ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದ ಹೊಸಪೇಟೆ ಘಟಕದಲ್ಲಿ ಡಿಪೋ ಮ್ಯಾನೇಜರ್ ರಾತ್ರಿ 9 ಗಂಟೆ ಆದರೂ ಬೆಳಗ್ಗೆಯಿಂದ ಡ್ಯೂಟಿ ಮಾಡಿ ಸುಸ್ತಾಗಿ ಬರುವ ನೌಕರರನ್ನು ನಿಲ್ಲಿಸಿಕೊಂಡುKMPL ಬರುತ್ತಿಲ್ಲ ಮತ್ತು EPKM ಬರುತ್ತಿಲ್ಲ ಎಂದು ಕಿರುಕುಳ ನೀಡುತ್ತಿದ್ದಾರೆ.
ಬೆಳಗ್ಗೆಯಿಂದ ದುಡಿದು ರಾತ್ರಿ ಘಟಕಕ್ಕೆ ಬರುವ ನೌಕರರು ಡ್ಯೂಟಿ ಮುಗಿಸಿ ಮನೆಗೆ ಹೋಗಿ ವಿಶ್ರಾಂತಿ ಪಡೆಯಲು ಬಿಡದೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಘಟಕದ ನೌಕರರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಬಸ್ ಏನಾದ್ರೂ ಪ್ರಾಬ್ಲಮ್ ಇದ್ದರೆ ಲಾಗ್‌ಶೀಟ್‌ನಲ್ಲಿ ಲೋಪದೋಷಗಳನ್ನು ಬರೆಯಿರಿ ಎಂದು ಮೇಲಧಿಕಾರಿಗಳು ಆದೇಶ ಮಾಡುತ್ತಾರೆ. ಆದರೆ ಇಲ್ಲಿರುವ ಚಾರ್ಜ್‌ಮ್ಯಾನ್‌ಗಳು ಬರಿಯಬೇಡಿ ಎಂದು ಹೇಳುತ್ತಾರೆ. ಜತೆಗೆ ಏಕೆ ಹೀಗೆ ಹೇಳುತ್ತೀರಿ ಎಂದು ಏನಾದ್ರೂ ಡ್ರೈವರ್‌ಗಳು ಚಾರ್ಜ್‌ಮ್ಯಾನ್‌ಗಳನ್ನು ಪ್ರಶ್ನಿಸಿದರೆ ಹಾಗೂ ಬಸ್‌ನಲ್ಲಿ ಇರುವ ಪ್ರಾಬ್ಲಮ್ ಸರಿ ಮಾಡಿಕೊಡಿ ಎಂದು ಕೇಳಿದರೂ ಅಂಥ ಚಾಲಕರಿಗೇ ಮೆಮೊ ಕೊಡುತ್ತಾರೆ.
ಈ ತರ ಕಿರುಕುಳ ಇದ್ದರೆ ನೌಕರರು ಹೇಗೆತಾನೆ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯ? ಇನ್ನು ಘಟಕದಲ್ಲಿ ವ್ಯವಸ್ಥಾಪಕರೇ ಸರಿ ಇಲ್ಲ ಎಂದ ಮೇಲೆ ನೌಕರರಿಗೆ ಘಟಕದ ಇತರ ಅಧಿಕಾರಿಗಳು/ ಸಿಬ್ಬಂದಿಗಳು ತೊಂದರೆ ಕೊಡದೆ ಬಿಡುತ್ತಾರೆಯೇ?
ಈ ಎಲ್ಲದರಿಂದ ನೌಕರರು ಇಂದು ಘಟಕದಲ್ಲಿ ಉಸಿರಾಡುವುದಕ್ಕೂ ಕಷ್ಟ ಪಡುವಂತಾಗಿದೆ . ಇನ್ನು ಇಲ್ಲಿ ನಿರ್ವಾಹಕಿಯರು ಕೂಡ ಡ್ಯೂಟಿ ಮಾಡುವುದು ತುಂಬಾನೇ ಕಷ್ಟ ಆಗುತ್ತಿದೆ. ಲೇಡಿಸ್ ಕೋಟ ಎಂದು ರಿಟರ್ನ್ ಡ್ಯೂಟಿಗಳು ಲಾಂಗ್ ಒಂದು ಟ್ರಿಪ್ ಹೋಗಿ ಬಂದ ಬವಳಿಕ ಡ್ಯೂಟಿ ಮುಗಿದರೂ ಕೂಡ extra ಟ್ರಿಪ್ ಮಾಡಿಕೊಂಡೆ ಬರಬೇಕು ಎಂದು ಕಿರುಕುಳ ಕೊಡುತ್ತಿದ್ದಾರೆ ಡಿಎಂ.
ಇನ್ನು ಶಕ್ತಿ ಯೋಜನೆ ಬಂದ ಮೇಲೆ ಫಾರಂ -4ನಲ್ಲಿ ಹೆಚ್ಚುವರಿ ಕಿಲೋಮೀಟರ್ ನಮೂದಿಸಿ ಅದನ್ನು ಪೂರ್ತಿ ಮಾಡಿ ಎಂದೂ ಜತೆಗೆ extra ಟ್ರಿಪ್ ಮಾಡಲೇ ಬೇಕು ಎಂದು ಇಲ್ಲಿನ ನಿಲ್ದಾಣ ಉಸ್ತುವಾರಿ ಸಿಬ್ಬಂದಿಗಳು ಮತ್ತು ಕಂಟ್ರೋಲರ್‌ಗಳು ಮಹಿಳಾ ಕಂಡಕ್ಟರ್‌ಗಳಿಗೆ ತುಂಬಾ ಟಾರ್ಚರ್ ಕೊಡುತ್ತಿದ್ದಾರೆ.
ಇನ್ನು ಫಾರಂ 4 ಏಕೆ ಬದಲಾಗಿದೆ ಎಂದು ಕೇಳಿದರೂ ನೌಕರರು ಅಮಾನತಿನ ಶಿಕ್ಷೆ ಅನುಭವಿಸಬೇಕು. ಏಕೆಂದರೆ ಕಿಲೋ ಮೀಟರ್ ಹೆಚ್ಚಿಸಿರುವುದು ಡಿಪೋಮಟ್ಟದ ಅಧಿಕಾರಿಗಳು ಅದನ್ನು ಮರು ಪ್ರಶ್ನಿಸದೆ ಕಣ್ಣುಮುಚ್ಚಿಕೊಂಡು ಓಕೆ ಮಾಡಿರುವುದು ವಿಭಾಗೀಯ ನಿಯಂತ್ರಣಾಧಿಕಾರಿಗಳು. ಇದರಿಂದ ಡ್ಯೂಟಿ ಮಾಡುವುದಕ್ಕೆ ಭಾರಿ ಕಷ್ಟಪಡುತ್ತಿದ್ದಾರೆ ನಿಗಮದ ನೌಕರರು.
ಇನ್ನು ಹೆಚ್ಚಿಗೆ ಮಾತನಾಡಿದರೆ ರಿಪೋರ್ಟ್ ಹಾಕುತ್ತೇವೆ ಎಂದು ಘಟಕದಲ್ಲಿ ಮತ್ತು ನಿಲ್ದಾಣಗಳಲ್ಲಿ ಹೆದರಿಸುತ್ತಾರೆ. ಹೀಗೆ ಹೊಸಪೇಟೆ ವಿಭಾಗ ಮತ್ತು ಘಟಕಗಳಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ನೌಕರರು ಅನುಭವಿಸುತ್ತಿದ್ದಾರೆ. ಇಷ್ಟೆಲ್ಲ ನೌಕರರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಈ ಬಗ್ಗೆ ಧ್ವನಿ ಎತ್ತುವುದಕ್ಕೆ ಈವರೆಗೂ ಯಾವುದೇ ಸಂಘಟನೆಯ ನಾಯಕರೆನಿಸಿಕೊಂಡವರು ಬಂದಿಲ್ಲ. ಈ ಕಾರಣ ಅಧಿಕಾರಿ ವರ್ಗದ ದರ್ಪ ದೌರ್ಜನ್ಯ, ಕಿರುಕುಳ, ದಬ್ಬಾಳಿಕೆ ಮಿತಿ ಮೀರಿದೆ.
ಹೀಗಾಗಿ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ಸಚಿವರು ಇತ್ತ ಗಮನ ಹರಿಸಿ ನೌಕರರಿಗೆ ಆಗುತ್ತಿರುವ ತೊಂದರರೆ ನಿವಾರಣೆ ಮಾಡಲು ಮುಂದಾಗಬೇಕು ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.