ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಬಹಳ ಜನಪ್ರಿಯತೆ ಗಳಿಸಿರುವವರಲ್ಲಿ ಒಬ್ಬರಾಗಿದ್ದಾರೆ. ಅಂದಹಾಗೆ ಈ ಊರ್ವಶಿ ಅವರು ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ.
ಊರ್ವಶಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಕೂ ಅವರು ಆರ್ಥಿಕವಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಅಂದರೆ ಈ ನಟಿಯ ಸಂಪತ್ತು ಕೋಟಿಗಟ್ಟಲೆ ಇದೆ.
ಹೌದು! ಇಂದು ಊರ್ವಶಿ ರೌಟೇಲಾ ಅವರ ಹುಟ್ಟುಹಬ್ಬ. ಹೀಗಾಗಿ ಇವರ ಬಗ್ಗೆ ತಿಳಿದುಕೊಳ್ಳವ ಕುತೂಹಲವಂತು ಅಭಿಮಾನಿಗಳಿಗೆ ಇದ್ದೇ ಇದೆ. ಆದ್ದರಿಂದ ಇವರ ಹಿನ್ನೆಯನ್ನು ಸ್ವಲ್ಪ ತಿರುವಿಹಾಕಬೇಕೆನಿಸಿತು. ಈ ನಟಿಯ ಒಟ್ಟು ಆಸ್ತಿ ಎಷ್ಟಿದೆ ಎಂಬುವುದು ನಿಮಗೆ ಗೊತ್ತಾ?
ಊರ್ವಶಿ ಅವರು ಇದುವರೆಗೂ ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ನಟಿಯ ಆಸ್ತಿ ಮಾತ್ರ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಊರ್ವಶಿ ಅವರ ಒಟ್ಟು ಸಂಪತ್ತು 30 ಮಿಲಿಯನ್ ಡಾಲರ್ ಅಂದರೆ 250 ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ.
ಊರ್ವಶಿ ರೌಟೇಲಾ ಅವರ ಮಾಸಿಕ ಗಳಿಕೆ ಸುಮಾರು 45 ಲಕ್ಷ ರೂ.ಗಳು ಎಂದು ಹೇಳಲಾಗುತ್ತಿದೆ. ಅವರು ಜಾಹೀರಾತುಗಳಿಂದಲೂ ಹಣ ಸಂಪಾದಿಸುತ್ತಿದ್ದಾರೆ. ಇದಲ್ಲದೇ ಊರ್ವಶಿ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದಲ್ಲದೆ, ಅವರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂಬುವುದು ಅಭಿಮಾನಿಗಳಿಗೆ ಗೊತ್ತಿರದೆ ಇರಲು ಸಾಧ್ಯವಿಲ್ಲ.
ಊರ್ವಶಿ ಹದಿನೈದನೆಯ ವಯಸ್ಸಿನಲ್ಲಿಯೇ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆದರು. ಮಿಸ್ ಇಂಡಿಯಾ, ಮಿಸ್ ಟೂರಿಸಂ, ಇಂಡಿಯನ್ ಪ್ರಿನ್ಸೆಸ್ ಮುಂತಾದ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಅವರು ಸ್ಪರ್ಧಿಸಿ ವಿಜಯದ ನಗೆಯನ್ನೂ ಬೀರಿರುವುದು ಈಗ ಹಳೆಯ ವಿಷಯವೆ ಆದರೆ ಇದರಿಂದ ಅವರು ಗಳಿಕೆ ಹೆಚ್ಚಾಗಿದೆ ಎಂಬುವುದು ಮಾತ್ರ ಹೊಸ ವಿಷಯವಾಗಿದೆ.
ಇನ್ನು ಇವರು ಬರಿ ಸ್ಪರ್ಧಿಸಿ ಹೊರ ಬಂದಿದ್ದಾರೆ ಎಂದು ಕೊಳ್ಳಬೇಡಿ ಈಗ ಈ ಸೌಂದರ್ಯ ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ಸಂಭಾವನೆ ಪಡೆಯುತ್ತಿದ್ದಾರೆ. ಊರ್ವಶಿ ರೌಟೇಲಾ ಸಿನಿಮಾಗಳು, ಜಾಹೀರಾತುಗಳು, ವೆಬ್ ಸಿರೀಸ್ಗಳಂತಹ ವಿವಿಧ ಮಾಧ್ಯಮಗಳ ಮೂಲಕ ಇವರು ಸಾಕಷ್ಟು ಹಣ ಗಳಿಸುತ್ತಿದ್ದಾರೆ.
ಊರ್ವಶಿ ಚಿತ್ರವೊಂದಕ್ಕೆ ಸರಿ ಸುಮಾರು ಮೂರು ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮ್ಯೂಸಿಕ್ ವಿಡಿಯೋದಲ್ಲಿ ಕೆಲಸ ಮಾಡುವಾಗ 40 ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಾರಂತೆ. ಇನ್ನು ಊರ್ವಶಿ ತನ್ನದೇ ಆದ ಜಿಮ್ ಹೊಂದಿದ್ದಾರೆ. ಅಲ್ಲಿ ತನ್ನದೇ ಆದ ವಿಶ್ರಾಂತಿ ಕೋಣೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ತನ್ನದೇ ಆದ ಚಿತ್ರಮಂದಿರವನ್ನೂ ಹೊಂದಿದ್ದಾರೆ.
ಮರ್ಸಿಡಿಸ್, ರೇಂಜ್ ರೋವರ್ ಇವೊಕ್, ಫೆರಾರಿ 458 ಸ್ಪೈಡರ್ ನಂತಹ ಐಷಾರಾಮಿ ಕಾರುಗಳನ್ನು ಊರ್ವಶಿ ಹೊಂದಿದ್ದಾರೆ. ಈ ಕಾರುಗಳ ಬೆಲೆ ಏಳು ಕೋಟಿಗೂ ಮಿಗಿಲಾಗಿದೆ ಎಂದು ಅಂದಾಜಿಸಲಾಗಿದೆ.