ನಾಲ್ಕು ನಿಗಮದ ಸಾರಿಗೆ ನೌಕರರು ತಿಳಿದುಕೊಂಡಿರುವ ಹಾಗೆ ನಾನು ಕೂಟ ಬಿಟ್ಟು ಹೋಗಿದ್ದಲ್ಲ ನನ್ನನ್ನು ಕೂಟದ ಅಧ್ಯಕ್ಷ ಚಂದ್ರು ರವರೇ 16.05.2021 ರಂದು ಕೂಟದಿಂದ ಉಚ್ಛಾಟನೆ ಮಾಡಿರುವುದು ಎಂದು ಈ ಹಿಂದೆಯೂ ಕೂಡ ನಾನು ಹೇಳಿದ್ದೆ. ಆದರೆ ಅದನ್ನು ಸರಿಯಾಗಿ ಗಮನಿಸದೆ ನೌಕರರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ ಅದಕ್ಕೆ ಈಗ ಮತ್ತೆ ಈ ಹೇಳಿಕೆ ಕೊಡುತ್ತಿದ್ದೇನೆ.
ಏಪ್ರಿಲ್ 7, 2021 ರಂದು ಮುಷ್ಕರ ನಡೆದಿರುವುದು. ಮುಂದಿನ ತಿಂಗಳು ಅಂದರೆ ಮೇ ತಿಂಗಳಲ್ಲೇ ನನ್ನನ್ನು ಉಚ್ಛಾಟನೆ ಮಾಡಿದರು. ಕಾರಣ ಇಷ್ಟೇ ಇವರು ತೆಗೆದುಕೊಳ್ಳುವ ನಿರ್ಧಾರಗಳು ಯಾರ ಜತೆ ಚರ್ಚೆ ಮಾಡದೆ ಸಂಘಟನೆಯ ಭಾಗವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ.
ಅಂದರೆ ಬೈಲ ಪ್ರಕಾರ ಸಭೆಗಳನ್ನು ಮಾಡಿ ಆ ಸಭೆಯಲ್ಲಿ ಅಜೆಂಡಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ಅಲ್ಲಿ ಯಾರ್ಯಾರು ಸೇರಿದ್ದಾರೆ ಅವರ ಸಹಿಗಳನ್ನು ಪಡೆದು ಮುಂದಿನ ನಿರ್ಧಾರ ಮಾಡುತ್ತಿರಲಿಲ್ಲ. ಇವರು ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಈ ವಿಷಯವಾಗಿ ಎಲ್ಲರಿಗೂ ಮುಂಚಿತವಾಗಿ ನಾನೆ ಇದನ್ನ ಪ್ರಶ್ನೆ ಮಾಡುತ್ತಿದ್ದದ್ದು .
ಜತೆಗೆ ಅಧಿಕಾರಿಗಳು ಮತ್ತು ಸರ್ಕಾರದ ಕೈವಾಡ ಕೂಡ ಇದೆ. ಏಕೆಂದರೆ ನಾನು ಈ ಹಿಂದೆ ಹಲವಾರು ಹೋರಾಟಗಳನ್ನು ಮಾಡಿಕೊಂಡು ನೇರವಾಗಿ ನೌಕರರ ಪರವಾಗಿ ಪ್ರಶ್ನೆ ಮಾಡುತಿದ್ದೆ ಮತ್ತು ಈ ಹಿಂದೆ ಮೂರು ( 3 ) ಹೋರಾಟ ಮಾಡಿದ್ದು ಅಂದರೆ 2008 , 2012 , 2016 ಹೀಗೆ ಅದರಲ್ಲೂ ಕೂಡ ಭಾಗಿಯಾಗಿ ಅಧಿಕಾರಿಗಳು ಮತ್ತು ಸರಕಾರದ ಜತೆ ಚರ್ಚೆ ನಡೆಸಿರುವ ಅನುಭವವಿತ್ತು.
