KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ
ಇಂಡಿ: ನಾನು ಭಿಮಾತೀರದವನು ನನಗೆ ಭೀಮಾತೀರದ ಎಲ್ಲ ರೌಡಿಗಳು ಪರಿಚಯವಿದ್ದಾರೆ ನೀವು ಏನಾದರೂ ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ಜೀವ ಬೇದರಿಕೆ ಹಾಕಿದ್ದ ಇಂಡಿ ಘಟಕದ ವ್ಯವಸ್ಥಾಪಕ ಸಂಗನಗೌಡ ಬಿರಾದಾರ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಕಳೆದ ಅಕ್ಟೋಬರ್ 19ರಂದು ಡಿಎಂ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿಜಯಪಥ “KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ – ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ” ಶೀರ್ಷಿಕೆಯಡಿ ಸಮಗ್ರವಾದ ವರದಿ ಮಾಡಿತ್ತು.
ವಿಜಯಪಥ ಮೀಡಿಯಾದಲ್ಲಿ ವರದಿ ಬಂದಿದ್ದರಿಂದ ಅಧಿಕಾರಿಗಳು ತನಿಖೆ ನಡೆಸಿದ್ದು, ಡಿಎಂ ವಿರುದ್ಧ ದಾಖಲಾಗಿರುವ ದೂರು ಮೇಲ್ನೋಟಕ್ಕೆ ಸತ್ಯವಾಗಿದೆ ಎಂದು ತಿಳಿದ ಅಧಿಕಾರಿಗಳು ಇಂಡಿ ಘಟಕದಿಂದ ವಿಜಯಪುರ ಘಟಕ-1ಕ್ಕೆ ವರ್ಗಾವಣೆ ಮಾಡಿ ನಿನ್ನೆ ಅಂದರೆ ನ.7ರಂದು ಆದೇಶ ಹೊರಡಿಸಿದ್ದಾರೆ.
ವಿಜಯಪುರ ವಿಭಾಗದ ಕೂಟದ ಗೌರವ ಅಧ್ಯಕ್ಷ ಯಾಕೂಬ ನಾಟಿಕಾರ ಅವರು ಕೂಡ ಭ್ರಷ್ಟ ಡಿಎಂ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡಿದ್ದರು.
ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ ಇಂಡಿ ಘಟಕದ ಘಟಕ ವ್ಯವಸ್ಥಾಪಕರನ್ನು ಭ್ರಷ್ಟಾಚಾರದ ಆರೋಪದ ಮೇಲೆ ವರ್ಗಾವಣೆ ಮಾಡಿರುವುದಕ್ಕೆ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರಿಗೆ ಹಾಗೂ ವಿಜಯಪಥ ಮೀಡಿಯಾಗೆ ನಾಟಿಕಾರ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ – ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