NEWSಸಂಪಾದಕೀಯಸಂಸ್ಕೃತಿ

ಲಿಂಗ ತಾರತಮ್ಯತೆ ಎಂಬ ಪರದೆ ಸರಿಸಿ ನೋವು ನಲಿವುಗಳ ಮುಕ್ತವಾಗಿ ಹಂಚಿಕೊಳ್ಳುವುದೇ ಸ್ನೇಹ – ಈ ಸಂಬಂಧ  ಬೆಸುಗೆಗೆ 6 ಮಾರ್ಗಗಳು

ವಿಜಯಪಥ ಸಮಗ್ರ ಸುದ್ದಿ

ಕ್ತ ಸಂಬಂಧಕ್ಕೂ ಮೀಗಿಲಾದ ಸಂಬಂಧವಿದೆ ಎಂದರೆ ಅದು ಸ್ನೇಹ ಸಂಬಂಧ ಮಾತ್ರ. ಇದು ಯಾವುದೇ ಕಲ್ಮಷವಿಲ್ಲದೆ ಪ್ರತಿಯೊಂದನ್ನು ಮುಕ್ತವಾಗಿ ಹಂಚಿಕೊಳ್ಳುವ ಸಂಬಂಧವಾಗಿದೆ. ಅಷ್ಟೇ ಅಲ್ಲ ಈ ಸ್ನೇಹ ಎಂಬುವುದು ವಿಶ್ವದಲ್ಲಿ ವರ್ಣಿಸಲು ನಿಲುಕದ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದಾಗಿದೆ.

ಭರವಸೆಗಳು, ನಂಬಿಕೆ ಮತ್ತು ನಿಷ್ಠೆಯ ಆಧಾರದ ಮೇಲೆ ಗೆಳತಿ/ ಗೆಳಯ ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ. ನಿಮ್ಮ ಉತ್ತಮ ಹಿತೈಷಿ ಎಂದರೆ ಆತ ಸ್ನೇಹಿತನೇ/ಳೇ ಆಗಿರುತ್ತಾರೆ. ಜೀವನದಲ್ಲಿ ಇಂತಹ ಸ್ನೇಹಿತರನ್ನು ಹೊಂದಲು ನಾವು ಅದೃಷ್ಟವಂತರಾಗಿರಬೇಕು.

ಆ ಅದೃಷ್ಟವಂತರ ಪಟ್ಟಿಯಲ್ಲಿ ನಾವಿದ್ದೇವೆಯೇ ಎಂಬುದರ ಬಗ್ಗೆ ಈ ಲೇಖನ ನಿಮಗೆ ನಿಮ್ಮ ಸ್ನೇಹಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ನೀವೆ ಓದಿ ನಿಮ್ಮ ಮನಸ್ಸಿನಲ್ಲೇ ನಮಗೆ ಉತ್ತಮ ಮಾರ್ಕ್ಸ್‌ಕೊಟ್ಟುಕೊಳ್ಳಿ.

ಒಳ್ಳೆಯ ಸ್ನೇಹಿತರೆಂದರೆ ಯಾರು?: ನಿಮ್ಮನ್ನು ಗೌರವಿಸುವ, ಪ್ರೋತ್ಸಾಹಿಸುವ ಮತ್ತು ನಿಮ್ಮೊಂದಿಗೆ ಕಷ್ಟ ಮತ್ತು ಸಂತೋಷದಲ್ಲಿ ಒಟ್ಟಾಗಿ ನಿಮ್ಮ ಜತೆಗೆ ನಿಂತು ಹೋರಾಡುವ ವ್ಯಕ್ತಿಯೇ ನಿಜವಾದ ಸ್ನೇಹಿತ. ಈ ಗುಣಗಳು ಅವರಿಗೆ ಇಲ್ಲ ಎಂದರೆ ಅಂಥವರು ಯಾರು ಎಂದು ನೀವೆ ನಿರ್ಧರಿಸಿ.

ಇನ್ನು ಉತ್ತಮ ಸ್ನೇಹಿತರಾಗಲು ಇರುವ ಮಾರ್ಗಗಳು: ಒಂದು ಸಂವಹನವು ಪ್ರತಿ ಸಂಬಂಧದ ಅಡಿಪಾಯವನ್ನು ರೂಪಿಸುತ್ತದೆ. ಸ್ನೇಹದಲ್ಲಿಯೂ ಸಹ, ನಾವು ಸಂವಹನ ಮಾಡಲು ಮತ್ತು ಅವರಿಗೆ ಸ್ಪಷ್ಟತೆಯನ್ನು ನೀಡಲು ಸಾಧ್ಯವಾಗುತ್ತದೆ.

