Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಮಹಿಳಾ ಕಂಡಕ್ಟರ್‌ಗಳಿಗೆ 20ನೇ ಘಟಕದಲ್ಲಿ ಡ್ಯೂಟಿ ರೋಟಾ ಸಮಸ್ಯೆ – ಇಷ್ಟವಿಲ್ಲದ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು ಎಂಬ ಷರತ್ತು

ನಾಳೆ ಫೆ.2ರಂದು ಮಧ್ಯಾಹ್ನ 1 ಗಂಟೆಗೆ ಡ್ಯೂಟಿ ರೋಟಾ ಆಯ್ಕೆ ಕೌನ್ಸಿಲಿಂಗ್‌

ವಿಜಯಪಥ ಸಮಗ್ರ ಸುದ್ದಿ
  • ಎಲ್ಲ ಘಟಕಗಳಲ್ಲೂ ಒಂದೇ ನಿಯಮ ಆದರೆ 20ನೇ ಘಟಕದಲ್ಲಿ ಮಾತ್ರ ಉಲ್ಟಾ ನಿಯಮ
  • ಯಾರದೋ ಮಾತು ಕೇಳಿ ನಿಯಮ ಮೀರಿ ನಡೆದುಕೊಳ್ಳುತ್ತಿದ್ದಾರ ಘಟಕ ಮಟ್ಟದ ಅಧಿಕಾರಿಗಳು?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬನಶಂಕರಿಯಲ್ಲಿರುವ 20ನೇ ಘಟಕದಲ್ಲಿ ನಿರ್ವಾಹಕಿಯರಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಅನಾನುಕೂಲ ಮಾಡುವ ಉದ್ದೇಶದಿಂದ ಕೌನ್ಸಿಲಿಂಗ್‌ನಲ್ಲಿ ಮಾರ್ಗಗಳ ಆಯ್ಕೆಯನ್ನು ಬ್ಲಾಕ್‌ ಮಾಡುವ ಮೂಲಕ ಇಷ್ಟಬಂದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಧಿಕಾರಿಗಳು ತಡೆ ನೀಡಿದ್ದಾರೆ.

ಬಿಎಂಟಿಸಿ ನಿರ್ವಾಹಕಿಯರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಮಾರ್ಗಗಳ ಆಯ್ಕೆ ಮಾಡಿಕೊಳ್ಳುವ ಅದರಲ್ಲೂ ಸೇವಾ ಹಿರಿತನದ ಮೇರೆಗೆ ಸಂಸ್ಥೆ ಕೌನ್ಸಿಲಿಂಗ್‌ ಜಾರಿ ಮಾಡಿದೆ. ಹೀಗಾಗಿ ನಿಗಮದ ಎಲ್ಲ ಘಟಕಗಳಲ್ಲೂ ನಿರ್ವಾಹಕಿಯರಿಗೆ ಮೊದಲ ಆದ್ಯತೆ ನೀಡಿದೆ.

ಅದರಂತೆ ಸೇವಾ ಹಿರಿತನದ ಆಧಾರದ ಮೇರೆಗೆ ನಿರ್ವಾಹಕಿಯರು ತಮಗೆ ಇಷ್ಟವಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ 20ನೇ ಘಟಕದಲ್ಲಿ ನಿರ್ವಾಹಕಿಯರಿಗೆ ಈ ರೀತಿ ಸೇವಾ ಹಿರಿತನದ ಮೇಲೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮೊಟಕುಗೊಳಿಸಿ ಇಂತಿಷ್ಟೇ ಮಾರ್ಗಗಳಲ್ಲೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ ಉಳಿದ ಮಾರ್ಗಗಳನ್ನು ನಿರ್ವಾಹಕರಿಗೆ ಅವರಿಗಿಷ್ಟ ಬಂದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದ್ದಾರೆ.

