CrimeNEWSನಮ್ಮರಾಜ್ಯ

BMTC- ಯಾರೋ ಸುಳ್ಳು ದೂರು ಕೊಟ್ಟ ಕೂಡಲೇ ನೌಕರರ ಅಮಾನತು ಮಾಡಬೇಡಿ: ಎಂಡಿಗೆ ರೂಪೇಶ್‌ ರಾಜಣ್ಣ ತಾಕೀತು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೊಂದ ಬಿಎಂಟಿಸಿ ಚಾಲಕರ ಪರವಾಗಿ ನಾವು ನಿಂತು ಹೋರಾಟ ಮಾಡಿ ಬೆಂಬಲ ನೀಡಿದ್ದೇವೆ ಎಂದು ಕರವೇಯ ರೂಪೇಶ್‌ ರಾಜಣ್ಣ ತಿಳಿಸಿದ್ದಾರೆ.

ಪ್ರಯಾಣಿಕ ಹರ್ಷ ಸಿನ್ಹ ಎಂಬ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬ ಇದೇ ಅ.1ರಂದು ಕನ್ನಡಿಗ ಬಿಎಂಟಿಸಿ ಕಂಡಕ್ಟರ್ ಅವರಿಗೆ ಬಸ್‌ನಲ್ಲೆ ಚಾಕುವಿನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ್ದು ಆ ನಿರ್ವಾಹಕರನ್ನು ವೈಟ್ ಫೀಲ್ಡ್ ನಲ್ಲಿರೋ ವೈದೇಹಿ ಆಸ್ಪತ್ರೆಗೆ ಸೇರಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಈ ಮಾಹಿತಿ ಪಡೆದು ಬುಧವಾರ ನಿರ್ವಾಹಕರ ಸಹಾಯಕ್ಕೆ ನಮ್ಮ ತಂಡದ ಜತೆಗೆ ತೆರಳಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು. ಆ ವೇಳೆ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದೂ ಸದ್ಯಕ್ಕೆ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ರೂಪೇಶ್‌ ರಾಜಣ್ಣ ತಿಳಿಸಿದ್ದಾರೆ.

ಇನ್ನು ನಿರ್ವಾಹಕರ ಸ್ಥಿತಿ ನೋಡಿದ ಮೇಲೆ ಅಲ್ಲಿಗೆ ಅಧಿಕಾರಿಗಳು ಯಾರು ಬರದಿರುವುದು ಗೊತ್ತಾಯಿತು. ಹೀಗಾಗಿ ಕಡೆಗೆ ಆತನಿಗೆ ನ್ಯಾಯ ಕೊಡಿಸಲು ನಾವು ಅಲ್ಲೇ ಇದ್ದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆಸ್ಪತ್ರೆಗೆ ಬರೋವರೆಗೂ ಬಿಡದೆ ಅಲ್ಲೇ ನಿಂತು ಅವರನ್ನು ಆಸ್ಪತ್ರೆಗೆ ಕರೆಸಿ ಆ ನೊಂದ ನಿರ್ವಾಹಕರ ನೋವಿಗೆ ಸ್ಪಂದಿಸಿದೆವು.

ಈ ವೇಳೆ ವ್ಯವಸ್ಥಾಪಕ ನಿರ್ದೇಶಕರು ಬಂದು ನಿರ್ವಾಹಕರ ಆರೋಗ್ಯ ವಿಚಾರಿಸಿದ್ದು ಅಲ್ಲದೆ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು. ಆ ಬಳಿಕ ನಮಗೆ ಸಮಾಧಾನವಾಯಿತು. ಇನ್ನು ಇಷ್ಟೇ ಅಲ್ಲ ಕೊನೆವೆರೆಗೂ ಆ ನಿರ್ವಾಹಕನ ಬೆಂಬಲಕ್ಕೆ ನಾವಿದ್ದೇವೆ ನೀವು ಯಾವುದಕ್ಕೂ ಹೆದರಬೇಡಿ ಎಂದು ನಿರ್ವಾಹಕನ ಪತ್ನಿ ಹಾಗೂ ಕುಟುಂಬದವರಿಗೆ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.

ಅಲ್ಲದೆ ಚಾಲನಾ ಸಿಬ್ಬಂದಿಗಳಿಗೆ ಆಗಿತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಹಾಗೂ ಯಾರೋ ಒಬ್ಬರು ದೂರು ಕೊಟ್ಟ ಕೂಡಲೇ ಅವರನ್ನು ಅಮಾನತು ಮಾಡದೆ ಸತ್ಯಾಸತ್ಯೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂಬುವುದು ಸೇರಿದಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಒತ್ತಾಯ ಪತ್ರ ನೀಡಿದ್ದಾರೆ.

