NEWSನಮ್ಮರಾಜ್ಯ

KKRTC: 2023-24ನೇ ಸಾಲಿನ ಭವಿಷ್ಯ ನಿಧಿ ಮತ್ತು ಐಚ್ಛಿಕ ಭವಿಷ್ಯ ನಿಧಿ ಚೀಟಿ ಆನ್‌ಲೈನ್‌ನಲ್ಲಿ ಲಭ್ಯ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ ಸಿಬ್ಬಂದಿ/ ಅಧಿಕಾರಿಗಳ 2023-24ನೇ ಸಾಲಿನ ಭವಿಷ್ಯ ನಿಧಿ ಮತ್ತು ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವ ಸೌಲಭ್ಯವನ್ನು ಬಿಡುಗಡೆ ಮಾಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಿಗಮದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ತಿಳಿಸಿದ್ದಾರೆ.

ಈ ಸಂಬಂಧ ನಿಗಮದ ಎಲ್ಲ ಸಿಬ್ಬಂದಿ/ಅಧಿಕಾರಿಗಳ 2023-24ನೇ ಸಾಲಿನ ಭವಿಷ್ಯ ನಿಧಿ ಮತ್ತು ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು (ದೋಷಪೂರಿತ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಹೊರತು ಪಡಿಸಿ) ಭೌತಿಕವಾಗಿ ವಿತರಿಸುವ ಬದಲು 15-08-2024 ರಂದು ನಿಗಮದ ವೆಬ್ ಸೈಟ್ http://kkrtc.org/pfslip ನಲ್ಲಿ ಬಿಡುಗಡೆಗೊಳಿಸಲಾಗಿದೆ.

ಅದರಂತೆ ಎಲ್ಲ ಸಿಬ್ಬಂದಿ/ಅಧಿಕಾರಿಗಳು ತಮ್ಮ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ವೆಬ್‌ಸೈಟ್‌ನಲ್ಲಿ ಗಣಕಯಂತ್ರ ಅಥವಾ ನಿಮ್ಮ ಮೊಬೈಲ್ ಫೋನ್‌ ಮುಖಾಂತರ ಲಾಗಿನ್ ಆಗಿ ಭವಿಷ್ಯ ನಿಧಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿದಲ್ಲಿ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯ ನಿಧಿಯ ವಿವರಗಳನ್ನು ವೀಕ್ಷಿಸಬಹುದು ಹಾಗೂ ಅದರ ಮುದ್ರಣವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಆದ್ದರಿಂದ ಈ ಬಗ್ಗೆ ವಿಭಾಗೀಯ ಕಚೇರಿಗಳಲ್ಲಿ, ಘಟಕಗಳಲ್ಲಿ ಕಾರ್ಯಾಗಾರಗಳಲ್ಲಿ ಮತ್ತು ತರಬೇತಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ/ ಅಧಿಕಾರಿಗಳ ಗಮನಕ್ಕೆ ತಲುಪುವಂತೆ ಸೂಚನಾ ಫಲಕಗಳ ಮೂಲಕ ಮಾಹಿತಿ ಒದಗಿಸಲು ಮತ್ತು ವಿಭಾಗದ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಈ ಕುರಿತು ಎಲ್ಲ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಕ್ರಮಕೈಗೊಂಡು ಈ ಕುರಿತು ಅನುಸರಣಾ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಅದರಂತೆ ನಿಗಮದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು ತಿಳಿಸಿರುವಂತೆ ನಿಗಮದ ವೆಬ್ ಸೈಟ್ http://kkrtc.org/pfslip ಗೆ ಭೇಟಿ ನೀಡಿದರೆ ಈ ರೀತಿ ತೆರದುಕೊಳ್ಳುತ್ತದೆ ಈ ವೇಳೆ ನಿಮ್ಮ ಭವಿಷ್ಯ ನಿಧಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿದ ಬಳಿಕ ವೀಕ್ಷಿಸಬಹುದಾಗಿದೆ.

ಲಾಗಿನ್‌ ಆಗುವ ವೇಳೆ ಭವಿಷ್ಯ ನಿಧಿ ಚೀಟಿಯಲ್ಲಿನ ಮೊತ್ತಗಳು ಪರಿವೀಕ್ಷಣಾ ಬದಲಾವಣೆಗೆ ಒಳಪಟ್ಟಿರುತ್ತದೆ ಭವಿಷ್ಯ ನಿಧಿ ಚೀಟಿಯಲ್ಲಿ ತಪ್ಪುಗಳು ಕಂಡುಬಂದಲ್ಲಿ ಕೈ ಸೇರಿದ ಒಂದು ತಿಂಗಳೊಳಗಾಗಿ ತಿಳಿಸತಕ್ಕದ್ದು ಎಂದು ಲಾಗಿನ್‌ ಆಗುವ ಮುನ್ನವೇ ವೆಬ್‌ಸೈಟ್‌ನಲ್ಲಿ ಸೂಚನೆಯೊಂದನ್ನು ನೀಡಲಾಗಿದೆ. ಈ ಬಗ್ಗೆಯೂ ಸಿಬ್ಬಂದಿ/ಅಧಿಕಾರಿಗಳು ಗಮನ ಹರಿಸಿ ತಪ್ಪುಗಳಾಗಿದ್ದಲ್ಲಿ ಸರಿ ಪಡಿಸಿಕೊಳ್ಳಬಹುದಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