NEWSನಮ್ಮಜಿಲ್ಲೆನಮ್ಮರಾಜ್ಯ

BMTC: ₹42 ಸಾವಿರ ಬದಲಿಗೆ ₹20 ಸಾವಿರ ವೇತನ ಹಾಕಿದ್ದಕ್ಕೆ ಸಿಟ್ಟಿಗೆದ್ದ ಎಲೆಕ್ಟ್ರಿಕ್‌ ಬಸ್‌ ಚಾಲಕರು – ಬಸ್‌ನಿಲ್ಲಿಸಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಎಲೆಕ್ಟ್ರಿಕ್‌ ಬಸ್‌ ಚಾಲಕರು ಕಡಿಮೆ ವೇತನ ಪಾವತಿ ಮಾಡಲಾಗಿದೆ ಎಂದು ಬುಧವಾರ ಬಸ್‌ಗಳನ್ನು ಅರ್ಧದಲ್ಲೇ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಾರೆ.

ನಮಗೆ ಸರಿಯಾಗಿ ತಿಂಗಳಿಗೆ ವೇತನ ಆಗುತ್ತಿಲ್ಲ. ಜತೆಗೆ ನಾವು ಡ್ಯೂಟಿ ಮತ್ತು ಓಟಿ ಸೇರಿ (8ಗಂಟೆ ಡ್ಯೂಟಿ ಮತ್ತು 8ಗಂಟೆ ಓಟಿ) ಅಂದರೆ ತಿಂಗಳಲ್ಲಿ 40-42 ಸಾವಿರ ರೂ. ವರೆಗೆ ದುಡಿದ್ದೇವೆ. ಆದರೆ ನಮಗೆ ಸುಮಾರು 42 ಸಾವಿರ ರೂಪಾಯಿ ಕೊಡುವ ಬದಲಿಗೆ ಕೇವಲ 18-20 ಸಾವಿರ ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಈ ಪುರುಷಾರ್ಥಕ್ಕೆ ನಾವು ಡ್ಯೂಟಿ ಏಕೆ ಮಾಡಬೇಕು ಎಂದು ಘಟಕ – 3ರಲ್ಲಿ ಪ್ರತಿಭಟನೆ ನಡೆಸಿದರು.

ಸುಮಾರು 180 ಮಂದಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ನಿತ್ಯ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ನೇಮಕ ಮಾಡಿಕೊಳ್ಳುವಾಗ ತಿಂಗಳಿಗೆ 22 ಸಾವಿರ ರೂಪಾಯಿ ವೇತನ ಇತರ ಭತ್ಯೆಗಳನ್ನು ಕೊಡಲಾಗುವುದು ಎಂದು ಹೇಳಿದ್ದರು. ಜತೆಗೆ ಓಟಿ ಮಾಡಿದರೆ ನೀವು ಡಬಲ್‌ ವೇತನ ಪಡೆಯಬಹುದು ಎಂದಿದ್ದರು.

ಆದರೆ, ಈಗ ನಮಗೆ ಡಬಲ್‌ ವೇತನವಿರಲಿ 22 ಸಾವಿರ ಕೊಡುತ್ತೇವೆ ಎಂದು ಹೇಳಿದ್ದನ್ನು ಸರಿಯಾಗಿ ಕೊಡದೆ ಅದರಲ್ಲೂ 4ರಿಂದ 8 ಸಾವಿರ ರೂಪಾಯಿವರೆಗೆ ಕಟ್‌ ಮಾಡಿಕೊಂಡು ಬಿಡಿಗಾಸುಕೊಡುತ್ತಿದ್ದಾರೆ ಎಂದು ಡಿಪೋ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೀವು ಕೊಡುವ ವೇತನವನ್ನು ನಾವು ತಿಂಗಳಲ್ಲಿ 15 ದಿನಗಳು ಖಾಸಗಿ ವಾಹನಗಳನ್ನು ಓಡಿಸಿಕೊಂಡಿ ಇನ್ನು 15 ದಿನ ಮನೆಯಲ್ಲೇ ಇದ್ದುಕೊಂಡೇ ತೆಗೆದುಕೊಳ್ಳುತ್ತೇವೆ. ನಿಮ್ಮ ಸಹವಾಸವೇ ಬೇಡ ಎಂದು ಡ್ಯೂಟಿ ಮೇಲೆ ಇದ್ದ ಕೆಲ ಚಾಲಕರು ಅರ್ಧದಲ್ಲೇ ಬಸ್‌ ನಿಲ್ಲಿಸಿ ಮನೆಗೆ ಹೋದರು. ಇದರಿಂದ ಕೆಂಪೇಗೌಡ ಬಸ್‌ ನಿಲ್ದಾಣದಲ್ಲೇ ಸುಮಾರು 15 ಬಸ್‌ಗಳು ನಿಂತಿದ್ದವು.

ಈ ನಡುವೆ ಡಿಪೋ ಮುಂದೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿ ನಮಗೆ ಡ್ಯೂಟಿ ಜತೆಗೆ ಓಟಿ ಮಾಡಿರುವ ವೇತನವನ್ನು ಕೊಡಲೇಬೇಕು ಎಂದು ಒತ್ತಾಯಿಸಿ ಮಧ್ಯಾಹ್ನ 12ಗಂಟೆಯಿಂದ ಸಂಜೆ 5 ಗಂಟೆವರೆಗೂ ಪ್ರತಿಭಟನೆ ಮಾಡಿದರು. ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮ್ಮ ಸಮಸ್ಯೆಯನ್ನು ಸಂಬಂಧಪಟ್ಟವರಿಗೆ ತಿಳಿಸಿ 2-3ದಿನದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಕೆಲ ಚಾಲಕರು ಒಪ್ಪಿ ಬಸ್‌ಗಳನ್ನು ಮಾರ್ಗದ ಮೇಲೆ ತೆಗೆದುಕೊಂಡು ಹೋದರೆ ಇನ್ನು ಕೆಲ ಚಾಲಕರು ಸಮಸ್ಯೆ ಬಗೆಹರಿದ ಮೇಲೆಯೇ ನಾವು ಡ್ಯೂಟಿಗೆ ಬರುತ್ತೇವೆ ಎಂದು ಹೋದರು. ಇದರಿಂದ ಬುಧವಾರ ಸಂಜೆ 106 ಬಸ್‌ಗಳಿರುವ ಡಿಪೋನಿಂದ ಕೇವಲ 30 ಬಸ್‌ಗಳಷ್ಟೇ ಕಾರ್ಯಾಚರಣೆಗೆ ಹೋದವು.

ಇನ್ನು ಎಲೆಕ್ಟ್ರಿಕ್‌ ಬಸ್‌ ಚಾಲಕರಿಗೆ ಸರಿಯಾದ ವೇತನ ಕೊಡದೆ ಈಗಾಗಲೇ ಹಲವಾರು ಮಂದಿ ಚಾಲಕರು ತಮ್ಮ ಕೆಲಸವನ್ನು ಬಿಟ್ಟುಹೋಗಿದ್ದಾರೆ. ಪ್ರಸ್ತುತ ಡಿಪೋನಲ್ಲಿ 106 ಎಲೆಕ್ಟ್ರಿಕ್‌ ಬಸ್‌ಗಳಿದ್ದು, 180 ಮಂದಿ ಚಾಲಕರಿದ್ದಾರೆ. ಈಗ ಅವರಲ್ಲೂ ಕೆಲವರು ಬಿಟ್ಟು ಹೋಗಿರುವುದರಿಂದ ದಿನಕ್ಕೆ 25ರಿಂದ 30 ಬಸ್‌ಗಳಷ್ಟೆ ಮಾರ್ಗಚರಣೆ ಮಾಡುತ್ತಿವೆ ಎಂದು ಚಾಲಕರೊಬ್ಬರು ಹೇಳಿದ್ದಾರೆ.

ಎಲೆಕ್ಟ್ರಿಕ್ ಬಸ್‌ಗಳ ಕಂಪನಿಗೆ ಬಿಎಂಟಿಸಿ ಹಣವನ್ನು ಪಾವತಿಸಿಲ್ಲವೋ ಅಥವಾ ಬಿಎಂಟಿಸಿಗೆ ಬರುತ್ತಿರುವ ಎಲೆಕ್ಟ್ರಿಕ್ ಬಸ್‌ಗಳ ಆದಾಯ ಕಡಿಮೆಯಾಗಿದೆಯೋ ಗೊತ್ತಿಲ್ಲ, ಬಸ್‌ಗಳ ಚಾಲಕರು ತಮಗೆ ಸರಿಯಾದ ಸಂಬಳವಾಗಿಲ್ಲ ಎನ್ನುವ ಅಂಶವನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಬಿಎಂಟಿಸಿ ಆಡಳಿತಕ್ಕೆ ತೀವ್ರ ಮುಜುಗರ ಉಂಟಾಗುತ್ತಿದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