೆ ಹಣ ಎಲ್ಲಿಂದ ಬರುತ್ತದೋ?

ಬಸ್​ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮುಖ್ಯ ಎನ್ನುವ ಸಚಿವ ಸವದಿಯವರಿಗೆ 1.30 ಲಕ್ಷ ನೌಕರರ ಜೀವನದ ಬಗ್ಗೆ ಕಾಳಜಿ ಏಕಿಲ್ಲ?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ವಿಶೇಷ
ಬೆಂಗಳೂರು: ಸಾರಿಗೆ ನೌಕರರಿಗೆ ವೇತನ ಕೊಡಲು ದುಡ್ಡಿಲ್ಲ. ಆದರೆ ದುಂದುವೆಚ್ಚ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹಣ ಎಲ್ಲಿಂದ ಬರುತ್ತದೋ? ನಮ್ಮ ಬಸ್​ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮುಖ್ಯ ಎನ್ನುವ ಸಚಿವ ಸವದಿಯವರಿಗೆ 1.30 ಲಕ್ಷ ನೌಕರರ ಜೀವನದ ಬಗ್ಗೆ ಕಾಳಜಿ ಏಕಿಲ್ಲ ಎಂದು ತಿಳಿಯುತ್ತಿಲ್ಲ.

ಹೌದು! ಕಳೆದ ಏಪ್ರಿಲ್‌ 7 ರಿಂದ 21ರವರೆಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮುಷ್ಕರ ನಡೆಸಿದರು ಎಂಬ ಈ ಏಕೈಕ ಕಾರಣವನ್ನಿಟ್ಟುಕೊಂಡು, ಏಪ್ರಿಲ್‌ನಲ್ಲಿ 00 ರೂ.ಗಳಿಂದ 3000 ರೂ.ಗಳವರೆಗೆ ವೇತನ ನೀಡಿ ನೌಕರರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಸಾರಿಗೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಅವರ ಆರ್ಥಿಕ ಸಮಸ್ಯೆ ಕಾಣುತ್ತಿಲ್ಲವೇ? ಒಂದು ವೇಳೆ ಕಾಣದೆಯೂ ಇರಬಹುದು? ಏಕೆಂದರೆ ಅವರಿಗೆ ಸೇರಬೇಕಾದ ವೇತನ ಪ್ರತಿ ತಿಂಗಳ 1ನೇ ತಾರೀಖಿಗೆ ಅವರವರ ಬ್ಯಾಂಕ್‌ ಖಾತೆಯಲ್ಲಿ ಜಮಾವಣೆಯಾಗುತ್ತದೆಯಲ್ಲ.

ಆದರೂ ಸಾರಿಗೆ ನೌಕರರನ್ನು ಒಂದು ರೀತಿ ಕತ್ತೆರೀತಿ ದುಡಿಸಿಕೊಳ್ಳುವ ಸಂಸ್ಥೆಯ ಅಧಿಕಾರಿಗಳು ಕಚೇರಿಗಳಲ್ಲೇ ಕುಳಿತುಕೊಂಡು ವೇತನ ಪಡೆಯುತ್ತಾರಲ್ಲ. ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ಬಸ್‌ಗಳೇ ರಸ್ತೆಗಿಳಿದಿಲ್ಲ ಎಂದರೆ ಕಚೇರಿಯಲ್ಲಿ ಇವರಿಗೇನು ಕೆಲಸವಿರುತ್ತದೆ, ರೂಟ್‌ ಹಾಕಬೇಕೆ? ಬಸ್‌ ಕೆಟ್ಟುಹೋಗಿದೆ ಅದನ್ನು ಸರಿಪಡಿಸಿ ಎಂದು ಹೇಳಬೇಕೆ? ನೌಕರ ರಜೆ ತೆಗೆದುಕೊಂಡಿದ್ದಾನೆ ಅವರ ಬದಲಿಗೆ ಬೇರೆ ನೌಕರರನ್ನು ಹಾಕಬೇಕು ಎಂಬ ರಿಸ್ಕ್‌ ಇದೆಯೇ? ಇಲ್ಲ ಡೀಸೆಲ್‌ ಹಾಕಬೇಕೆ? ಇದಾವುದು ಇಲ್ಲದಿದ್ದರೂ ಕಚೇರಿಯಲ್ಲಿ ಕೆಲಸಮಾಡುವವರಿಗೆ ಮಾತ್ರ ಹಾಜರಾತಿಯೋ ಇಲ್ಲ ಲಾಕ್‌ಡೌನ್‌ ಕಾರಣವನ್ನೋ ತೋರಿಸಿ ತಿಂಗಳ ವೇತನ ಬಿಡುಗಡೆಯಾಗುತ್ತದೆಯಲ್ಲ ಅದು ಹೇಗೆ? ಇದಕ್ಕೆ ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಮರ್ಥವಾದ ಉತ್ತರ ಕೊಡುವರೆ?

ಇದರ ನಡುವೆ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳಿಗೆ ಸರಿಯಾದ ವೇತನ ನೀಡುತ್ತಿಲ್ಲ. ಇದರಿಂದ ಮನೆ ಬಾಡಿಗೆ, ಸಂಸಾರ ನಿರ್ವಾಹಣೆ, ವಯಸ್ಸಾದ ಅಪ್ಪ ಅಮ್ಮನ ಆರೋಗ್ಯ ವೆಚ್ಚ ಭರಿಸುವುದು ಸೇರಿದಂತೆ ಪ್ರತಿಯೊಂದಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ನೌಕರರಿಗೆ ವೇತನ ಕೊಡಲು ಸಂಸ್ಥೆಯಲ್ಲಿ ಹಣವಿಲ್ಲ ಎಂಬ ಸಬೂಬು.

