NEWSನಮ್ಮಜಿಲ್ಲೆನಮ್ಮರಾಜ್ಯ

ಅನರ್ಹ ಸಾರಿಗೆ ಸಂಘಟನೆಗಳ ಮುಖಂಡರಿಂದ ನೌಕರರ ಸಮಸ್ಯೆ ಪರಿಹರಿಸಲು ಸಾಧ್ಯವೆ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಕಾರ್ಮಿಕರ ಸಂಘಟನೆಗಳು ಎಂದು ಹೇಳಿಕೊಳ್ಳುತ್ತಿರುವ ಯಾವುದೇ ಸಂಘಟನೆಗೂ ನಿಗಮಗಳ ಆಡಳಿತ ವರ್ಗವನ್ನು ಪ್ರಶ್ನಿಸುವ ಹಕ್ಕಿಲ್ಲ. ಕಾರಣ ಇವು ಚುನಾವಣೆ ನಡೆಸದೆ ಅನರ್ಹವಾಗಿವೆ.

ಹೀಗಿರುವಾಗ ಇಲ್ಲಿ ನೌಕರರು ಮತ್ತು ಅಧಿಕಾರಿಗಳ ನಡುವೆ ಕಂದಕ ಸೃಷ್ಟಿಸಿ ಈಗಲೂ ಅಧಿಕಾರಿಗಳು V/s ನೌಕರರು ಎಂದು ಬಿಂಬಿಸಿಕೊಂಡು ಒಂದೇ ಸಂಸ್ಥೆಯ ನೌಕರರು ಮತ್ತು ಅಧಿಕಾರಿಗಳ ನಡುವೆಯೇ ಹೊಂದಾಣಿಕೆಯಾಗದಂತೆ ಪಿತೂರಿ ನಡೆಸಿಕೊಂಡು ಈ ಹಿಂದಿನಿಂದಲೂ ಹಾಗೂ ಈಗಲೂ ಕೆಲವರು ಬರುತ್ತಲೇ ಇದ್ದಾರೆ.

ಈ ನಡುವೆ ನೌಕರರ ಸಮಸ್ಯೆ ಆಲಿಸಿ ಎಂದು ಕೇಳಿದರೆ ನಮಗೆ ಅಧಿಕಾರಿಗಳ ಜತೆ ಮಾತನಾಡುವ ಯಾವುದೆ ಹಕ್ಕಿಲ್ಲ. ಹೌದು! ನೀನು ಯಾವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೀಯಾ ಹೇಳು ಎಂದು ಕೇಳಿ ಸಮಸ್ಯೆ ಹೇಳಿಕೊಂಡು ಪರಿಹರಿಸಿ ಎಂದು ಮನವಿ ಮಾಡುವ ನೌಕರರನ್ನು ಹೀಯ್ಯಾಳಿಸಿ ಕಳುಹಿಸುವ ಈ ಸಂಘಟನೆಗಳು ನೌಕರರಿಗೆ ಅಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯವೆ.

ಇನ್ನು ಬಿಜೆಪಿ ನೇತೃತ್ವದ ಸರ್ಕಾರ ಕಳೆದ 2023ರ ಮಾರ್ಚ್‌ನಲ್ಲಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆ ವೇಳೆ ನಾವು ಇದಕ್ಕೆ ಒಪ್ಪುವುದಿಲ್ಲ ನಮಗೆ ಶೇ.25ರಷ್ಟು ವೇತನ ಹೆಚ್ಚಳ ಮಾಡಲೇ ಬೇಕು ಎಂದು ನೌಕರರ ಪರ ಇದ್ದೇವೆ ಎಂಬುದನ್ನು ಸಾಬೀತುಪಡಿಸುವ ರೀತಿ ಮುಷ್ಕರಕ್ಕೆ ರಾಜಾರೋಷವಾಗಿ ಕರೆ ನೀಡದ ಹಲವು ಸಂಘಟನೆಗಳ ಮುಖಂಡರು ಬಳಿಕ ಹೋಗಿ ಅಂದಿನ ಸಿಎಂಗೆ ಹಾರಾತುರಾಯಿ ಹಾಕಿ ಫೋಟೋಗೂ ಪೋಸ್‌ಕೊಟ್ಟು ಬಂದರು.

ಆದರೆ, ವೇತನ ಹೆಚ್ಚಳ ಮಾಡಿ 6ತಿಂಗಳು ಕಳೆದರೂ ಈವರೆಗೂ ಹಿಂಬಾಕಿ ಬಗ್ಗೆ ಯಾವುದೇ ಸಂಘಟನೆಯ ಮುಖಂಡರು ಮಾತನಾಡುತ್ತಿಲ್ಲ. ನೌಕರರು ಕೇಳಿದರೆ ಕೆಲ ಕೆಲಸಕ್ಕೆ ಬಾರದ ಸಂಘಟನೆಗಳ ಕಾರ್ಯಕರ್ತರು ಎನಿಸಿಕೊಳ್ಳುತ್ತಿರುವವರು ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ನಿಮ್ಮ ಸಂಘಟನೆ ಏನು ಮಾಡುತ್ತಿದೆ? ಏಕೆ ನೀವು ಗಂ..ರೇ ಅಲ್ಲವ ಎಂದು ಬೇಡದ ಕಮೆಂಟ್‌ಗಳನ್ನು ಹಾಕಿಕೊಂಡು ಕಾಲಹರಣ ಮಾಡಲಾಗುತ್ತಿದ್ದಾರೆ.

ಹೀಗಾಗಿ ಇಲ್ಲಿ ನೌಕರರಿಗೆ ಸಿಗಬೇಕಿರುವುದು ಮತ್ತು ಬರಬೇಕಿರುವುದನ್ನು ಹೇಗೆ ಕೊಡಿಸಬೇಕು ಎಂಬ ಬಗ್ಗೆ ಚಿಂತೆ ಮಾಡದೆ ನೌಕರರ ಹೆಸರಿನಲ್ಲಿ ನೌಕರರದ್ದೇ ದುಡ್ಡನ್ನು ಕೊಳ್ಳೆ ಹೊಡೆಯುವುದಕ್ಕೆ ಬೇಕಾದ ವಾಮಮಾರ್ಗ ಅನುಸರಿಸುವುದು ಹೇಗೆ ಎಂಬ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡು ಕುಳಿತಿದ್ದಾರೆ ನೌಕರರ ಸಂಘಟನೆಗಯ ಬಹುತೇಕ ಮುಖಂಡರು.

ಇದರಿಂದ ನೌಕರರ ಸಮಸ್ಯೆ ನಿವಾರಣೆ ಆಗುವ ಬದಲಿಗೆ ಇನ್ನಷ್ಟು ಹೆಚ್ಚಾಗುತ್ತಲೇ ಇದೆ. ಅಲ್ಲದೆ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಳ್ಳುವುದಕ್ಕೆ ಮತ್ತು ನೌಕರರಿಂದ ಹೇಗೆ ದುಡ್ಡು ವಸೂಲಿ ಮಾಡಬಹುದು ಎಂಬುದರ ಬಗ್ಗೆ ಬಹುತೇಕ ಸಾರಿಗೆ ಸಂಘಟನೆಗಳ ಮುಖಂಡರು ಹೊಂಚುಹಾಕುತ್ತಿದ್ದಾರೆ. ಇದನ್ನು ಬಿಟ್ಟು ಈಗಲಾದರು ಚುನಾವಣೆ ನಡೆಸಿ ಆ ಮೂಲಕ ಅರ್ಹತೆ ಪಡೆದುಕೊಂಡು ನೌಕರರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿ.

ಇಲ್ಲ ಹೀಗೆಯೇ ಇರುತ್ತೇವೆ ಎಂದರೆ ನಿಮಗೆ ನೌಕರರ ಪರವಾಗಿ ನಿಂತು ಆಡಳಿತ ವರ್ಗದ ವಿರುದ್ಧ ಮಾತನಾಡುವ ಯಾವುದೇ ಹಕ್ಕು ಇಲ್ಲ. ಅಲ್ಲದೆ ನೀವು ಮುಷ್ಕರಕ್ಕೆ ಕರೆ ನೀಡುತ್ತೇವೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿ ಮತ್ತು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸರಿ ಇಲ್ಲ, ನಮ್ಮ ಮಾತು ಕೇಳುತ್ತಿಲ್ಲ ಎಂದು ನೌಕರರನ್ನು ದಾರಿ ತಪ್ಪಿಸಿ ಪ್ರತಿಭಟನೆಗೆ ಅವರನ್ನು ಕರೆ ತಂದರೆ ಅದರಿಂದ ಅವರಿಗೆ ಆಗುವ ನಷ್ಟವನ್ನು ನೀವು ಭರಿಸಲು ಸಾಧ್ಯವೆ, ಇದು ನಿಮ್ಮಿಂದ ಖಂಡಿತ ಸಾಧ್ಯವಿಲ್ಲ.

