Please assign a menu to the primary menu location under menu

NEWSನಮ್ಮಜಿಲ್ಲೆ

ಸೌಜನ್ಯಕ್ಕೂ ಹಲ್ಲೆಗೊಳಗಾದ ಸರ್ಕಾರಿ ಸಾರಿಗೆ ನೌಕರರ ಭೇಟಿ ಮಾಡದ ಬೀದರ್‌ ಡಿಸಿ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬೀದರ್‌ ವಿಭಾಗದ ಹುಮನಾಬಾದ್‌ ಘಟಕದ ಬಸ್‌ ನಿರ್ವಾಹಕ ಮತ್ತು ಚಾಲಕರ ಮೇಲೆ ಕಲ್ಲಿನಿಂದ ಹೊಡೆದು ತೀವ್ರ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೇ 31ರ ಸಂಜೆ 6.45ರಲ್ಲಿ ಬ್ಯಾಲಹಳ್ಳಿಯ ನಿವಾಸಿ ಪೌಲ ಎಂಬಾತ ನಿರ್ವಾಹಕ ಪ್ರಕಾಶ್‌ ಎಂಬುವರ ಮೇಲೆ ಏಕಾಏಕಿ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ಹಲ್ಲೆಗೊಳಗಾದ ಪ್ರಕಾಶ್‌ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನು ಚಾಲಕ ಪವಡಪ್ಪ ಚನ್ನಪ್ಪ ಚಲವಾದಿ ಅವರ ಗುಪ್ತಂಗಕ್ಕೆ ಒದ್ದಿದ್ದರಿಂದ ಈಗಲೂ ಅವರ ಗುಪ್ತಂಗದ ಒಂದು ಭಾಗ ಈಗಲೂ ಊದಿಕೊಂಡಿದ್ದು ನಡೆಯಲು ಕಷ್ಟವಾಗುತ್ತಿದೆ. ಈ ನಡುವೆಯೂ ಸದ್ಯ ಪವಡಪ್ಪ ಅವರಿಗೂ ಸೂಕ್ತ ಚಿಕಿತ್ಸೆ ನೀಡಿರುವ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ.

ಈ ನಡುವೆ ಕರ್ತವ್ಯ ನಿರತ ಸಾರಿಗೆ ನೌಕರರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿರುವ ಧನ್ನೂರ್‌ ಪೊಲೀಸರು, ವಿಚಾರಣೆಗೊಳ್ಳಪಡಿಸಿದ್ದಾರೆ.

ಅಮ್ಮನ ಹೃದಯದ ಡಿಎಂ: ತಮ್ಮ ಘಟಕದ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಹುಮನಾಬಾದ್‌ ಘಟಕದ ವ್ಯವಸ್ಥಾಪಕರಾದ ಗುರುಬಸಮ್ಮ ಅವರು ಕೂಡಲೇ ಸ್ಥಳಕ್ಕೆ ಹೋಗಿ ನೌಕರರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಹಲ್ಲೆಗೊಳಗಾಗಿದ್ದರಿಂದ ನೌಕರರಿಗೆ ಜ್ವರ ಏನಾದರು ಬಂದಿದೆಯೇ ಎಂದು ಸ್ವತಃ ಹಣೆ ಮುಟ್ಟಿ ನೋಡಿ ಸ್ವಂತ ಕುಟುಂಬದವರ ತರ ನೋಡಿಕೊಂಡಿದ್ದಾರೆ.

ಅಲ್ಲದೆ ತಮ್ಮ ಡ್ಯೂಟಿ ಮುಗಿದಿದ್ದರಿಂದ ಮನೆಯಲ್ಲಿರಬೇಕಾದ ಸಮಯದಲ್ಲಿ ಅಂದರೆ ರಾತ್ರಿ 11 ಗಂಟೆಯಿಂದ ಮುಂಜಾನೆ 3 ಗಂಟೆವರೆಗೂ ನೌಕರರ ಜತೆಗಿದ್ದು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಮನೆಗೆ ತೆರಳಿದ್ದಾರೆ. ಈ ನಡುವೆ ಸಾರಿಗೆ ವಾಹನದಲ್ಲೇ ನೌಕರರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ನೌಕರರ ನೋವಿಗೆ ಸ್ಪಂದಿಸಿದರು ಎಂದು ಘಟಕದ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನು ಬೀದರ್‌ ವಿಭಾಗದ ವಿಭಾಗೀಯ ನಿಯಂತ್ರನಾಧಿಕಾರಿ ಚಂದ್ರಕಾಂತ್‌ ಫುಲೇಕರ್‌ ಹೊರತುಪಡಿಸಿ ಬಹುತೇಕ ವಿಭಾಗದ ಎಲ್ಲ ಅಧಿಕಾರಿಗಳು ಹಲ್ಲೆ ನಡೆದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿ ನೌಕರರ ಆರೋಗ್ಯ ವಿಚಾರಿಸಿದ್ದು, ಅಲ್ಲದೆ ಪೊಲೀಸ್‌ ಠಾಣೆಗೆ ತೆರಳಿ ಪ್ರಕರಣ ದಾಖಲಾಗುವವರೆಗೂ ಇದ್ದರು.