ಆದರೆ, ಸಾರ್ವಜನಿಕ ಸಾರಿಗೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್​ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆಗೆ ಹೆಜ್ಜೆ ಇಡಲಾಗಿದೆ. ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದರೂ ನಮ್ಮ ಸರ್ಕಾರಿ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ನಿನ್ನೆ ತಿಳಿಸಿದ್ದಾರೆ.

ಈ ಮೂಲಕ ಸಾರ್ವಜನಿಕರ ಹೆಸರೇಳಿಕೊಂಡು ಎಐ ಟೆಕ್ನಾಲಜಿ ಅಳವಡಿಸಲು ಮುಂದಾಗುತ್ತಿದ್ದಾರೆ. (ಇದರಲ್ಲಿ ಸಿಡಬ್ಲ್ಯುಎಸ್ ಎಂದರೆ ಕೊಲಿಜಿಯನ್ ವಾರ್ನಿಂಗ್ ಸಿಸ್ಟಮ್. ಡಿಡಿಎಸ್ ಎಂದರೆ ಡ್ರೈವರ್ ಡ್ರೋಜಿನೆಸ್ ಡಿಟೆಕ್ಷನ್ ಸಿಸ್ಟಮ್). ಈ ಎರಡು ಟೆಕ್ನಾಲಜಿಗಳನ್ನು ವಾಹನಗಳಲ್ಲಿ ಅಳವಡಿಸಲಾಗುವುದು. ಇದರಿಂದ ನಮ್ಮ ಬಸ್ಸಿನ ಸಮೀಪಕ್ಕೆ ಬರುವ ಇತರೆ ವಾಹನಗಳು ಹಾಗೂ ಚಾಲಕ ನಿದ್ರಿಸಿ ಡಿವೈಡರ್ ಕಡೆ ಹೋಗುವುದನ್ನು ಮತ್ತು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಂತಹ ಟೆಕ್ನಾಲಜಿ ಇದಾಗಿದೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಹಣ ಎಲ್ಲಿಂದ ಬರುತ್ತಿದೆ? ಯಾರು ಕೊಡುತ್ತಿದ್ದಾರೆ? ಈಗಾಗಲೇ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿದೆಯಲ್ಲ ಎಂಬ ಪ್ರಶ್ನೆಗೆ ಸಚಿವರು ಉತ್ತರಿಬೇಕಿದೆ.

ಇನ್ನು ಮುಂದುವರಿದು ಸಚಿವರು ವಿವರಿಸಿದ್ದು, ವಾಹನದ ಸಮೀಪಕ್ಕೆ ಬಂದಾಗ ಅಥವಾ ಚಾಲಕ ನಿದ್ರಿಸುತ್ತಿರುವಾಗ ಶಬ್ದ ಮಾಡಿ ಎಚ್ಚರಿಸುತ್ತದೆ. ಜೊತೆಗೆ ಕಂಟ್ರೋಲ್ ರೂಮ್ಗೆ ಮಾಹಿತಿ ರವಾನೆ ಮಾಡುತ್ತದೆ ಇದರಿಂದಾಗಿ ಚಾಲಕ ಸದಾ ಜಾಗರೂಕತೆಯಿಂದ ಇರುವಂತೆ ಮಾಡುವುದರ ಜೊತೆಗೆ ಅಪಘಾತ ಮತ್ತು ಅನಾಹುತಗಳನ್ನು ತಪ್ಪಿಸುವಂತಹ ಕೆಲಸ ಈ ಟೆಕ್ನಾಲಜಿಗಳು ಮಾಡುತ್ತವೆ ಎಂದಿದ್ದಾರೆ. ಅಂದರೆ ಇಲ್ಲಿ ಚಾಲಕರಿಗೆ ಜವಾಬ್ದಾರಿ ಇಲ್ಲ ಎಂದು ಸಚಿವರು ಹೇಳ ಹೊರಟಿದ್ದಾರೆಯೇ? ಇಲ್ಲ ಇನ್ನೇನನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೋ ಅವರೇ ಉತ್ತರಿಸಬೇಕು.

ಅಷ್ಟೇ ಅಲ್ಲದೆ ನಮಗೆ ನಮ್ಮ ಜನರ ಜೀವ ಮುಖ್ಯ. ಇದರಿಂದಾಗಿ ಅಪಘಾತ ರಹಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಟೆಕ್ನಾಲಜಿಗಳನ್ನು ಕರಾರಸಾ ನಿಗಮದ 1,044 ಬಸ್ಸುಗಳಿಗೆ ಮೊದಲು ಅಳವಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಾಹನಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತನೆ ಮಾಡಿದೆ ಎಂದು ತಿಳಿಸಿದ್ದಾರೆ. ಹೀಗೆ ಜನರ ಹೆಸರೇಳಿಕೊಂಡು ಸಂಸ್ಥೆ ಲಾಸ್‌ನಲ್ಲಿದ್ದರೂ, ಈ ಕೊರೊನಾ ಸಂಕಷ್ಟದಲ್ಲಿ ಈ ಟೆಕ್ನಾಲಜಿ ಅಳವಡಿಸುವ ಅವಶ್ಯವಿತ್ತೆ ಸಚಿವರಿಗೆ?…

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು