Search By Date & Category

CrimeNEWS

ಸಾರಿಗೆ ನೌಕರರ ಕೂಟದ ಆಧ್ಯಕ್ಷರಿಗೆ ಕೊಲೆ ಬೆದರಿಕೆ: ಬಿಎಂಟಿಸಿ ಸಿಎಲ್‌ಒ ವೆಂಕಟೇಶ್‌ ವಿರುದ್ಧ ದೂರು ದಾಖಲು – ವಕೀಲ ಅಮೃತೇಶ್‌

ಸಿಎಲ್‌ಒ ಮೊದಲು ಬಿಎಂಟಿಸಿಯಿಂದ ತೊಲಗಬೇಕು ಇದು ನಮ್ಮ ಮೊದಲ ಹೋರಾಟ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಕೂಟದ ಆಧ್ಯಕ್ಷ ಚಂದ್ರಶೇಖರ್‌ ಅವರಿಗೆ ಮುಷ್ಕರ ಕೈ ಬಿಡು ಇಲ್ಲ ನಿನ್ನನ್ನು ಮುಗಿಸಬೇಕಾಗುತ್ತದೆ ಎಂದು ಬಿಎಂಟಿಸಿ ಸಿಎಲ್‌ಒ ವೆಂಕಟೇಶ್‌ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ನೌಕರರ ಪರ ವಕೀಲ ಅಮೃತೇಶ್‌ ತಿಳಿಸಿದ್ದಾರೆ.

ಇನ್ನು ಸಾರಿಗೆ ನೌಕರರನ್ನು ಸರ್ಕಾರ ಕೂಡ ಅತ್ಯಂತ ಕೀಳಾಗಿ ಕಾಣುತ್ತಿದೆ. ಇದರ ನಡುವೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಎಂದು ಮನವಿ ಮಾಡಿದ ನೌಕರರಿಗೆ ಬಿಎಂಟಿಸಿ ಅಧಿಕಾರಿ ವೆಂಕಟೇಶ್‌ ಕೊಲೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ಸರ್ಕಾರಿ ನೌಕರರಿಗೆ ಶೇ.17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡುವ ಸರ್ಕಾರ, ಕೆಪಿಟಿಸಿಎಲ್‌ ನೌಕರರಿಗೆ ಶೇ.20ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸುತ್ತದೆ.

ಆದರೆ, ಕಷ್ಟಪಟ್ಟು ದುಡಿಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ಶೇ.15ರಷ್ಟು ಹೆಚ್ಚಳ ಮಾಡಿದೆ. ಇದೇನು ಭಿಕ್ಷೆ ಕೊಡುತ್ತಿದ್ದಾರೆಯೇ ಈ ಸಿಎಂ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರಿಗೆ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹೋಗಿ ದೊಡ್ಡ ಹೂವಿನ ಹಾರಹಾಕಿ ಅಭಿನಂದಿಸುತ್ತಾರೆ ಎಂದರೆ ನೌಕರರಿಗೆ ಇವರಿಂದ ನ್ಯಾಯ ಸಿಗುತ್ತದೆಯೇ ಎಂದು ಕಿಡಿಕಾರಿದರು.

Leave a Reply

error: Content is protected !!