ಅಧಿಕಾರಿಗಳ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿ ನಾಲ್ಕೂ ನಿಗಮಗಳ ಪ್ರತಿ ಘಟಕ, ವಿಭಾಗದ ಅಧಿಕಾರಿಗಳು ನೌಕರರಿಗೆ ಸ್ಪಂದಿಸಬೇಕು. ಸಾರ್ವಜನಿಕರಿಂದ ತೊಂದರೆ ಆದ ಕೂಡಲೇ ಅದರ ತೀವ್ರತೆ ನೋಡಿಕೊಂಡು ಸ್ಥಳಕ್ಕಾಗಮಿಸಿದರೆ ನೌಕರರಿಗೂ ಬಲ ಬಂದಂತಾಗುತ್ತದೆ. ಅಲ್ಲದೆ ಇನ್ನು ಉತ್ಸಾಹದಿಂದ ಸೇವೆ ಮಾಡುವುದಕ್ಕೆ ಇತರ ನೌಕರರಿಗೂ ಇನ್ನಷ್ಟು ಬಲ ಬರುತ್ತದೆ.

ಹಲ್ಲೆಗೊಳಗಾದ ನೌಕರರ ಸೌಜನ್ಯಕ್ಕೂ ಭೇಟಿ ಮಾಡದ ಡಿಸಿ: ಇನ್ನು ಇಬ್ಬರು ನೌಕರರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಅವರಲ್ಲಿ ನಿರ್ವಾಹಕರ ತಲೆಗೆ 5-6 ಹೊಲಿಗೆ ಬಿದ್ದಿದ್ದರೂ ಕೂಡ ಸೌಜನ್ಯಕ್ಕೂ ಬಂದು ಭೇಟಿ ಮಾಡಿ KKRTC ಬೀದರ್‌ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ್‌ ಫುಲೇಕರ್‌ ಆರೋಗ್ಯ ವಿಚಾರಿಸಿಲ್ಲ. ಇದು ಒಬ್ಬ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಹುಮನಾಬಾದ್‌ ಘಟಕದ ಟಿಐ ಅಂಬಿಕಾ ಅವರು ಇತ್ತ ಹಲ್ಲೆಗೊಳಗಾಗಿ ನೌಕರರು ಆಸ್ಪತ್ರೆಗೆ ದಾಖಲಾಗಿ ನರಳುತ್ತಿದ್ದರೆ. ಅತ್ತ ನೀವು ಆಸ್ಪತ್ರೆಯಲ್ಲಿದ್ದರೆ ನಾವು ಬೇರೆಯರವನ್ನು ಕೂಡಲೇ ಹೇಗೆ ರೂಟ್‌ ಮೇಲೆ ಕಳಿಸಿಕೊಡಲಾಗುತ್ತದೆ. ಹೇಗೋ ಕೆಲಸ ಮುಗಿಸಿಕೊಂಡು ಬರಬೇಕು ಎಂದು ನೌಕರರಿಗೆ ತಾಕೀತು ಮಾಡಿದರಂತೆ. ನೋಡಿ ಇವರಿಗೇ ರೀತಿ ಹಲ್ಲೆಯಾದರೆ ಇವರು ಆಸ್ಪತ್ರೆಗೆ ಹೋಗದೆ ಡ್ಯೂಟಿಗೆ ಬರುತ್ತಾರೆಯೇ? ಈ ರೀತಿ ಮಾನವೀಯತೆ ಇಲ್ಲದ ರೀತಿಯಲ್ಲಿ ಟಿಐ ಅಂಬಿಕಾ ನಡೆದುಕೊಳ್ಳಬಾರದು. ಇನ್ನಾದರೂ ನೌಕರರಿಂದ ನಾವು ಎಂಬುದನ್ನು ಅರಿತು ನಡೆದುಕೊಂಡು ಅವರ ನೋವಿಗೆ ಸ್ಪಂದಿಸಬೇಕಿದೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್