ನ್ಯೂಡೆಲ್ಲಿ: ರಾಜಕೀಯ ದೊಂಬರಾಟದಲ್ಲಿ ಯಾರು ವೈರಿಗಳಲ್ಲ ಅದರಂತೆ ಯಾರು ಹತ್ತಿರದವರು ಅಲ್ಲ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತದೆ. ಈ ರೀತಿಯ ಬದಲಾದ ರಾಜಕೀಯ ಬೆಳವಣಿಗೆಯಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೂ ಕೂಡ ರಾಜೀನಾಮೆ ಇಂದು ಅಧಿಕೃತವಾಗಿ ತನ್ನ ಮಾತೃಪಕ್ಷಕ್ಕೆ ಮರಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಒಂದು ರೀತಿ ಶಾಕ್ ಕೂಡ ಕೊಟ್ಟಿದ್ದಾರೆ ಎಂದರೆ ಅಚ್ಚರಿಯೇನಲ್ಲ.
ಹೌದು! ಇಂದು ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅದ್ಯಕ್ಷ ನೆಡ್ಡಾ, ಕೇಂದ್ರಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿ ಅಂತಿಮ್ಮವಾಗಿ ಬಿಜೆಪಿಗೆ ಸೇರ್ಪಡೆಯಾದರು.
ರಾಷ್ಟ್ರದ ನಿರ್ಮಾಣಕ್ಕಾಗಿ ರಾಷ್ಟ್ರದ ಏಳಿಗೆಗಾಗಿ ಮೋದಿ ಅವರ ಕೈಬಲಪಡಿಸಲು ಬಿಜೆಪಿಗೆ ಮರು ಸೇರ್ಪಡೆಯಾಗುತ್ತಿದ್ದೇನೆ ಎಂದು ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ. ಫಾರಂ ನೀಡಲಿಲ್ಲವೆಂದು ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ನಿಂದ ಸ್ವರ್ಧಿಸಿದ್ದರೂ ಕೂಡ ಸೋಲು ಅನುಭವಿಸಿದರು. ಆ ನಂತರ ಕಾಂಗ್ರೆಸ್ ಪಕ್ಷ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತ್ತು.
ಪಂಚರಾಜ್ಯ ಚುನಾವಣೇ ಪಲಿತಾಂಶ, ರಾಮಮಂದಿರ ನಿರ್ಮಾಣ, ಇಂಡಿಯಾದ ಒಕ್ಕೊಟ್ಟದಲ್ಲಿ ಒಡಕು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಶೆಟ್ಟರ್ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗದಗ ಅಥವಾ ಬೆಳಗಾವಿಯಿಂದ ಸ್ಪರ್ಧಿಸಬಹುದು. ಏನೇ ಆಗಲಿ ಮತ್ತೆ ಮರಳಿ ತಮ್ಮ ಗೂಡಿಗೆ ಶೆಟ್ಟರ್ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮಣ್ ಸವದಿ ಸಹ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.