Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ

ವಿಜಯಪಥ ಸಮಗ್ರ ಸುದ್ದಿ
  •  ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬ ಹರಿದಿನ ಆಚರಿಸಲು ಅವಕಾಶ ಇಲ್ಲ
  •  ಸರಿಯಾದ ರೀತಿಯಲ್ಲಿ ವಾರದ ರಜೆ, ಹಬ್ಬದ ರಜೆ, ಸರ್ಕಾರಿ ರಜೆಗಳು ಇಲ್ಲ
  • ಜೇಷ್ಠತೆಗೆ ಅನುಸಾರವಾಗಿ ಡ್ಯೂಟಿ ನಿಯೋಜನೆ ಇಲ್ಲ
  • ಚಾಲನಾ ಮತ್ತು ನಿರ್ವಾಹಕರ ಜತೆ ಜತೆಗೆ ಅಧಿಕಾರಿಗಳು- ಸಿಬ್ಬಂದಿಗಳು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿದ ನೌಕರ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಕಚೇರಿಗಳು, ಘಟಕಗಳು, ಕಾರ್ಯಾಗಾರಗಳಲ್ಲೂ ಕನ್ನಡ ರಾಜ್ಯೋತ್ಸವ ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಮೂಲಕ ಸಮಸ್ತ ನೌಕರರು ರಾಜ್ಯಕ್ಕೆ ಗೌರವ ಅರ್ಪಿಸುವುದನ್ನು ಮರೆಯಲಿಲ್ಲ.

ಅದರಂತೆ ಪುತ್ತೂರು ಘಟಕದ ವತಿಯಿಂದಲೂ ಕನ್ನಡ ರಾಜ್ಯೋತ್ಸವವನ್ನು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಈ ಮೂಲಕ ನಮ್ಮ ರಾಜ್ಯಕ್ಕೆ ಗೌರವ ಅರ್ಪಿಸುವ ಪುಣ್ಯದ ಕಾರ್ಯವು ನಡೆಯಿತು. ಇದು ನಮಗೆ ಹೆಮ್ಮೆಯ ಪ್ರತೀಕ.

ಆದರೆ, ನಾನು ಭಾಗವಹಿಸಿಲ್ಲ. ಏಕೆಂದರೆ ನಮ್ಮ ಚಾಲಕರು ಮತ್ತು ನಿರ್ವಾಹಕರು ಪಡುವ ಕಷ್ಟ ನೋಡಿ ತುಂಬಾ ಬೇಸರ ಆಗಿದೆ. ಜೇಷ್ಠತೆಗೆ ಅನುಸಾರವಾಗಿ ಡ್ಯೂಟಿ ನಿಯೋಜನೆ ಇಲ್ಲ. ಕುಟುಂಬ ಸದಸ್ಯರ ಜೊತೆ ಸೇರಿ ಹಬ್ಬ ಹರಿದಿನ ಆಚರಿಸಲು ಅವಕಾಶ ಇಲ್ಲ. ಸರಿಯಾದ ರೀತಿಯಲ್ಲಿ ವಾರದ ರಜೆ, ಹಬ್ಬದ ರಜೆ, ಸರ್ಕಾರಿ ರಜೆಗಳು ಇಲ್ಲ.

ಈ ಎಲ್ಲವೂ ಇಲ್ಲ ಎಂಬುದರ ನಡುವೆಯೂ‌ ಡಬಲ್ ಡ್ಯೂಟಿ ಮಾಡಲು ಒತ್ತಡ. ಎರಡು ವರ್ಷದ ರಜೆ ನಗದೀಕರಣ ಹಣ ಕೊಡಲು ಬಾಕಿ ಇದೆ. ಜತೆಗೆ 38 ತಿಂಗಳ ವೇತನದ ಅರಿಯರ್ಸ್ ಕೊಡಲು ಬಾಕಿ ಇದೆ. ಇನ್ನು ಇಷ್ಟೇ ಪ್ರಮುಖವಾದ 2024ರ ವೇತನ ಹೆಚ್ಚಳ ಆಗದೆ 10 ತಿಂಗಳೇ ಕಳೆದು ಹೋಗಿವೆ.

ಈ ಎಲ್ಲದರ ಬಗ್ಗೆ ಜತೆಗೆ ಸಾರ್ವಜನಿಕರ ಸೇವೆಯಲ್ಲಿ ಶ್ರಮದಾನದೊಂದಿಗೆ ದುಡಿಯುತ್ತಿದ್ದರೂ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂಬುವುದು ಸೇರಿದಂತೆ ತುಂಬಾ ಜನ ನೌಕರರು ‌ಸಮಸ್ಯೆಗಳ ಬಗ್ಗೆ ಬೇಸರದಿಂದ ಮಾತನಾಡುವುದನ್ನು ಕೇಳಿಸ್ಕೊಂಡ್ರೆ ನಿಜಕ್ಕೂ ಮನಸ್ಸು ತುಂಬ ಭಾರವಾಗುತ್ತಿದೆ.

ಇಷ್ಟೊಂದು ಸಮಸ್ಯೆಗಳು ಇದ್ದರೂ ಕೂಡ ನಾವು ವಿಜೃಂಭಣೆಯಿಂದ ಆಚರಿಸುವ ಕಾರ್ಯಕ್ರಮಗಳಿಗೆ ಅರ್ಥವೇ ಇಲ್ಲ ಎಂದು ಮಾನಸಿಕವಾಗಿ ತುಂಬಾ ನೋವಾಗುತ್ತಿದೆ. ಇನ್ನು ಇದು ನನ್ನ ವೈಯುಕ್ತಿಕ ಅನಿಸಿಕೆ ಅಷ್ಟೆ. ಯಾರೂ ಕೂಡ ಅನ್ಯತ ಭಾವಿಸುವುದು ಬೇಡ. ಯಾರಿಗೂ ಅವಮಾನ ಮಾಡುವ ಉದ್ದೇಶ ಇಲ್ಲ. ಯಾರೂ ಅಸಮಾಧಾನ ವ್ಯಕ್ತಪಡಿಸುವುದು ಬೇಡ.

  • ನಿಮ್ಮ ಜೀವನ್ ಮಾರ್ಟಿಸ್, ರಾಜ್ಯಾಧ್ಯಕ್ಷರು, ಕೆ.ಎಸ್.ಆರ್.ಟಿ.ಸಿ. ವಿಕಲಚೇತನರ ನೌಕರರ ಸಂಘ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್