ಆದರೆ, ಈ ರೀತಿಯ ನಿಯಮ ಯಾವುದೇ ಘಟಕಗಳಲ್ಲೂ ಇಲ್ಲ. ಮೊದಲು ಮಹಿಳಾ ಕಂಡಕ್ಟರ್‌ಗಳು ಆಯ್ಕೆ ಮಾಡಿಕೊಂಡ ಬಳಿಕ ಪುರುಷ ಕಂಡಕ್ಟರ್‌ಗಳು ಉಳಿದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ನಿಯಮವಿದ್ದು ಅದರಂತೆ ಎಲ್ಲ ಘಟಕಗಳಲ್ಲೂ ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಅದು ಏಕೋ ಗೊತ್ತಿಲ್ಲ 20ನೇ ಘಟಕದಲ್ಲಿ ಮಾತ್ರ ಈ ನಿಯಮಕ್ಕೆ ವಿರುದ್ಧವಾದ ಷರತ್ತನ್ನು ಮಾಡಿಕೊಂಡು ಮಹಿಳಾ ಕಂಡಕ್ಟರ್‌ಗಳನ್ನು ಕಡೆಗಣಿಸುವ ನಿಟ್ಟಿನಲ್ಲಿ ಅದರಲ್ಲೂ 3+2 ಸೀಟುಗಳಿರುವ ವಾಹನಗಳು ಹೆಚ್ಚಾಗಿ ಓಡಾಡುವ ಮಾರ್ಗಗಳನ್ನೇ ನಿರ್ವಾಹಕಿಯರು ಆಯ್ಕೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ ನಾಳೆ ಫೆ.2ರಂದು ಕೌನ್ಸಿಲಿಂಗ್‌ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದರಿಂದ ಕರ್ತವ್ಯ ನಿರತ ಗರ್ಭಿಣಿಯರು ಮತ್ತು ಮಾಸಿಕ ಋತು ಸಮಯದಲ್ಲಿ ಪ್ರಕೃತಿದತ್ತವಾದ ಹೊಟ್ಟೆನೋವಿನಿಂದ ಬಳಲುವ ನಿರ್ವಾಹಕಿಯರಿಗೆ ಇದರಿಂದ ತುಂಬ ಸಮಸ್ಯೆ ಆಗುತ್ತದೆ. ಇದಾವುದನ್ನು ಯೋಚಿಸದೆ ಈ ರೀತಿ ನಿರ್ವಾಹಕಿಯರಿಗೆ ಅನಾನುಕೂಲ ಆಗುವಂತ ಮಾರ್ಗಗಳನ್ನು ಮೀಸಲಿಟ್ಟಿರುವುದು ಸರಿಯಲ್ಲ ಎಂದು ಘಟಕದ ನಿರ್ವಾಹಕಿಯರು ಘಟಕ ವ್ಯವಸ್ಥಾಪಕರ ಬಳಿ ಅಳಲು ತೋಡಿಕೊಂಡಿದ್ದಾರೆ.

ಈ ವೇಳೆ ನಮಗೆ ಈ ಹಿಂದೆ ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಇದ್ದ ನಿಯಮದಂತೆಯೇ ನಮಗಿಚ್ಛೆಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಡಿಎಂ ಇದು ಕಷ್ಟಸಾಧ್ಯ ಎಂದು ಹೇಳಿರುವುದಾಗಿ ನಿರ್ವಾಹಕರಿಯರು ವಿಜಯಪಥಕ್ಕೆ ತಿಳಿಸಿದ್ದಾರೆ.

ಅಲ್ಲದೆ ಈ ಸಂಬಂಧ ನಾಳೆ ಡಿಎಂ ಅವರು ಈ ಹಿಂದೆ ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಇದ್ದ ನಿಯಮದಂತೆಯೇ ನಮಗಿಚ್ಛೆಗನುಗುಣವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡದಿದ್ದರೆ ನಾವು ವಿಭಾಗೀಯ ನಿಯಂತ್ರಣಾಧಿಕಾರಿಗಳ ಬಳಿಗೇ ಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಏಕೋ ಗೊತ್ತಿಲ್ಲ ಸಾರಿಗೆ ನಿಗಮಗಳಲ್ಲಿ ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ನಿಯಮಗಳು ಬದಲಾಗುತ್ತಿರುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಈ ಮಾಹಿತಿ ತಿಳಿದರೂ ಸುಮ್ಮನಿರುತ್ತಾರೋ ಅಥವಾ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದ್ದಾರೋ ಎಂಬುವುದೇ ತಿಳಿಯುತ್ತಿಲ್ಲ.

Leave a Reply

error: Content is protected !!
LATEST
ಹೆಂಡತಿ, ಮಾವನ ಕಾಟ: ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೇಬಲ್ ಆತ್ಮಹತ್ಯೆ 9 ಸಾವಿರ ರೂ. ಲಂಚ ಪ್ರಕರಣ: ಪಿಡಿಒಗೆ 3 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ KSRTC ತುಮಕೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಚಾಲಕನಿಗೆ ಧೈರ್ಯ ತುಂಬಿದ ಡಿಸಿ, ಅಧಿಕಾರಿಗಳು KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ ಸರ್ಕಾರದ ನಡೆಯೇ  BMTC ಆರ್ಥಿಕವಾಗಿ ಕುಸಿಯಲು ಕಾರಣ: ವರದಿ ಕೊಟ್ಟ CAG KSRTC ಕುಣಿಗಲ್‌: ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದಿರುವುದಕ್ಕೆ ಮನನೊಂದ ಚಾಲಕ ಆತ್ಮಹತ್ಯೆಗೆ ಯತ್ನ KSRTC: ಈ ಅಧಿವೇಶನದಲ್ಲಾದರೂ ಸಿಎಂ ಸರಿ ಸಮಾನ ವೇತನ ಬಗ್ಗೆ ದಿಟ್ಟ ಹೆಜ್ಜೆ ಇಡಲಿ BMTC: ಆಧಾರ್‌ ಕಾರ್ಡ್‌ ಯಾವ ಭಾಷೆಯಲ್ಲೇ ಇರಲಿ ಕರ್ನಾಟಕದ ವಿಳಾಸವಿದ್ದರೆ ಉಚಿತ ಪ್ರಯಾಣ ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