CrimeNEWSದೇಶ-ವಿದೇಶ

ವೈದ್ಯೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ 20 ವರ್ಷ ಕಠಿಣ ಶಿಕ್ಷೆ

ವಿಜಯಪಥ ಸಮಗ್ರ ಸುದ್ದಿ

ವೆಲ್ಲೂರು: ವೈದ್ಯೆಯೊಬ್ಬರನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮಹಿಳಾ ನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟ್ಪಾಡಿಯಲ್ಲಿ 2022ರಂದು ಮಧ್ಯರಾತ್ರಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇದ್ದಾಗಿದ್ದು, ಇದು ರಾಜ್ಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.

ಅದರಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ಆಟೋ ಚಾಲಕ ಪಾರ್ಥಿಬನ್, ದಿನಗೂಲಿ ನೌಕರ ಮಣಿ ಅಲಿಯಾಸ್ ಮಣಿಕಂಠನ್ ಮತ್ತು ಆತನ ಸ್ನೇಹಿತರಾದ ಭರತ್ ಮತ್ತು ಸಂತೋಷ್ ಈ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪಾಪಿಗಳ ಜತೆಗೆ ಪ್ರಕರಣದ ಐದನೇ ಶಂಕಿತ ಆರೋಪಿ ಬಾಲಾಪರಾಧಿಯೊಬ್ಬನನ್ನು ಬಂಧಿಸಲಾಗಿದ್ದು ಇನ್ನೂ ನ್ಯಾಯ ಮಂಡಳಿಯ ಮುಂದೆ ವಿಚಾರಣೆ ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಗುರುವಾರ ಅಪರಾಧಿಗಳನ್ನು ಪೊಲೀಸರು ವೆಲ್ಲೂರು ಸೆಷನ್ಸ್ ನ್ಯಾಯಾಧೀಶೆ (ಮಹಿಳಾ ತ್ವರಿತ ನ್ಯಾಯಾಲಯ) ಎಸ್. ಮಾಗೇಶ್ವರಿ ಬಾನು ರೇಖಾ ಅವರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು 20 ವರ್ಷ ಜೈಲು ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಮಾರ್ಚ್ 16, 2022ರಂದು ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಸಂತ್ರಸ್ತೆ ವೈದ್ಯೆ ಆಕೆಯ ಪುರುಷ ಸಹೋದ್ಯೋಗಿಯೊಂದಿಗೆ ಕಟ್ಪಾಡಿಯಲ್ಲಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದ ಐವರ ತಂಡ, ಶೇರ್ ಆಟೋ ಎಂದು ಹೇಳಿ ಇಬ್ಬರನ್ನೂ ಆಟೋಗೆ ಹತ್ತಿಸಿಕೊಂಡಿದೆ. ನಂತರ ಇಬ್ಬರನ್ನೂ ಪಾಲಾರ್ ನದಿ ತೀರಕ್ಕೆ ಕರೆದೊಯ್ದಿದೆ.

ಈ ವೇಳೇ ಪುರುಷ ಸಹೋದ್ಯೋಗಿಗೆ ಚಾಕು ತೋರಿಸಿ ಬೆದರಿಸಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ವೇಳೆ ಕಾಮುಕರು ಸಂತ್ರಸ್ತೆ ಮತ್ತು ಆಕೆಯ ಸಹೋದ್ಯೋಗಿಯ ಮೊಬೈಲ್ ಫೋನ್‌ಗಳು, ಎರಡು ಸವರನ್‌ ಚಿನ್ನಾಭರಣ ಮತ್ತು ಎಟಿಎಂ ಕಾರ್ಡ್‌ಗಳನ್ನು ದೋಚಿದ್ದರು. ಅವುಗಳಿಂದ 40,000 ರೂ. ಡ್ರಾ ಕೂಡ ಮಾಡಿಕೊಂಡಿದ್ದರು.

ಕುಡಿದ ಮತ್ತಿನಲ್ಲಿ ನಡೆದ ಜಗಳವೊಂದರಲ್ಲಿ ಈ ಗ್ಯಾಂಗ್‌ನ ಮೂವರು ಕಿರಾತಕರನ್ನು ಬಂಧಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಯ ಸಮಯದಲ್ಲಿ, ಅವರು ಇತರ ಇಬ್ಬರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಉಳಿದವರನ್ನು ಬಂಧಿಸಲು ಪೊಲೀಸರಿಗೆ ಸುಲಭವಾಯಿತು.

ನಂತರ ಸಂತ್ರಸ್ತೆ ವೈದ್ಯೆಯಿಂದ ಆನ್‌ಲೈನ್ ಮೂಲಕ ದೂರು ಪಡೆದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಈ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಈ ಮಹತ್ವದ ತೀರ್ಪು ನೀಡಿ ಕಾಮುಕರ ಹೆಡೆಮುರಿಕಟ್ಟಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