Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ!

ವಿಜಯಪಥ ಸಮಗ್ರ ಸುದ್ದಿ
  • ಕಸ ಗುಡಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಬಲವಂತ ಮಾಡುವಲ್ಲಿ ಘಟಕ- 2ರ ಘಟಕ ವ್ಯವಸ್ಥಾಪಕ ಕಾಂತರಾಜು ಬಲೂ ಮುಂದು!
  • ವಿಭಾಗದಲ್ಲಿ ಸ್ವಚ್ಛತಾ ಗುತ್ತಿಗೆ ಪಡೆದವರು ಕಾರ್ಮಿಕ ರ ಕಳಿಸುತ್ತಿಲ್ಲ ಬೇಜವಾಬ್ದಾರಿ
  • ಸ್ವಚ್ಛತಾ ಕಾರ್ಮಿಕರು ಬರದಿರುವುದಕ್ಕೆ ಚಾಲನಾ ಸಿಬ್ಬಂದಿಗಳನ್ನೇ ಸ್ವಚ್ಛತಾ ಕಾರ್ಮಿಕರನ್ನಾಗಿ ಮಾಡಿಕೊಂಡ ಡಿಪೋ ಮಟ್ಟದ ಅಧಿಕಾರಿಗಳು ಅದಕ್ಕೆ ಮಣೆ ಹಾಕಿದ ಡಿಸಿ ಮೇಡಂ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲಕ ನಿರ್ವಾಹಕರೇ ಕಸ ಗುಡಿಸಬೇಕು, ಬಸ್‌ ತೊಳೆಯಬೇಕು. ಈ ಅಧಿಕಾರಿಗಳ ಬೇಜವಾವ್ದಾರಿಗೆ ಚಾಲನಾ ಸಿಬ್ಬಂದಿ ಎರಡೆರಡು ಕೆಲಸ ಮಾಡಬೇಕು. ಒಂದು ವೇಳೆ ನಾವು ಬಸ್‌ ಸ್ವಚ್ಛಗೊಳಿಸಲ್ಲ, ಕಸಗುಡಿಸಲ್ಲ ಎಂದರೆ ಅಂಥ ನೌಕರರನ್ನು ಟಾರ್ಗೆಟ್‌ ಕೂಡ ಮಾಡಲಾಗುತ್ತಿದೆ.

ಹೌದು! ಕಳೆದ 4-5 ತಿಂಗಳುಗಳಿಂದಲೂ ಇದೇ ಸಮಸ್ಯೆ ಎದುರಾಗಿದೆ. ಈವರೆಗೂ ಸಮರ್ಪಕವಾಗಿ ಸ್ವಚ್ಛತ ಕಾರ್ಮಿಕರು ಇಲ್ಲ. ಇದರಿಂದ ಬೆಳಗ್ಗೆ ಡ್ಯೂಟಿಗೆ ಬರುವ ಚಾಲಕರು ಮತ್ತು ನಿರ್ವಾಹಕರೆ ಬಸ್‌ ಸ್ವಚ್ಛಗೊಳಿಸಿಕೊಳ್ಳಬೇಕು. ಜತೆಗೆ ಬಸ್‌ ಒಳಗೆ ಕಸಗುಡಿಸುವ ಕೆಲಸ ಮಾಡಿಸಬೇಕಾಗಿದೆ.

ಇನ್ನು ನಾವು ಸ್ವಚ್ಛಗೊಳಿಸುವ ಕೆಲಸಕ್ಕೆ ಬಂದಿಲ್ಲ ನಾವೇಕೆ ಮಾಡಬೇಕು ನಮ್ಮ ಡ್ಯೂಟಿಯನ್ನು ನಾವು ಮಾಡುವುದಕ್ಕೆ ಬಿಡಿ ಎಂದು ಚಾಲನಾ ಸಿಬ್ಬಂದಿಗಳು ಘಟಕ ವ್ಯವಸ್ಥಾಪಕರಿಗೆ ಹೇಳಿದರೆ ಅಂತ ನೌಕರರನ್ನು ಈ ಘಟಕ ಮಟ್ಟದ ಅಧಿಕಾರಿಗಳು ಟಾರ್ಗೆಟ್‌ ಮಾಡಿ ಸರಿಯಾಗಿ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಅದಕ್ಕೆ ತಾಜಾ ನಿದರ್ಶನ ಎಂಬಂತೆ ಬಿಎಂಟಿಸಿ ಘಟಕ -2 ಡಿಎಂ ಇ.ಕಾಂತರಾಜು ಅವರನ್ನು ವಿಜಯಪಥ ವರದಿಗಾರರು ವಿಷಯ ತಿಳಿದುಕೊಳ್ಳವ ಸಂಬಂಧ ಫೋನ್‌ ಮೂಲಕ ಸಂಪರ್ಕಿಸಿದಾಗ ಮೊದಲಿಗೆ ಕರೆ ಸ್ವೀಕರಿಸಿ ತಾಳ್ಮೆಯಿಂದಲೇ ಮಾತನಾಡುತ್ತಿದ್ದ ಅವರು ಅಷ್ಟೇ ಸಿಟ್ಟಿನಿಂದ ಕರೆಯನ್ನು ಕಟ್ ಮಾಡಿದರು. ಮತ್ತೆ 2-3ಬಾರಿ ಫೋನ್‌ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ.

ಅಂದರೆ. ಈ ಡಿಎಂ ಕಾಂತರಾಜು ಮೇಲೆ ನೌಕರರು ಮಾಡಿದ ಆರೋಪ ಸತ್ಯ ಎಂಬಂತೆ ನಡೆದುಕೊಂಡಿದ್ದಾರೆ. ಇವರು ಚಾಲನಾ ಸಿಬ್ಬಂದಿಗಳನ್ನು ಬಸ್‌ ಸ್ವಚ್ಛಗೊಳಿಸುವುದಕ್ಕೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಇವರ ಮಾತು ಕೇಳದ ನೌಕರರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬುವುದು ಇವರ ನಡೆಯಿಂದ ಗೊತ್ತಾಗುತ್ತಿದೆ.

ಇನ್ನು ಬಿಎಂಟಿಸಿ ಘಟಕ 20ರ ಘಟಕ ವ್ಯವಸ್ಥಾಪಕರನ್ನು ಫೋನ್‌ ಮೂಲಕ ಸಂಪರ್ಕಿಸಿದಾಗ ಅವರು ಇರುವ ವಾಸ್ತವತೆಯನ್ನು ತಿಳಿಸಿದ್ದಾರೆ. ನಿಗಮದಿಂದ ಖಾಸಗಿಯಾಗಿ ಎಂಟರ್‌ ಪ್ರೈಸಸ್‌ ಒಂದಕ್ಕೆ ಸ್ವಚ್ಛತಾ ಟೆಂಟರ್‌ ಕೊಟ್ಟಿದ್ದು ಆ ಗುತ್ತಿಗೆ ಪಡೆದವರು ಸರಿಯಾಗಿ ಕಾರ್ಮಿಕರನ್ನು ಕಳುಹಿಸದೆ ಇರುವುದರಿಂದ ಅನಿವಾರ್ಯವಾಗಿ ನಾವು ಸೇರಿದಂತೆ ನಮ್ಮ ಸಿಬ್ಬಂದಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಅಭಿಯಾನದ ರೀತಿ ಸೇರಿಕೊಂಡು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಘಟಕ 34ರ ಘಟಕ ವ್ಯವಸ್ಥಾಪಕರು ಹೌದು ಗುತ್ತಿಗೆ ಪಡೆದುಕೊಂಡಿರುವ ಖಾಸಗಿ ಎಂಟರ್‌ ಪ್ರೈಸಸ್‌ನಿಂದ ಬರಬೇಕಿರುವಷ್ಟು ಕಾರ್ಮಿಕರು ಬರುತ್ತಿಲ್ಲ 7ಜನರು ಬರಬೇಕಿರುವ ಸ್ಥಳದಲ್ಲಿ ಕೇವಲ ಒಬ್ಬಿಬ್ಬರು ಮಾತ್ರ ಇರುತ್ತಾರೆ ಹೀಗಾಗಿ ಬಸ್‌ಗಳನ್ನು ನಮ್ಮ ಸಿಬ್ಬಂದಿಗಳೆ ಕೆಲವೊಮ್ಮೆ ಸ್ವಚ್ಛಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ನಿಗಮದ ದಕ್ಷಿಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆಶಾಲತಾ ಅವರನ್ನು ಫೋನ್‌ ಮೂಲಕ ಸಂಪರ್ಕಿಸಲು ವಿಜಯಪಥ ವರದಿಗಾರರು ಕರೆ ಮಾಡಿದರು ಅವರು ಕರೆ ಸ್ವೀಕರಿಸಲಿಲ್ಲ. ಅಥವಾ ನಾವು ಬೇರೆ ಕೆಲಸದ ಒತ್ತಡದಲ್ಲಿದ್ದೇವೆ ಎಂಬ ಮೆಸೆಜ್‌ ಕೂಡ ಮಾಡಲಿಲ್ಲ. ಡಿಸಿ ಮೇಡಂ ಅವರು ಯಾವ ಒತ್ತಡಕ್ಕೆ ಸಿಲುಕಿದ್ದರೋ ಗೊತ್ತಾಗಲೇ ಇಲ್ಲ.

ಅದೇನೆ ಇರಲಿ ನಿಗಮದಲ್ಲಿ ಚಾಲನಾ ಸಿಬ್ಬಂದಿಗಳಿಗೆ ಅವರದಲ್ಲದ ಕೆಲಸಗಳನ್ನು ಮಾಡಿ ಎಂದು ಒತ್ತಡ ಹೇರುವುದು ಎಷ್ಟು ಸರಿ. ಇನ್ನಾದರೂ ವಿಭಾಗೀಯ ನಿಯಂತ್ರಣಾಧಿಕಾರಿ ಆಶಾಲತಾ ಅವರು ಈ ರೀತಿಯ ಪ್ರಮಾದಗಳು ಡಿಪೋ ಮಟ್ಟದಲ್ಲಿ ಆಗದಂತೆ ಎಚ್ಚರಿಕೆ ವಹಿಸುವ ಮೂಲಕ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ.

ಇನ್ನು ಆ ಖಾಸಗಿ ಎಂಟರ್‌ ಪ್ರೈಸಸ್‌ನವರಿಗೆ ಕೊಟ್ಟಿರುವ ಗುತ್ತಿಗೆಯನ್ನು ರದ್ದುಪಡಿಸಿ ಬೇರೆಯವರಿಗೆ ಕೊಟ್ಟರೆ ಅವರಾದರೂ ಸರಿಯಾಗಿ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡಲು ಅನುಕೂಲ ಆಗುತ್ತದೆ. ಆದರೆ ಆ ಕೆಲಸ ಮಾಡದವರ ಗುತ್ತಿಗೆ ಕರಾರು ಅವಧಿ 2025ರ ಜೂನ್‌ ಅವರೆಗೂ ಇದೆ ಎಂದು ಈ ರೀತಿ ಚಾಲನಾ ಸಿಬ್ಬಂದಿಗಳಿಂದ ಕೆಲಸ ಮಾಡಿಸುವುದು ಕಾನೂನು ಬಾಹಿರವಾಗುತ್ತದೆ. ಈ ಬಗ್ಗೆ ಡಿಸಿ ಮೇಡಂ ಎಚ್ಚೆತ್ತುಕೊಂಡು ಆಗುತ್ತಿರುವ ತಪ್ಪನ್ನು ತಿದ್ದಿಕೊಳ್ಳಬೇಕಿದೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್