ಅದರಲ್ಲಿ ಪ್ರಮುಖವಾಗಿ 1) ಗಾಯಗೊಂಡಿರೋ ನಿರ್ವಾಹಕ ಆರೋಗ್ಯವಾಗಿ ಹೊರಬರುವವರೆಗೂ ಆತನ ಸಂಪೂರ್ಣ ಜವಾಬ್ದಾರಿ ಸಂಸ್ಥೆಗೆ ಸೇರಿದ್ದು. 2) ಆತ ಹುಷಾರಾಗಿ ವಾಪಸ್ ಕೆಲಸಕ್ಕೆ ಹಿಂದಿರುಗುವವರೆಗೂ ಆತನಿಗೆ ಸಂಬಳ ನೀಡಬೇಕು.

3) ಇನ್ನುಮುಂದೆ ಯಾವುದೇ ಕಂಡಕ್ಟರ್ ಹಾಗೂ ಡ್ರೈವರ್‌ಗಳಿಗೆ ಈ ರೀತಿ ಆಗದಂತೆ ಮುಂಜಾಗ್ರತೆ ವಹಿಸಿ ವಿಶೇಷ ಯೋಜನೆಗಳ ಮೂಲಕ ಅವರ ರಕ್ಷಣೆ ಮಾಡಬೇಕು.

4) ಅನ್ಯಭಾಷಿಕರು ಅನನವಶ್ಯಕವಾಗಿ ಕನ್ನಡಿಗ ಡ್ರೈವರ್ ಹಾಗೂ ನಿರ್ವಾಹಕರ ಜತೆ ಜಗಳ ತೆಗೆದು ಸುಳ್ಳು ವಿಡಿಯೋ ಮಾಡಿ ದೂರು ಕೊಟ್ಟ ಕೊಡಲೇ ಅಮಾನತು ಮಾಡಬಾರದು. ಈ ಮೊದಲು ಈ ರೀತಿ ಹಲವಾರು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದು ಇನ್ನುಮುಂದೆ ಯಾರಾದ್ರೂ ಈ ರೀತಿ ಸುಳ್ಳು ವಿಡಿಯೋ ತೆಗೆದು ಕೊಟ್ಟರೆ ದಿಢೀರ್ ಎಂದು ನಮ್ಮ ಚಾಲಕರು ಹಾಗೂ ನಿರ್ವಾಹಕರ ಮೇಲೆ ಕ್ರಮ ತೆಗೆದುಕೊಳ್ಳದೆ ಪರಿಶೀಲನೆ ಮಾಡಿ ನಂತರ ಕ್ರಮಕ್ಕೆ ಮುಂದಾಗಬೇಕು.

5) ಬಿಎಂಟಿಸಿ ಎಲ್ಲ ಬಸ್‌ಗಳ ಮೇಲೆ ಹಾಕುವ ಜಾಹೀರಾತುಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಬೇಡಿಕೆಗಳಿಗೆ ಒತ್ತಾಯ ಮಾಡಿದ್ದು ಎಂಡಿ ಚಂದ್ರಶೇಖರನ್‌ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ನಾಯಿ ಕೊಡೆಯಂತೆ ಸಾರಿಗೆ ನಿಗಮಗಳಲ್ಲಿ ಹುಟ್ಟಿಕೊಂಡಿರುವ 38 ಸಂಘಟನೆಗಳ ಮುಖಂಡರು ಈ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ. ಈವರೆಗೂ ಕಿಡಿಗೇಡಿಗಳು ನೌಕರರ ಮೇಲೆ ಮಾಡಿರುವುದನ್ನು ಏಕೆ ಖಂಡಿಸಿಲ್ಲ. ಜತೆಗೆ ಅಧಿಕಾರಿಗಳು ನೌಕರರ ಆರೋಗ್ಯ ವಿಚಾರಿಸದಿದ್ದಾಗ ಅವರು ಏಕೆ ಸ್ಥಳಕ್ಕೆ ಕರೆಸಿಕೊಂಡು ಈ ರೂಪೇಶ್‌ ರಾಜಣ್ಣ ಅವರ ರೀತಿ ಕ್ಲಾಸ್‌ ತೆಗೆದುಕೊಂಡಿಲ್ಲ ಎಂದು ನೌಕರರು ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಅಲ್ಲದೆ ಇನ್ನು ಮುಂದಾದರೂ ಈ ರೀತಿ ಘಟನೆಗಳು ನಡೆದಾಗ ಹಲ್ಲೆಗೊಳಗಾದ ನೌಕರರ ಪರ ನಿಂತು ಅವರ ಕುಟುಂಬದವರಿಗೆ ಧೈರ್ಯ ತುಂಬುಬ ಜತೆಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಅಧಿಕಾರಿಗಳಿಗೆ ಬೆವರಿಳಿಸುವ ಕೆಲಸ ಮಾಡಿ ಎಂದು ನೌಕರರು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ! KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