ಹೈ ಕೋರ್ಟ್ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು!
ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ನಿಗಮಗಳು, ಮಂಡಳಿಗಳು, ಸಂಸ್ಥೆಗಳು ಹಾಗೂ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಮಾನ ವೇತನ, ಸಮಾನ ಸೌಲಭ್ಯ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ಏಕೀಕೃತ ಸೇವಾ ನಿಯಮ ಜಾರಿಗೊಳಿಸುವ ಕುರಿತು ನ್ಯಾಯ ಕೋರಿ ಮನವಿ.

ಬೆಂಗಳೂರು: ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ನಿಗಮಗಳು, ಮಂಡಳಿಗಳು, ಸಂಸ್ಥೆಗಳು ಹಾಗೂ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಮಾನ ವೇತನ, ಸಮಾನ ಸೌಲಭ್ಯ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ಏಕೀಕೃತ ಸೇವಾ ನಿಯಮ ಜಾರಿಗೊಳಿಸುವ ಕುರಿತು ನ್ಯಾಯ ಕೋರಿ ಕರ್ನಾಕಟದ ಹೈ ಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಸಾರಿಗೆ ನೌಕರರು ಮನವಿ ಮಾಡಿದ್ದಾರೆ.

ನಮಗೆ ಈ ನಾಲ್ಕು ವರ್ಷಕ್ಕೆ ಒಮ್ಮೆ ಬೀದಿಗಿಳಿದು ವೇತನ ಪಡೆಯುವ ಈ ಜಂಜಾಟಕ್ಕೆ ವಿರಾಮ ನೀಡಿ ನಮಗೆ ಶಾಶ್ವತ ಪರಿಹಾರ ಕೊಡುವುದಕ್ಕೆ ಉಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿರುವ ಪತ್ರವನ್ನು ನ್ಯಾಯಮೂರ್ತಿಗಳಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?:
ರವರಿಗೆ:
ಮಾನ್ಯ ನ್ಯಾಯಮೂರ್ತಿಗಳವರಿಗೆ,
High Court of Karnataka
ಬೆಂಗಳೂರು – 560001.
ವಿಷಯ: ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ನಿಗಮಗಳು, ಮಂಡಳಿಗಳು, ಸಂಸ್ಥೆಗಳು ಹಾಗೂ ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಸಮಾನ ವೇತನ, ಸಮಾನ ಸೌಲಭ್ಯ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಹಾಗೂ ಏಕೀಕೃತ ಸೇವಾ ನಿಯಮ ಜಾರಿಗೊಳಿಸುವ ಕುರಿತು ನ್ಯಾಯ ಕೋರಿ ಮನವಿ.
ಮಾನ್ಯರೇ,
ನಾವು ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ನಿಗಮಗಳು, ಮಂಡಳಿಗಳು ಹಾಗೂ ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಾಗಿದ್ದು, ಒಂದೇ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ವಿವಿಧ ಸಂಸ್ಥೆಗಳಲ್ಲಿ ವೇತನ, ಭathyೆ, ಸೌಲಭ್ಯ ಹಾಗೂ ಸೇವಾ ನಿಯಮಗಳಲ್ಲಿ ಭಾರೀ ಅಸಮಾನತೆ ಇರುವುದರಿಂದ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದೇವೆ.
