NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹೊಳೆನರಸೀಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ವಿಭಾಗದ ಹೊಳೆ ನರಸೀಪುರ ಘಟಕದ ಉಸ್ತುವಾರಿ ಅಧಿಕಾರಿ ಹಾಗೂ ಡಿಎಂಇ ವೆಂಕಟೇಶ ಮೂರ್ತಿ ನೌಕರರಿಗೆ ಕಿರುಕುಳ ಕೊಡುತ್ತಿದ್ದು, ನಾನು ಖಿನ್ನತೆಗೆ ಒಳಗಾಗುತ್ತಿದ್ದೇವೆ. ಆದ್ದರಿಂದ ಇವರನ್ನು ಕೂಡಲೇ ಬದಲಾಯಿಸಿ ಎಂದು ಆಗ್ರಹಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಆದರೆ ಅಚ್ಚರಿ ಏನು ಎಂದರೆ ಈ ನೊಂದ ಘಟಕದ ಕಾರ್ಮಿಕರು ದೂರು ನೀಡಿರುವುದು 30-05-2024ರಲ್ಲೇ ಅದರೆ, ಎಂಡಿ ಅವರು ಈವರೆಗೂ ಈತನ ವಿರುದ್ಧ ಬಂದಿರುವ ದೂರಿನ ಬಗ್ಗೆ ಯಾವುದೇ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ. ಇದು ಎಂಡಿ ಅವರು ನೌಕರರ ಮೇಲೆ ಇಟ್ಟಿರುವ ಕಾಳಜಿ ಏನು ಎಂದು ತೋರಿಸುವಂತಿದೆ.

ಹೌದು! ಹಾಸನ ವಿಭಾಗದ ಹೊಳೆನರಸೀಪುರ ಘಟಕದಲ್ಲಿ ಡಿಎಂಇ ವೆಂಕಟೇಶ ಮೂರ್ತಿಯವರು ಘಟಕಕ್ಕೆ ಭೇಟಿಕೊಟ್ಟು ಎಲ್ಲ ನೌಕರು ಮತ್ತು ಚಾಲಕ-ನಿರ್ವಾಹಕರಿಗೆ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಬಾಯಿಗೆ ಬಂದಂತೆ ನಿಂದಿಸುತ್ತಾರೆ ಮತ್ತು ತಾತ್ರಿಂಕ ಸಂಚಾರ ಶಾಖೆಯ ಅಧಿಕಾರಿಗಳಿಗೂ ಸಹ ತುಂಬಾ ಬೈಯ್ಯುತ್ತಾರೆ.

ಅಲ್ಲದೆ ಘಟಕ ವ್ಯವಸ್ಥಾಪಕರು ಇದ್ದರೂ ಸಹ ಈ ವೆಂಕಟೇಶ ಮೂರ್ತಿ ಹೆಚ್ಚಿನ ರೀತಿಯಲ್ಲಿ ಒತ್ತಡ ತರುವುದು ಮತ್ತು ಘಟಕದ ನೌಕರರಿಗೆ ತಪ್ಪು ಮಾಡದಿದ್ದರೂ ಕಿರುಕುಳ ಕೊಡುವುದು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು 2008 ರಿಂದ 2010 ವರೆಗೆ ಹೊಳೆನರಸೀಪುರ ಘಟಕದಲ್ಲಿ ಘಟಕ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುವಾಗ ಓರ್ವ ಚಾಲಕರು ಕಡಿಮೆ ಕೆಎಂಪಿಎಲ್ ತಂದರೂ ಎಂಬ ಕಾರಣ ಮುಂದಿಟ್ಟುಕೊಂಡು ಆ ಚಾಲಕರಿಂದ ಖಾಸಗಿಯಾಗಿ ಡೀಸೆಲ್‌ ತರಸಿ ಘಟಕದಲ್ಲಿ ಆ ವಾಹನಗಳಿಗೆ ಹಾಕಿದ್ದರು.

ಅಷ್ಟೇ ಅಲ್ಲದೇ ಈ ವೆಂಕಟೇಶ ಮೂರ್ತಿ 28-05-2024 ರಂದು ಹೊಳೆನರಸೀಪೊಉರ ಘಟಕದ ಸಹಾಯಕ ಅಧೀಕ್ಷಕರಿಗೆ ಸಂಜೆ 5 ಗಂಟೆ ಸಮಯದಲ್ಲಿ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾರೆ.

