CrimeNEWSನಮ್ಮಜಿಲ್ಲೆ

BMTC: ಟಿಕೆಟ್‌ ತೆಗೆದುಕೊಳ್ಳದೆ ನಿರ್ವಾಹಕರ ಕಪಾಳಕ್ಕೆ ಹೊಡೆದ ಮಹಿಳೆ – ಆದರೂ ಆಕೆ ವಿರುದ್ಧ ಕ್ರಮ ತೆಗೆದುಕೊಳ್ಳದ ಸಂಸ್ಥೆ ನೌಕರನನ್ನೇ ಅಮಾನತು ಮಾಡಿದೆ !!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಬಸ್‌ ಹತ್ತಿದ ಮಹಿಳೆಯರು ರಾಜ್ಯದವರೇ ಎಂದು ಖಚಿತಪಡಿಸಿಕೊಳ್ಳುವುದಕ್ಕೆ ಆಧಾರ್‌ ಕಾರ್ಡ್‌ ಸೇರಿದಂತೆ ಇತರ ಐಡಿ ಕಾರ್ಡ್‌ ತೋರಿಸಿ ಉಚಿತ ಟಿಕೆಟ್‌ ಪಡೆದುಕೊಳ್ಳಬೇಕು.

ಆದರೆ, ಕೆಲ ಮಹಿಳೆಯರು ಹೊರರಾಜ್ಯದವರಾಗಿದ್ದರೂ ಉಚಿತ ಟಿಕೆಟ್‌ ಪಡೆದುಕೊಳ್ಳುವುದಕ್ಕೆ ಯತ್ನಿಸುತ್ತಾರೆ. ಈ ವೇಳೆ ನಿರ್ವಾಹಕರು ಆಧಾರ್‌ ಕಾರ್ಡ್‌ ಇತರ ನಿಮ್ಮ ಐಡಿ ತೋರಿಸಿ ಎಂದರೆ ಅವರು ತೋರಿಸುವುದಿಲ್ಲ. ಕೊನೆಗೆ ಕಂಡಕ್ಟರ್‌ ವಿರುದ್ಧವೇ ತಿರುಗಿ ಬಿದ್ದು ನಿಂದಿಸುತ್ತಾರೆ. ಜತೆಗೆ ಹಲ್ಲೆಯನ್ನು ಮಾಡುತ್ತಾರೆ.

ಹೌದು! ಅಂಥ ಘಟನೆಯೊಂದು ನಿನ್ನೆ ಅಂದರೆ ಮಂಗಳವಾರ (ಮಾ.26) ಬಿಎಂಟಿಸಿ ಬಸ್‌ನಲ್ಲಿ ನಡೆದಿದ್ದು, ಆಧಾರ್‌ ಕಾರ್ಡ್‌ ತೋರಿಸಿ ಉಚಿತ ಟಿಕೆಟ್‌ ಪಡೆದುಕೊಳ್ಳುವಂತೆ ಕಂಡಕ್ಟರ್‌ ಮನವಿ ಮಾಡಿದ್ದಾರೆ. ಆದರೆ, ಎರಡು ನಿಲ್ದಾಣಗಳು ಕಳೆದರೂ ಆಕೆ ಆಧಾರ್‌ ಕಾರ್ಡ್‌ ತೋರಿಸಿ ಟಿಕೆಟ್‌ ಪಡೆದುಕೊಂಡಿಲ್ಲ. ಇನ್ನು ಸ್ಟೇಜ್‌ ಬಂದಿದೆ ಆಧಾರ್‌ ಕಾರ್ಡ್‌ ತೋರಿಸಿ ಇಲ್ಲ ಹಣ ಕೊಟ್ಟು ಟಿಕೆಟ್‌ ಪಡೆದುಕೊಳ್ಳಿ ಎಂದು ಮಹಿಳೆಗೆ ಕಂಡಕ್ಟರ್‌ ಮನವಿ ಮಾಡಿದ್ದಾರೆ.

ಆದರೆ, ಆ ಮಹಿಳೆ ಆಧಾರ್‌ ಕಾರ್ಡ್‌ಅನ್ನು ತೋರಿಸಿಲ್ಲ. ಹಣ ಕೊಟ್ಟು ಟಿಕೆಟ್‌ ಪಡೆದುಕೊಳ್ಳುವುದಕ್ಕೂ ರೆಡಿಯಿಲ್ಲ. ಈ ನಡುವೆ ಕಂಡಕ್ಟರ್‌ ಹಣ ಕೊಟ್ಟು ಟಿಕೆಟ್‌ ಪಡೆದುಕೊಳ್ಳಿ ಎಂದು ಹೇಳಿದಕ್ಕೆ ಆಕೆ ನಿರ್ವಾಹಕರ ಕಪಾಳಕ್ಕೆ ಹೊಡೆಯುತ್ತಾಳೆ. ಈ ವೇಳೆ ತಾಳ್ಮೆ ಕಳೆದುಕೊಂಡ ಕಂಡಕ್ಟರ್‌ ಕೂಡ ಆಕೆಗೆ ಬಾರಿಸುತ್ತಾರೆ.