ಜೀವನದಲ್ಲಿ ಸ್ನೇಹ ಬಹಳ ಎಂಬುವುದು ಬಹಳ ಮುಖ್ಯ. ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಯಾರಾದರೂ ಇರುವುದರಿಂದ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಇದು ನಮಗೆ ಸಹಾಯ ಮಾಡುತ್ತದೆ. ಇದು ಸ್ಥೈರ್ಯ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿಜವಾದ ಸ್ನೇಹಿತ ಅಂದರೆ ನಮ್ಮನ್ನು ಎಂದಿಗೂ ಕೆಟ್ಟ ಮನಸ್ಥಿತಿಯಲ್ಲಿರಲು ಬಿಡುವುದಿಲ್ಲ. ಆತ ಶಕ್ತಿಮೀರಿ ಸ್ನೇಹಕ್ಕೆ ಮೌಲ್ಯಯುತವಾಗುವ ರೀತಿಯಲ್ಲೇ ನಡೆದುಕೊಳ್ಳುತ್ತಾನೆ/ ನಡೆದುಕೊಳ್ಳುತ್ತಾಳೆ. ಸ್ನೇಹಿತರ ನಡುವೆ ಬಹುವಚನ ಎಂಬುವುದರ ಸುಳಿವೇ ಇರುವುದಿಲ್ಲ ಅವರು ವಯಸ್ಸಿನಲ್ಲಿ ದೊಡ್ಡವರಿರಲಿ ಚಿಕ್ಕವರಿರಲಿ ಸ್ನೇಹಕ್ಕೆ ಆ ವಯಸ್ಸಿನ ಪರಿವೇ ಇಲ್ಲ.

ನಂಬಿ, ನಂಬಲರ್ಹರಾಗಿರುವುದು : ನಿಮ್ಮ ಸ್ನೇಹಿತರನ್ನು ನಂಬಿ ಮತ್ತು ಅವರ ರಹಸ್ಯಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಭಾವನಾತ್ಮಕವಾದ ಕೆಲವು ವಿಚಾರಗಳಿಗೆ ಸ್ಪಂದಿಸಿ. ಇಬ್ಬರು ಕೂಡಾ ಒಬ್ಬರಿಗೊಬ್ಬರು ಒಟ್ಟಾಗಿರಬೇಕು. ಅವರಿಗೆ ಮನಃಪೂರ್ವಕವಾಗಿ ಪ್ರತಿಕ್ರಿಯಿಸಬೇಕು ಮತ್ತು ಉತ್ತಮ ಸಲಹೆಯನ್ನು ನೀಡಬೇಕು.

ಅಹಂಕಾರ ಎಂಬುವುದು ಸುಳಿಯಬಾರದು: ಗೆಳೆಯ/ ಗೆಳತಿಯರ ನಡುವೆ ಅಹಂಕಾರಗಳು ಇದ್ದಾಗ ನೀವು ಸಂಬಂಧದಲ್ಲಿ ಸ್ನೇಹವನ್ನು ಬಿಲ್ಡ್‌ ಮಾಡಲು ಸಾಧ್ಯವಿಲ್ಲ. ಅಹಂಕಾರದ ಜಗಳ ಇರುವವರೆಗೂ ನೀವು ಆರೋಗ್ಯಕರ ಸಂಬಂಧ ಹೊಂದಲು ಸಾಧ್ಯವಿಲ್ಲ. ಉತ್ತಮ ಸ್ನೇಹಿತರಾಗಲು ನೀವು ಗಂಭೀರವಾಗಿರುತ್ತಿದ್ದರೆ ಸಣ್ಣ ವಿಷಯಕ್ಕೂ ಜಗಳ ಮಾಡಿಕೊಳ್ಳಬೇಡಿ. ಸ್ನೇಹಿತರ ನಡುವೆ ಜಗಳವು ಇರಬೇಕು. ಆದರೆ ಅದು ಆರೋಗ್ಯಕರವಾಗಿರಬೇಕು. ಒಬ್ಬರಿಗೊಬ್ಬರು ಆ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕು.

ಪ್ರೀತಿ ಮತ್ತು ಕಾಳಜಿ: ಇನ್ನು ನಿಮ್ಮ ಸ್ನೇಹಿತರ ಬಗ್ಗೆ ಪ್ರೀತಿ ಮತ್ತು ಕಾಳಜಿ ವಹಿಸಿ. ನಿಮ್ಮ ನಿಮ್ಮ ಜೀವನದಲ್ಲಿ ಏನಾದರೂ ಮಹತ್ತರವಾದ ಘಟನೆ ಸಂಭವಿಸಿದಾಗ ಒಬ್ಬ ಒಳ್ಳೆಯ ಸ್ನೇಹಿತ ಹೆಚ್ಚು ಉತ್ಸುಕನಾಗುತ್ತಾನೆ. ಅವರು ನಿಮ್ಮ ಭವಿಷ್ಯಕ್ಕಾಗಿ ಎದುರು ನೋಡುತ್ತಿರುತ್ತಾರೆ.

ಒಬ್ಬರಿಗೊಬ್ಬರು ಭರಸವೆ, ಧೈರ್ಯ ನೀಡಿ: ನಾವು ಎಷ್ಟೇ ಪ್ರಯತ್ನಿಸಿದರೂ ಕಷ್ಟದ ಸಮಯ ಮತ್ತು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಷ್ಟದ ಸಮಯದಲ್ಲಿ ಭರವಸೆಯನ್ನು ನೀಡಿ ಅವರ ಜತೆಗೆ ಇರಿ. ಕೆಲವು ಉತ್ತಮ ಸಲಹೆ ಜತೆಗೆ ಸಮಾಧಾನದ ಮಾತುಗಳನ್ನಾಡಿ.

ಅವರ ಆಯ್ಕೆಗಳನ್ನು ಗೌರವಿಸಿ: ಯಾವುದೇ ಸಂಬಂಧ ಕೂಡಾ ದೀರ್ಘಕಾಲ ಉಳಿಯ ಬೇಕಾದರೆ ಅವರ ಆಯ್ಕೆ ಉತ್ತಮ ಎನಿಸಿದರೆ ಗೌರವಿಸುವುದು ಮುಖ್ಯ. ಹಾಗೇ ನಿಮಗೆ ಅವರ ಆಯ್ಕೆ ತಪ್ಪು ಎಂದು ನಿಮ್ಮ ಗಮನಕ್ಕೆ ಬಂದರೆ ಅವರಿಗೆ ನಯವಾಗಿ ಬುದ್ಧಿ ಹೇಳಿ ತಿದ್ದುವ ಕೆಲಸ ಮಾಡಬೇಕು.

ಉತ್ತಮ ಸ್ನೇಹಿತರು ಯಾರು? ಇಲ್ಲಿ ಗೆಳೆಯ ಮತ್ತು ಗೆಳತಿಯರಷ್ಟೇ ಉತ್ತಮ ಸ್ನೇಹಿತರಲ್ಲ. ಪತಿ-ಪತ್ನಿ. ಅಣ್ಣ, ತಮ್ಮ, ಅಕ್ಕ, ತಂಗಿ, ಸೋದರ ಸಂಬಂಧಿಗಳು ಹಾಗೂ ಮುಖ್ಯವಾಗಿ ಅಪ್ಪ ಅಮ್ಮನೂ ಕೂಡ ನಮಗೆ ಉತ್ತಮ ಸ್ನೇಹಿತರಾಗಬಲ್ಲರು. ಅಂದರೆ, ಅಪ್ಪನೊಂದಿಗೆ ತನಗೆ ಆಗುತ್ತಿರುವ ದುಃಖ ಮತ್ತ ಸಂತೋಷವನ್ನು ಹಂಚಿಕೊಂಡಾಗ ಅವರು ನಿಮ್ಮನ್ನು ಸ್ನೇಹಿತರ ರೀತಿಯಲ್ಲೇ ನೋಡುತ್ತಾರೆ.

ಹೀಗಾಗಿ ಈ ಸ್ನೇಹ ಸಂಬಂಧ ಎಂಬುವುದನ್ನು ಈ ವ್ಯಕ್ತಿಯಿಂದಲೇ ಕಾಣಬೇಕು ಎಂದು ಯೋಚಿಸುತ ಕೂರುವ ಅಗತ್ಯವಿಲ್ಲ. ನಮ್ಮ ಮಕ್ಕಳು ಕೂಡ ಸ್ನೇಹಿತರಾಗುತ್ತಾರೆ. ಅದರಂತೆ ನಮ್ಮ ಅಪ್ಪ, ಅಮ್ಮನು ಕೂಡ ಒಳ್ಳೆ ಸ್ನೇಹಿತರಾಗಿತ್ತಾರೆ. ಸೋದರ ಸಂಬಂಧಿಗಳು ಸ್ನೇಹಿತರಾಗಿರುತ್ತಾರೆ. ಆದರೂ ಈ ಎಲ್ಲವನ್ನು ಮೀರಿದ ಅಂದರೆ ರಕ್ತ ಸಂಬಂಧವೇ ಇಲ್ಲದ ಸ್ನೇಹಿತನ ಜತೆಗೆ ಮುಕ್ತ ಮುಕ್ತವಾಗಿ ಎಲ್ಲವನ್ನು ಹಂಚಿಕೊಳ್ಳಬಹುದು.

ಒಟ್ಟಾರೆ ಸ್ನೇಹಕ್ಕೆ ಇತರ ಸಂಬಂಧಗಳ ಪರದೆ ಇರದೆ ಎಲ್ಲವನ್ನು ಸರಿಸಿ ಮುಕ್ತವಾಗಿ ನಾವು ಯಾರೊಂದಿಗೆ ನೋವು ನಲಿವುಗಳನ್ನು ಹಂಚಿಕೊಳ್ಳುತ್ತೇವೆಯೋ ಅವರೆ ನಮಗೆ ಉತ್ತಮ ಸ್ನೇಹಿತರು. ಈ ಸ್ನೇಹಿತರ ದಿನದಂದು ನಮ್ಮ ನಮ್ಮ ಸ್ನೇಹಿತರನ್ನು ಭೇಟಿ ಮಾಡಿ ಸ್ನೇಹವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳೋಣ. ಭೇಟಿ ಸಾಧ್ಯವಾಗದಿದ್ದರೆ ನಾವಿರುವಲ್ಲಿಯೇ ಶುಭಕೋರಿ ಸಂತಸ ಹಂಚಿಕೊಳ್ಳೋಣ…

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು