KSRTC ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರು : ಎಲ್ಲಿ ಬೇಕಾದರೂ ಟ್ರೀಟ್‌ಮೆಂಟ್ ಪಡೆಯಿರಿ
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ನಗದು ರಹಿತ ಚಿಕಿತ್ಸೆ ಶುರುವಾಗಿದ್ದು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನೂರಾರು ನೌಕರರು ಟ್ರೀಟ್‌ಮೆಂಟ್ ಪಡದುಕೊಳ್ಳಬಹುದು.
ಈ ಬಗ್ಗೆ ಗುರುವಾರ ಮಾತನಾಡಿದ ಸಂಸ್ಥೆಯ ಕಾರ್ಮಿಕ ಕಲ್ಯಾಣಾಧಿಕಾರಿಗಳು ನೀವು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬೇಕಾದರೂ ಟ್ರೀಟ್‌ಮೆಂಟ್ ಪಡೆಯಲು ಅವಕಾಶವಿದೆ. ಆದರೆ ಸಂಸ್ಥೆ ಜತೆಗೆ ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಹೋಗಿ ಎಂದು ತಿಳಿಸಿದರು.
ಇನ್ನು ನಮಗೆ ಈವರೆಗೂ ಚಿಕಿತ್ಸೆ ಪಡೆಯುವುದಕ್ಕೆ ಐಡಿ ಕಾರ್ಡ್ ಇಲ್ಲ ಎಂಬ ಚಿಂತೆ ಬಿಡಿ ನೀವು ನಿಮ್ಮ ಪಿಎಫ್ ನಂಬರ್ ಹೇಳಿ ಚಿಕಿತ್ಸೆ ಪಡೆಯಿರಿ ಒಂದು ವೇಳೆ ನಿಮ್ಮ ಅವಲಂಬಿತರಿಗೆ ಚಿಕಿತ್ಸೆ ಕೊಡಿಸಬೇಕಿದ್ದಲ್ಲಿ ಅವರ ಆಧಾರ್ ಕಾರ್ಡ್ ತೋರಿಸಿ ಎಂದು ತಿಳಿಸಿದರು.
ಒಟ್ಟಾರೆ ಸಾರಿಗೆ ನಿಗಮದ ಅಧಿಕಾರಿಗಳು/ನೌಕರರು ಚಾತಕಪಕ್ಷಿಯಂತೆ ಕಾಯುತ್ತಿದ್ದ ನಗದು ರಹಿತ ವೈದ್ಯಕೀಯ ಸೌಲಭ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದು, ಇದರ ಹಿಂದೆ ನಿಗಮದ ಎಂಡಿ ಅನ್ಬುಕುಮಾರ್ ಆವರು ಅವಿರತ ಶ್ರಮವು ಇದೆ ಎಂದು ನೌಕರರು ಅಭಿನಂದನೆ ಸಲ್ಲಿಸಿದ್ದಾರೆ.