ವೆಂಕಟೇಶ ಮೂರ್ತಿ ಈ ಮುಂಚೆ ಚನ್ನರಾಯಪಟ್ಟಣ ಘಟಕದಲ್ಲಿ ಕರ್ತವ್ಯ ನಿರ್ವಹಿಸುವಾಗ ಓರ್ವ ಚಾಲಕರು ಇವರ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದು ಸಾವನ್ನಪ್ಪಿದ್ದಾರೆ. ಇವರು ಹಾಸನ ವಿಭಾಗದ ನೌಕರರಿಗೂ ಈಗ ಇಲ್ಲದ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

ಈಗ ವೆಂಕಟೇಶಮೂರ್ತಿ ಅವರನ್ನು ಹೊಳೆನರಸೀಪುರ ಘಟಕದ ಉಸ್ತುವಾರಿಯನ್ನಾಗಿ ನೇಮಿಸುವುದರಿಂದ ಇಡೀ ಘಟಕವೇ ಅಶಾಂತಿಯಿಂದ ಕೂಡಿದೆ. ದಯವಿಟ್ಟು ಇವರನ್ನು ಬದಲಾಯಿಸಿ ಕೊಡಿ. ಇವರು ಘಟಕದ ಉಸ್ತುವಾರಿ ಆದ ಮೇಲೆ, ಘಟಕದ ಎಲ್ಲ ಸಿಬ್ಬಂದಿ ವರ್ಗದವರಿಗೆ ಕಿರುಕುಳ ಕೊಡುವುದು ಮತ್ತು ಜಾತಿ ನಿಂದನೆ ಮಾಡುವುದು ಹೆಚ್ಚಾಗಿದೆ.

ವೆಂಕಟೇಶ ಮೂರ್ತಿಯನ್ನು ಹೊಳೆನರಸೀಪುರ ಘಟಕದ ಉಸ್ತುವರಿಯಾಗಿ ನೇಮಿಸಿರುವುದರಿಂದ ಘಟಕದಲ್ಲಿ ಕೆಲವೇ ದಿನಗಳಲ್ಲಿ ಇಬ್ಬರು ನೌಕರರು ಇವರ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರು. ಆದರೆ ನೌಕರರಾದ ನಾವೆಲ್ಲ ಸೇರಿ ಸಮಾಧಾನ ಮಾಡಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಸಾವು ನೋವು ಸಂಭವಿಸಬಾರದು ಎಂಬ ದೃಷ್ಟಿಯಿಂದ ಇವರನ್ನು ಬದಲಾಯಿಸಿ ಕೊಡಬೇಕು ಎಂದು ನೊಂದ ಹೊಳೆನರಸೀಪುರ ಘಟಕ ನೌಕರರು ಮನವಿ ಮಾಡಿದ್ದಾರೆ.

ಹೀಗಾಗಿ ದೂರು ಕೊಟ್ಟು 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಜರುಗಿಸದ ಎಂಡಿಯ ನಡೆಯಿಂದ ಅಸಮಾಧಾನಗೊಂಡಿರುವ ಘಟಕದ ನೌಕರರು ಈಗಲಾದರೂ ಈತನನ್ನು ಬದಲಾಯಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಎಂಡಿ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

1 Comment

  • ಸ್ವಾಮಿ ತಾವು ಡಿ ಎಂ ಇ ಮೇಲೆ ಎಂ.ಡಿ.ರವರ ಬಳಿ ದೂರು ನೀಡಿರುವಿರಿ. ನಾನು ಎಂ.ಡಿ.ರವರ ಮೇಲೆ ಇಂತಹ ಧೋರಣೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವರಲ್ಲಿ ದೂರು ಸಲ್ಲಿಸಿ ಎರಡು ವರ್ಷ ವಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿ ರವರಿಂದ ಯಾವುದೇ ಕ್ರಮವಿಲ್ಲ. ಇದೇ ವಿಷಯ ಆಧರಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ದಿ: 27-11-2023 ರ ಜನತಾದರ್ಶನದಲ್ಲಿ ದೂರು ಸಲ್ಲಿಸಿದರೂ ಯಾವುದೇ ಕ್ರಮವಿಲ್ಲ.

    ಅಂದರೆ ಪ್ರಜಾಪ್ರಭುತ್ವ ಸಮಾಜದಲ್ಲಿ ಜನಸಾಮಾನ್ಯರು ಹಾಗೂ ಕೆಳವರ್ಗದ ನೌಕರರು ಅಧಿಕಾರಿಗಳ ಮೇಲೆ ದೂರು ಸಲ್ಲಿಸಲು ಅವಕಾಶವಿಲ್ಲ. ಇಂತಹವರು ಇವರುಗಳ ಮೇಲೆ ದೂರು ಸಲ್ಲಿಸಲು ಇನ್ನೊಂದು ಸಂವಿಧಾನ ಸೃಷ್ಟಿಯಾದರೆ ಸಕಾರವಾಗಬಹುದೇನೋ. ಜೈ ಹಿಂದ್. ಜೈ ಭಾರತ.

Leave a Reply

error: Content is protected !!
LATEST
BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ! KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