ತಿ.ನರಸೀಪುರ: ರಕ್ತದಾನ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸುವ ಜತೆಗೆ ಶ್ರೇಷ್ಠ ಕೆಲಸ ಮಾಡಿದಂತಾಗುತ್ತದೆ. ಅಲ್ಲದೆ ಇದರಿಂದ ಪ್ರಾಣ ಉಳಿಸಿದ ಪುಣ್ಯವು ನಿಮ್ಮದಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್. ಹನುಮಂತು ಕರೆ ನೀಡಿದರು.
ತಾಲೂಕು ವಕೀಲ ಸಂಘದ ಆವರಣದಲ್ಲಿ ಶನಿವಾರ ವಕೀಲರ ಸಂಘ ಹಾಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯ ರಕ್ತ ಸಂಗ್ರಹ ಕೇಂದ್ರ ಸಹಾಯದೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಜೇಷ್ಠ ದಾನ. ಇದನ್ನು ಯಾರ ಒತ್ತಡಕ್ಕೂ ದಾನ ಮಾಡಬಾರದು ಸ್ವ ಇಚ್ಛೆಯಿಂದ ದಾನ ಮಾಡಬೇಕು. ಇದ್ದರಿಂದ ಒಂದು ಪ್ರಾಣ ಉಳಿಸಿದಂತಾಗುತ್ತದೆ ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಕೆವಲ 6 ಗಂಟೆಗಳಲ್ಲಿ ಅದು ಸರಿಹೋಗುತ್ತದೆ. ಆದ್ದರಿಂದ ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಇದೇ ಸಮಯದಲ್ಲಿ ನ್ಯಾಯಾಧೀಶರಾದ ಎಚ್.ಹನುಮಂತು ಮತ್ತು ಕೆ.ಎನ್.ವೆಂಕಟೇಶ್ ಅವರು ಸೇರಿದಂತೆ ವಕೀಲರು ರಕ್ತದಾನ ಮಾಡಿದರು.
ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಉಪಾಧ್ಯಕ್ಷ ಶಾಂತನಾಗರಾಜು, ಕಾರ್ಯದರ್ಶಿ ತುಂಬಲ ಸೋಮಣ್ಣ, ಸಹ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಸೋಸಲೆ ಮಹದೇವಸ್ವಾಮಿ ಹಾಗೂ ವಕೀಲರಾದ ಮಾದಪ್ಪ, ನಾಗಭೂಷಣ್, ಸಿದ್ದಪ್ಪಾಜಿ, ಅಣ್ಣೇಗೌಡ, ಜ್ಞಾನೇಂದ್ರಮೂರ್ತಿ, ಕಿರಣ್, ಉದಯಕುಮಾರ್ ನ್ಯಾಯಲಯದ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಇದ್ದರು.