ಮುಂಬೈ: ರಾಜ್ಯ ಸರ್ಕಾರಿ ನೌಕರರಂತೆ MSRTC ನೌಕರರಿಗೂ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಎಸ್‌ಟಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾದ್ದು, ಈ ಮುಷ್ಕರಕ್ಕೆ ಶಾಸಕರು ಬೆಂಬಲ ನೀಡುತ್ತಿದ್ದಾರೆ.
ನೌಕರರ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಶಾಸಕರಾದ ಗೋಪಿಚಂದ್ ಪಡಲ್ಕರ್ ಮತ್ತು ಸದಾಭಾವು ಖೋಟ್ ಬೆಂಬಲ ನೀಡಿದ್ದು ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸೇವಾಶಕ್ತಿ ಸಂಘರ್ಷ ಎಸ್ಟಿ ನೌಕರರ ಸಂಘ ಕೂಡ ಆಂದೋಲನಕ್ಕೆ ಕೈಜೋಡಿಸಲಿದೆ.
ಇದೇ ವೇಳೆ ಗೋಪಿಚಂದ್ ಪಡಲ್ಕರ್ ಮಾತನಾಡಿ, ರಾಜ್ಯ ಸರ್ಕಾರಿ ನೌಕರರಿಗೆ ಅನುಗುಣವಾಗಿ ಎಸ್‌ಟಿ ನೌಕರರಿಗೆ ವೇತನ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಎಸ್‌ಟಿ ನೌಕರರಿಗೆ ಗೋಪಿಚಂದ್ ಪಡಲ್ಕರ್ ಬೆಂಬಲ ವ್ಯಕ್ತಪಡಿಸಿದ್ದು, ಇದೇ ಮಧ್ಯರಾತ್ರಿ 12 ಗಂಟೆಯಿಂದ ಮುಷ್ಕರ ನಡೆಸಬೇಕು, ನಾವು ಅವರಿಗೆ ಬೆಂಬಲ ನೀಡುತ್ತೇವೆ. ಇಂದು ರಾತ್ರಿ 12ರಿಂದ ಸಂಸ್ಥೆಯ ಯಾವುದೇ ಬಸ್‌ಗಳು ಓಡುವುದಿಲ್ಲ, ವ್ಹೀಲ್ ಜಾಮ್ ಮಾಡಿ ಮುಷ್ಕರ ನಡೆಸುವ ನೌಕರರ ಬೆಂಬಲಕ್ಕೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.
ಎಸ್ಟಿ ನೌಕರರಿಗೂ ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ವೇತನ ನೀಡಬೇಕು ಎಂದು ಸರ್ಕಾರಕ್ಕೆ ಗೋಪಿಚಂದ್ ಪಡಲ್ಕರ್ ಆಗ್ರಹಿದ್ದಾರೆ. ಅಲ್ಲದೆ ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಸಾಧ್ಯವಿಲ್ಲ ಹೀಗಾಗಿ ಅವರಿ ಸರಿ ಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಹೌದು! ವಿಲೀನ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಇನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ತಿಂಗಳಿಗೆ 410 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಾರೆ, ಆದರೆ ನೌಕರರಿಗೆ ಸಂಬಳ ನೀಡಲು ಮಾತ್ರ ಅವರ ಬಳಿ ಹಣವಿರುದಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಇಂದು ಮಧ್ಯಾಹ್ನ ಸಾರಿಗೆ ಸಸಚಿವರೊಂದಿಗೆ ನೌಕರರ ಮುಖಂಡರ ಸಭೆ ನಡೆದಿದ್ದು ಆ ಸಭೆಯಲ್ಲಿ ನೌಕರರ ಬೇಡಿಕೆ ಈಡೇರಿಸುವುದಕ್ಕೆ ಸರ್ಕಾರ ಮುಂದಾಗದ ಕಾರಣ ಮುಷ್ಕರ ಮುಂದುವರಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ ಸಂಸ್ಥೆಯ ಯಾವುದೇ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಹೀಗಾಗಿ ನಾಗರಿಕರಲ್ಲಿ ನಾವು ಕ್ಷೆಮೆ ಕೇಳುತ್ತೇವೆ ಎಂದು ನೌಕರರು ತಿಳಿಸಿದ್ದು, ನಮ್ಮ ಹೋರಾಟಕ್ಕೆ ನೀವು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.