ವಿಶೇಷವಾಗಿ KMF, KPTCL, BESCOM, BWSSB, KEA, KUWSDB ಹಾಗೂ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಸಮಾನ ವಿದ್ಯಾರ್ಹತೆ, ಸಮಾನ ಕೆಲಸ ಹಾಗೂ ಸಮಾನ ಹೊಣೆಗಾರಿಕೆ ಇದ್ದರೂ ಸಾರಿಗೆ ನಿಗಮಗಳ ನೌಕರರಿಗೆ ಮಾತ್ರ ಅನ್ಯಾಯವಾಗುತ್ತಿದೆ.
ಸಾರಿಗೆ ನಿಗಮ ನೌಕರರ ಪ್ರಮುಖ ಸಮಸ್ಯೆಗಳು:
🔴 38 ತಿಂಗಳ ಹಿಂಬಾಕಿ ವೇತನ (Arrears) ಸಂಪೂರ್ಣವಾಗಿ ನೀಡಲಾಗಿಲ್ಲ.
🔴 OT, DA, HRA, TA ಹಾಗೂ ಇತರೆ ಭathyೆಗಳನ್ನು ಕಾಲಕಾಲಕ್ಕೆ ನೀಡುತ್ತಿಲ್ಲ.
🔴 2024ರಿಂದ ವೇತನ ಪರಿಷ್ಕರಣೆ (Pay Revision) ಜಾರಿಗೊಳಿಸಲಾಗಿಲ್ಲ.
🔴 ಒಂದೇ ಸರ್ಕಾರದ ಅಧೀನದಲ್ಲಿದ್ದರೂ ಇತರ ನಿಗಮಗಳಿಗೆ ಹೋಲಿಸಿದರೆ ಕಡಿಮೆ ಸೌಲಭ್ಯ ನೀಡಲಾಗುತ್ತಿದೆ.
🔴 ಬೆಲೆ ಏರಿಕೆ ಹಿನ್ನೆಲೆ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ.
🔴 ಸಾವಿರಾರು ನೌಕರರು ಸಾಲ ಹಾಗೂ ಆರ್ಥಿಕ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ.
ಭಾರತ ಸಂವಿಧಾನದ Article 14, 16 ಹಾಗೂ 39(d) ಪ್ರಕಾರ “Equal Pay for Equal Work” ನಮ್ಮ ಹಕ್ಕಾಗಿದೆ. ಆದ್ದರಿಂದ ಮಾನ್ಯ ನ್ಯಾಯಾಲಯವು ಕರ್ನಾಟಕ ಸರ್ಕಾರಕ್ಕೆ ಕೆಳಕಂಡಂತೆ ನಿರ್ದೇಶನ ನೀಡುವಂತೆ ವಿನಮ್ರವಾಗಿ ಪ್ರಾರ್ಥಿಸುತ್ತೇವೆ:
✅ ಎಲ್ಲಾ ಸರ್ಕಾರಿ ನಿಗಮಗಳು ಹಾಗೂ ಸಂಸ್ಥೆಗಳಿಗೆ ಏಕೀಕೃತ ವೇತನ ನೀತಿ ಜಾರಿಗೊಳಿಸಬೇಕು.
✅ ಸರ್ಕಾರಿ ನೌಕರರಿಗೆ ನೀಡುವ ವೇತನ ಹಾಗೂ ಸೌಲಭ್ಯಗಳಿಗೆ ಸಮಾನವಾಗಿ ಸಾರಿಗೆ ನಿಗಮ ನೌಕರರಿಗೂ ವೇತನ ಮತ್ತು ಸೌಲಭ್ಯ ಜಾರಿಗೊಳಿಸಬೇಕು.
✅ ಎಲ್ಲಾ ನಿಗಮಗಳಿಗೆ ಒಂದೇ ರೀತಿಯ ಸೇವಾ ನಿಯಮ ಜಾರಿಗೊಳಿಸಬೇಕು.
✅ 38 ತಿಂಗಳ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.
✅ OT, DA, HRA, TA ಹಾಗೂ ಇತರೆ ಭತ್ಯಗಳನ್ನು ಕಾಲಕಾಲಕ್ಕೆ ನೀಡಬೇಕು.
✅ 2024ರಿಂದ ಬಾಕಿಯಿರುವ ವೇತನ ಪರಿಷ್ಕರಣೆಯನ್ನು ತಕ್ಷಣ ಜಾರಿಗೊಳಿಸಬೇಕು.
✅ ಸಾರ್ವಜನಿಕ ವಲಯ ಸಂಸ್ಥೆಗಳ ನೌಕರರಿಗೆ ಶಾಶ್ವತ ವೇತನ ಆಯೋಗ ರಚಿಸಬೇಕು.
✅ ಸರ್ಕಾರಿ ನಿಗಮಗಳ ನಡುವಿನ ವೇತನ ಅಸಮಾನತೆ ನಿವಾರಣೆ ಮಾಡಬೇಕು.
✅ ನೌಕರರ ಹಕ್ಕು ಹಾಗೂ ಮಾನವೀಯ ಗೌರವವನ್ನು ರಕ್ಷಿಸಬೇಕು.
ಸಾವಿರಾರು ನೌಕರರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದ ನ್ಯಾಯ ಒದಗಿಸುವಂತೆ ವಿನಮ್ರವಾಗಿ ಕೋರುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

Related