ಹೀಗಿರುವಾಗ ನೀವು ಯಾವ ಆಧಾರ ಮೇಲೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತೀರಿ. ಇದರ ಜತೆಗೆ ನಿಮ್ಮ ಹಿಂದೆ ಬರುವುದಕ್ಕೆ ಯಾವ ನೌಕರ ನಿಮಗೆ ಬೆಂಬಲ ಸೂಚಿಸಿದ್ದಾನೆ ಹೇಳಿ (ನಿಮ್ಮ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ನೌಕರರನ್ನು ಬಿಟ್ಟು). ಇಷ್ಟಾದರೂ ನೀವು ಈವರೆಗೂ ಒಬ್ಬನೇ ಒಬ್ಬ ನೌಕರನ ಸಮಸ್ಯೆಯನ್ನು ಕೇಳಿ ಪರಿಹರಿಸಿಲ್ಲ, ಅದು ನಿಮ್ಮಿಂದ ಸಾಧ್ಯವು ಇಲ್ಲ ಬಿಡಿ.

ಏನೇ ಹೇಳಿದರು, ಸುಪ್ರೀಂ ಮತ್ತು ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರು ಅವರಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೆಲ ನೌಕರರ ಸಮಸ್ಯೆ ಪರಿಹರಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲ ನೌಕರರ ಕುಟಂಬ ಕಷ್ಟದಲ್ಲಿದೆ ಎಂದಾಗ ಅವರಿಗೆ ಕೆಲ ನೌಕರರಿಂದಲೂ ಮತ್ತು ವೈಯಕ್ತಿಕವಾಗಿಯೂ ಸಹಾಯ ಮಾಡಿದ್ದಾರೆ.

ಆದರೆ, ನೀವು ಸ್ವಾರ್ಥಿಗಳಾಗಿ ನಿಮ್ಮ ಪರ ನಿಲ್ಲುವವರಿಗೆ ಮಾತ್ರ ತೊಂದರೆ ಆದರೆ ಆಡಳಿತ ವರ್ಗ ಸರಿಯಿಲ್ಲ ಎಂದು ದೂರಿ ಪ್ರತಿಭಟನೆಗೆ ಕರೆ ನೀಡುತ್ತೀರಿ. ಇದು ನಿಮಗೆ ನಾಚಿಕೆ ಅನ್ನಿಸುವುದಿಲ್ಲವೇ. ಇದೇ ರೀತಿ ನೂರಾರು ನೌಕರರು ಅಮಾನತಾಗಿ ಮನೆಯಲ್ಲಿ ಕುಳಿತಿದ್ದಾರೆ. ಅವರಿಗೆ ತೊಂದರೆ ಆದಾಗ ಅದು ನಿಮಗೆ ತೊಂದರೆ ಆಗಿದೆ ಅನಿಸಲಿಲ್ಲವೇ. ಆಗ ಅಡಳಿತ ವರ್ಗ ಮಾಡಿದ್ದು ಸರಿ ಇತ್ತೆ. ಹಾಗಾದರೆ ಹೀಗೇಕೆ ಸರಿ ಇಲ್ಲ. ಇದಕ್ಕೆ ನಿಮ್ಮಿಂದ ಸರಿಯಾದ ಉತ್ತರ ಬರುವುದಿಲ್ಲ ಎಂಬುವುದೂ ಗೊತ್ತಿದೆ.

ಇನ್ನಾದರೂ ಮೊದಲು ನಮ್ಮ ಸಂಘ ನಮ್ಮ ಸಂಘ ಎಂಬುದನ್ನು ಬಿಟ್ಟು ನೌಕರರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಹೋರಾಡಿ ನೌಕರರಿಗೆ ನ್ಯಾಯಕೊಡಿಸಿ ಆಗ ಎಲ್ಲ ನೌಕರರು ನಿಮ್ಮ ಸಂಘಟನೆಯನ್ನು ನೀವು ಕೇಳದೇ ಹೋದರೂ ಬೆಂಬಲಿಸಿ ನಿಮ್ಮ ಪರವಾಗಿ ನಿಲ್ಲುತ್ತಾರೆ. ಅದನ್ನು ಬಿಟ್ಟು ಸ್ವಾರ್ಥಕ್ಕಾಗಿ ನಿಂತರೆ ನಿಮ್ಮಿಂದ ನೌಕರರಿಗೆ ಯಾವುದೇ ಪ್ರಯೋಜನವಾಗದು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ನೌಕರರ (ಕಾರ್ಮಿಕರ) ಪರ ಸಂಘಟನೆಗಳ ಮುಖಂಡರೆನಿಸಿಕೊಂಡವರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು