ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್.1 ಭಯ ಹುಟ್ಟಿಸಿರುವ ಬೆನ್ನಲ್ಲೇ ಜಿಲ್ಲೆಯ ಗ್ರಾಮವೊಂದರ ಎಲ್ಲ ಜನರಿಗೆ ಜ್ವರ, ಮೈ- ಕೈ ನೋವು ಕಣಿಸಿಕೊಂಡಿದ್ದು, ಅನಾರೋಗ್ಯದಿಂದ ಇಡೀ ಗ್ರಾಮದ ಮಂದಿಯೇ ಬಳಲುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದ ಎಲ್ಲ ನಿವಾಸಿಗಳಿಗೂ ಕಳೆದ ವಾರದಿಂದ ಜ್ವರ, ಮೈ- ಕೈ ನೋವು ಕಾಣಿಸಿದೆ. ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಬಸವಂತಪ್ಪ ಗ್ರಾಮಕ್ಕೆ ಭೇಟಿ ನೀದ್ದಾರೆ. ಅಲ್ಲದೆ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶಾಸಕರ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ 25ಕ್ಕೂ ಹೆಚ್ಚು ಜನರಲ್ಲಿ ಚಿಕೂನ್ ಗುನ್ಯಾ ಇರುವುದು ದೃಢವಾಗಿದೆ. ಸೊಳ್ಳೆಯಿಂದ ಇಡೀ ಗ್ರಾಮಕ್ಕೆ ಚಿಕೂನ್ ಗುನ್ಯಾ ಹರಡಿದೆ ಎಂದು ಹೇಳಲಾಗಿದೆ. ಹೀಗಾಗಿ ಗ್ರಾಮದ ಜನರಿಗೆ ಔಷಧ ತೆಗೆದುಕೊಂಡು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ.
ಚಳಿಗಾಲ ಬಂದರೆ ಜನರಲ್ಲಿ ಆರೋಗ್ಯ ಶಕ್ತಿ ಕ್ಷಿಣಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಬೆಚ್ಚನೆಯ ಉಡುಪುಗಳನ್ನು ಧರಿಸಿಕೊಂಡು ಸಾಧ್ಯವಾದಷ್ಟು ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.