ಆದ್ದರಿಂದ ನಾನು ಇವರ ಜತೆ ಕೇಂದ್ರ ಕಚೇರಿಗೆ ಹೋದರೆ ಇವರ ಬಣ್ಣಗಳು ಬಯಲಾಗುತ್ತವೆ ಎಂಬ ವಿಷಯವಾಗಿ ಕೂಟದ ಅಧ್ಯಕ್ಷ ಚಂದ್ರು ಅವರ ಕೈಯಲ್ಲೇ ಈ ಕೆಲಸ ಮಾಡಿಸಬೇಕು ಎಂದು ನನ್ನನ್ನು ಯಾವುದೇ ಒಂದು ಮೀಟಿಂಗ್ ಕೂಡ ಕೇಂದ್ರ ಕಚೇರಿಗಾಗಲಿ ಕಾರ್ಮಿಕರ ಇಲಾಖೆಗಾಗಲಿ ಎಲ್ಲಿಗೂ ಕರೆದುಕೊಂಡು ಹೋಗದೆ ನನ್ನನ್ನು ಕೂಟದಿಂದ ಹೊರಗೆ ಹಾಕಲು ಇವರ ಪಾತ್ರ ಕೂಡ ಇದೆ. ಆದ್ದರಿಂದ ಇವರು ನನ್ನನ್ನು ಕೂಟದಿಂದ ಉಚ್ಛಾಟನೆ ಮಾಡಿದರು. ಹಲವಾರು ನೌಕರರು ನಾನೇ ಕೂಟ ಬಿಟ್ಟು ಹೋಗಿದ್ದೇನೆ ಎಂದು ತಪ್ಪು ತಿಳಿದುಕೊಂಡಿದ್ದಾರೆ.
ಜತೆಗೆ ಕೂಟದ ಪದಾಧಿಕಾರಿಗಳು ರಾಜ್ಯದಲ್ಲೇಡೆ ಹೋದಾಗ ಬಂದಾಗ ನನ್ನ ವಿಷಯದ ಬಗ್ಗೆ ನೌಕರರು ಕೇಳಿದಾಗ ಕೂಟ ಬಿಟ್ಟು ಅವರೇ ಹೋಗಿದ್ದಾರೆ ಎಂದು ತಿಳಿಸಿರುತ್ತಾರೆ. ಇದನ್ನು ಹಲವಾರು ನೌಕರರು ನನಗೆ ಈಗಲೂ ಕೂಡ ಪ್ರಶ್ನೆ ಮಾಡುತ್ತಿದ್ದಾರೆ. ನೀವು ಯಾಕೆ ಕೂಟ ಬಿಟ್ಟು ಹೋದದ್ದು, ನೀವು ಹಿಂದೆ ನೀವೇ ಅದನ್ನ ಕಟ್ಟಿದ್ದು ನೀವೇ ಅದನ್ನು ಬೆಳೆಸಿದ್ದು ನಾವು ನಿಮ್ಮನ್ನೇ ನೋಡಿದ್ದು ಹಿಂದೆಯಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದನ್ನು. ಈಗ ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಈಗಲೂ ಕೂಡ ಪ್ರಶ್ನೆ ಮಾಡುತ್ತಿದ್ದಾರೆ.
ಮತ್ತೆ ಅಲ್ಲಿಂದ ಇಲ್ಲಿಯ ತನಕ ನಾನು ಬೇರೆ ಯಾವುದೇ ಸಂಘಟನೆಗಳ ಜೊತೆ ಹೋಗಿಲ್ಲ ಮತ್ತೆ ನಾನು ಅಲ್ಲಿ ಗುರುತಿಸಿಕೊಂಡಿಲ್ಲ ಸುಖ ಸುಮ್ಮನೆ ಅವರು ಬೇರೆ ಸಂಘಗಳ ಜತೆ ಹೋಗಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ ನಾನು ಎಲ್ಲಿಯೂ ಕೂಡ ಯಾವ ಸಂಘಟನೆಗೂ ಕೂಡ ಹೋಗಿಲ್ಲ ಇದು ನನ್ನ ಸ್ಪಷ್ಟನೆ.
l ಆನಂದ – 7406626679