ಇಲ್ಲಿ ಕಂಡಕ್ಟರ್‌ ತಪ್ಪೇನಿದೆ. ಆದರೂ ಮಹಿಳೆ ಮೇಲೆ ಕೈ ಮಾಡಿದ್ದು ತಪ್ಪು ಎಂದು ಹೇಳಿ ಬಿಎಂಟಿಸಿ ನಿಗಮ ನಿರ್ವಾಹಕರನ್ನು ಕೂಡಲೇ ಅಮಾನತು ಮಾಡಿ ಆದೇಶ ಹೊರಡಿಸಿದೆ. ಜತೆಗೆ ಪೊಲೀಸ್‌ ಠಾಣೆಯಲ್ಲೂ ಎಫ್‌ಐಆರ್‌ ದಾಖಲಾಗಿದ್ದು, ಈಗಾಗಲೇ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿ ಹೆಣ್ಣು ಗಂಡು ಇಬ್ಬರು ಸಮಾನರು ಎಂದು ಹೇಳುವ ಸಂಸ್ಥೆ ಆಕೆ ಟಿಕೆಟ್‌ ಪಡೆದುಕೊಳ್ಳದೆ ಕರ್ತವ್ಯ ನಿರತ ಕಂಡಕ್ಟರ್‌ ಮೇಲೆ ಕೈ ಮಾಡಿರುವುದಕ್ಕೆ ಏಕೆ ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಆಕೆ ವಿರುದ್ಧ ನಿಗಮದ ಕಾನೂನು ವಿಭಾಗದ ಅಧಿಕಾರಿಗಳು ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ಠಾಣೆಯಲ್ಲಿ ಕೂಡಲೇ ದೂರು ಕೊಡಬೇಕಿತ್ತು. ಆದರೆ ಅದನ್ನು ಬಿಟ್ಟು ಕಂಡಕ್ಟರ್‌ ತಪ್ಪು ಮಾಡಿದ್ದಾರೆ ಎಂದು ಅವರನ್ನು ಕೂಡಲೇ ಅಮಾನತು ಮಾಡಿರುವುದು ಎಷ್ಟು ಸರಿ.

ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಟಿಕೆಟ್‌ ಪಡೆದುಕೊಳ್ಳದೆ ಈ ರೀತಿ ಸಾರ್ವಜನಿಕರ ಎದುರೆ ನಿರ್ವಾಹಕರಿಗೆ ಕಪಾಳಕ್ಕೆ ಹೊಡೆದಿರುವುದು ಎಷ್ಟು ಸರಿ? ಆಕೆ ಟಿಕೆಟ್‌ ಪಡೆಯದೇ ಕಪಾಳಕ್ಕೆ ಹೊಡೆದಿದ್ದರೂ ಕಂಡಕ್ಟರ್‌ ಒಂದು ಕಪಾಳಕ್ಕೆ ಯಾಕ್ರಿ ಹೊಡೆಯುತ್ತೀರಿ ಇನ್ನೊಂದು ಕಪಾಳಕ್ಕೂ ಹೊಡೆಯಿರಿ ಎಂದು ಮತ್ತೊಂದು ಕಪಾಳ ತೋರಿಸಬೇಕಿತ್ತಾ?

ನಿಗಮದ ಅಧಿಕಾರಿಗಳು ಕೂಡ ಅಮಾನತು ಮಾಡುವ ಮುನ್ನ ಯಾರದು ತಪ್ಪು ಎಂದು ಮೊದಲು ತಿಳಿದು ಕೊಳ್ಳಬೇಕಿತ್ತಲ್ಲವೇ? ಆ ಬಳಿಕ ಕಂಡಕ್ಟರ್‌ ಅವರೆ ತಪ್ಪು ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೆ ಆಗ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಏನೋ ನೋಡಿದೆವು ಹೀಗಾಗಿ ಆಮಾನತು ಮಾಡಿದ್ದೇವೆ ಎಂದು ಹೇಳಿದರೆ ಎಷ್ಟು ಸರಿ.

ಹೌದು! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮೊದಲು ಮಹಿಳೆ ಕರ್ತವ್ಯ ನಿರತ ನಿರ್ವಾಹಕನ ಕಪಾಳಕ್ಕೆ ಹೊಡೆದಿರುವು ಕಂಡು ಬಂದಿದೆ. ಆ ಬಳಿಕ ತಿರುಗಿ ಕಂಡಕ್ಟರ್‌ ಕೂಡ ಆಕೆಗೆ ಹೊಡೆದಿದ್ದಾರೆ ಇದರಲ್ಲಿ ಯಾರದು ತಪ್ಪು? ಇದನ್ನು ತಿಳಿದುಕೊಂಡು ನಿಗಮದ ಅಧಿಕಾರಿಗಳು ಕೂಡಲೇ ಆ ಮಹಿಳೆ ವಿರುದ್ಧ ದೂರು ದಾಖಲಿಸಬೇಕು. ಅಲ್ಲದೆ ಕಂಡಕ್ಟರ್‌ ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ನಾಲ್ಕೂ ನಿಗಮದ ಸಮಸ್ತ ನೌಕರರು ಒತ್ತಾಯಿಸಿದ್ದಾರೆ.

ಜತೆಗೆ ಈ ರೀತಿ ಈಗಾಗಲೇ ನೂರಾರು ಪ್ರಕರಣಗಳು ನಿರ್ವಾಹಕರ ವಿರುದ್ಧವೇ ದಾಖಲಾಗುತ್ತಿದ್ದು ಈವರೆಗೂ ಯಾವುದೇ ಪ್ರಯಾಣಿಕರ ವಿರುದ್ಧ ದೂರುಗಳನ್ನು ದಾಖಲು ಮಾಡಿಲ್ಲ. ಅಂದರೆ ನಿಗಮದ ಕಾನೂನು ವಿಭಾಗ ಇರುವುದು ಬರೀ ಚಾಲನಾ ಸಿಬ್ಬಂದಿಗಳಿಗೆ ಶಿಕ್ಷೆ ಕೊಡಿಸುವುದಕ್ಕೆ ಮಾತ್ರನಾ ಇರೋದು. ಅವರ ರಕ್ಷಣೆಯ ಜವಾಬ್ದಾರಿ ಇವರ ಮೇಲೆ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ನಿಗಮದ ಎಂಡಿ ಅವರೆ ಉತ್ತರ ಕೊಡಬೇಕಿದೆ.

Leave a Reply

error: Content is protected !!
LATEST
ಮಳೆಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡು: ಗುಡ್ಡಕುಸಿತ, ಬಸ್‌ ನಿಲ್ದಾಣ, ದೇವಾಲಯಗಳು ಜಲಾವೃತ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸಾರಿಗೆ ನೌಕರರಿಗೆ ನಿರಾಸೆ KRS ಅಣೆಕಟ್ಟೆಗೆ 24ಗಂಟೆಯಲ್ಲೇ ಹರಿದು ಬಂತು 2 ಟಿಎಂಸಿ ನೀರು- ಅನ್ನದಾತರ ಮೊಗದಲ್ಲಿ ಮಂದಹಾಸ ಆಗಸ್ಟ್​ 1ರಿಂದಲೇ ಸರ್ಕಾರಿ ನೌಕರರ ವೇತನ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಆದೇಶ KKRTC ಬಸ್‌ ಡಿಕ್ಕಿ ಬೈಕ್‌ ಸವಾರ ಸಾವು ಮತ್ತೊಂದು ಘಟನೆಯಲ್ಲಿ ಡಿವೈಡರ್​​ಗೆ ಕಾರು ಡಿಕ್ಕಿ ಇಬ್ಬರು ಮೃತ, ಮೂವರಿಗೆ ಗಾಯ ಕಬಿನಿ ಜಲಾಶಯ ತುಂಬಲು ಒಂದು ಅಡಿ ಬಾಕಿ, KRSಗೆ ಹೆಚ್ಚಾಯಿತು ಒಳಹರಿವು ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಬಳಿಕ ಸುಟ್ಟುಹಾಕಿದ ಪಾಪಿಗಳು KSRTC: 2024ರ ಜ.1ರಿಂದ 1.25 ಲಕ್ಷ ನೌಕರರಿಗೆ ಆಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಆಗಲ... ನಾಳೆ ರಾಜ್ಯ ಸಚಿವ ಸಂಪುಟ ಸಭೆ: ಸರ್ಕಾರಿ ನೌಕರರಿಗೆ ಸಿಎಂ ಕಬ್ಬು ಕೊಡುವರೋ ಇಲ್ಲ ಬೇವು ಕೊಡುವರೋ..!? KSRTC EFWA: ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಿ - ಸಾರಿಗೆ ನೌಕರರ ಮಕ್ಕಳ ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ...