Please assign a menu to the primary menu location under menu

NEWSನಮ್ಮಜಿಲ್ಲೆ

BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆದಾಯ ಸಂಗ್ರಹಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಘಟಕ-2 ಮತ್ತೊಮ್ಮೆ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ಈ ಸಾಧನೆಗೆ ಕಾರಣರಾದ ಪ್ರತಿಯೊಬ್ಬ ಸಿಬ್ಬಂದಿಗೂ ಹೃದಯಪೂರ್ವಕ ಧನ್ಯವಾದ ಎಂದು ಘಟಕ ವ್ಯವಸ್ಥಾಪಕ ಕಾಂತರಾಜ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮೆಲ್ಲರ ಪರಿಶ್ರಮದಿಂದ ಘಟಕ-2 ನ.4ರಂದು 39.38 ಲಕ್ಷ ರೂಪಾಯಿ ಸಾರಿಗೆ ಆದಾಯ ಸಂಗ್ರಹಣೆ ಮಾಡಿ, ಆದಾಯ ಸಂಗ್ರಹಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಸಾಧನೆಗೆ ಕಾರಣರಾದ ಘಟಕದ ಸಮಸ್ತ ಸಿಬ್ಬಂದಿಗಳ ಶ್ರಮ ನಮ್ಮ ಅರಿವಿಗೆ ಬಂದಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಆರ್‌.ರಾಮಚಂದ್ರನ್‌ ಶ್ಲಾಘಿಸಿದ್ದಾರೆ.

ಇನ್ನು ಅ.30 ರಿಂದ ನ.4ರವರೆಗೆ ಸತತವಾಗಿ 6 ದಿನಗಳು KSRTC ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಹಗಲು-ರಾತ್ರಿ ಎನ್ನದೇ, 24X7 ಕರ್ತವ್ಯ ನಿರ್ವಹಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರ ಊರುಗಳಿಗೆ ತಲುಪಿಸಿ, ಅವರ ಖುಷಿಯಲ್ಲೇ ತಮಗಾಗುತ್ತಿದ್ದ ಆಯಾಸ, ನೋವನ್ನು ಮರೆತ ನಮ್ಮ ಪ್ರೀತಿಯ ಚಾಲಕರು ಹಾಗೂ ನಿರ್ವಾಹಕರ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಅನಂತಾನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಲ್ಲದೆ ತನ್ನ ಕುಟುಂಬದವರೊಂದಿಗೆ ದೀಪಾವಳಿ ಹಬ್ಬ ಆಚರಿಸದೇ, ಸಾರ್ವಜನಿಕರ ಸೇವೆಗೆ ನಿಂತ ನಿಮ್ಮ ನಿಲುವು ಇತರ ಇಲಾಖೆಯ ಸಿಬ್ಬಂದಿಗಳಿಗೆ ಮಾದರಿ. ಸತತ 6 ದಿನಗಳ ಕಾಲ ಸಾವಿರಾರು ಕಿಲೋ ಮೀಟರ್‌ ವಾಹನ ಚಾಲನೆ ಮಾಡಿದರೂ ಒಂದು ಸಣ್ಣ ಅಪಘಾತವಾಗದಂತೆ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ವಾಹನ ಚಾಲನೆ ಮಾಡಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಿದ ಚಾಲನಾ ಸಿಬ್ಬಂದಿಗಳ ಶ್ರಮಕ್ಕೆ ಬೆಲೆಕಟ್ಟಲಾಗದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇನ್ನು ಸರ್ಕಾರದ “ಶಕ್ತಿ” ಯೋಜನೆಯಿಂದಾಗಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಒತ್ತಡದ ನಡುವೆ ಯಾವುದೇ ದೂರುಗಳಿಗೆ ಅವಕಾಶ ನೀಡದೇ 39.38 ಲಕ್ಷ ರೂಪಾಯಿಗೂ ಹೆಚ್ಚು ಸಾರಿಗೆ ಆದಾಯ ಸಂಗ್ರಹಣೆ ಮಾಡಿದ ನಿರ್ವಾಹಕರು ಕೂಡ ತಮ್ಮ ಜವಾಬ್ದಾರಿಯನ್ನು ಅಚ್ಚಕಟ್ಟಾಗಿ ನಿಭಾಯಿಸಿದ್ದಾರೆ.

ವಾಹನಗಳು ಸಾವಿರಾರು ಕಿಮೀ ಕ್ರಮಿಸಿದರೂ ಒಂದು ಸಣ್ಣ ಅವಘಡವೂ ಆಗದಂತೆ ವಾಹನಗಳನ್ನು ಸಿದ್ಧಪಡಿಸಿ, ಮಾರ್ಗಾಚರಣೆಗೆ ನೀಡಿದ ಘಟಕದ ಸಮಸ್ತ ತಾಂತ್ರಿಕ ಸಿಬ್ಬಂದಿ ವರ್ಗದವರ ಶ್ರಮವನ್ನು ನಾವು ಮರೆಯುವಂತಿಲ್ಲ. ಜತೆಗೆ ಈ ಸಾಧನೆಗೆ ಕಾರಣರಾದ ಸಂಚಾರ ಶಾಖೆ, ತಾಂತ್ರಿಕ ಶಾಖೆ, ಚೀಟಿ ಶಾಖೆ, ಭದ್ರತಾ ಶಾಖೆ ಮತ್ತು AVLS ಸಿಬ್ಬಂದಿಗಳು ಈ ಸಾಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾಗಿದ್ದಾರೆ. ನಮ್ಮ ಘಟಕದ ಸಮಸ್ತ ಸಿಬ್ಬಂದಿಗಳ ಶ್ರಮದಿಂದ ನಾವು ಇಂದು ಆದಾಯ ಗಳಿಕೆಯಲ್ಲಿ ನಂ.1 ಸ್ಥಾನದಲ್ಲಿ ಇದ್ದೇವೆ ಎಂದು ಕಾಂತರಾಜ್‌ ತಿಳಿಸಿದ್ದಾರೆ.

ನಮ್ಮ ಈ ಶ್ರಮ ಸಾಧನೆಯನ್ನು ನೋಡಿಯಾದರೂ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಗಳು ಇನ್ನಾದರೂ ಸಮಸ್ತ ಅಧಿಕಾರಿಗಳು-ನೌಕರರ ಬೇಡಿಕೆಯಾಗಿರುವ 7ನೇ ವೇತನ ಆಯೋಗವನ್ನು ಅಳವಡಿಸಿ ಸರಿ ಸಮಾನ ವೇತನ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕೊಡಲು ಮನಸ್ಸು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್