CrimeNEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಎಲ್‌ಐಸಿ ಪ್ರೀಮಿಯಂ ನಿಯಮಿತ ಪಾವತಿ ಆಗದಿದ್ದರೆ ಪಾಲಿಸಿ ಲ್ಯಾಪ್ಸ್ ಪಕ್ಕ ಆದರೆ ಸಾರಿಗೆ ಅಧಿಕಾರಿಗಳ ವಂಚನೆಗೆ.. ಸಾಥ್‌ ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜೀವ ವಿಮಾ ಪಾಲಿಸಿ (ಎಲ್‌ಐಸಿ ಪ್ರೀಮಿಯಂ) ಅನ್ನು ನಿಯಮಿತವಾಗಿ ಪಾವತಿಸಿದರೆ ಮಾತ್ರ ಯಾವುದೇ ರೀತಿಯ ಪಾಲಿಸಿ ಲಾಭದಾಯಕವಾಗಿರುತ್ತದೆ. ಸಾಮಾನ್ಯವಾಗಿ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಒಂದು ಹಂತ. ಆದರೆ ಅದು ಲೋಪವಾಗದಂತೆ ನೋಡಿಕೊಳ್ಳುವುದು ಇನ್ನೊಂದು ಹಂತ. ಪಾಲಿಸಿ ಪ್ರೀಮಿಯಂ ಅನ್ನು ಮಧ್ಯದಲ್ಲಿ ನಿಲ್ಲಿಸಿದ ಸಂದರ್ಭಗಳಲ್ಲಿ, LIC ಪಾಲಿಸಿ ಲ್ಯಾಪ್ಸ್ ಆಗುತ್ತದೆ.

ಸಾಮಾನ್ಯವಾಗಿ, ಪಾಲಿಸಿಯ ಪ್ರೀಮಿಯಂ ಅನ್ನು ಅದರ ನಿಗದಿತ ದಿನಾಂಕದಂದು ಪಾವತಿಸದಿದ್ದರೆ ಅಥವಾ ನಿಗದಿತ ದಿನಾಂಕದ ಜತೆಗೆ ಒದಗಿಸಲಾದ ಗ್ರೇಸ್ ಅವಧಿಯೊಳಗೆ ಪಾಲಿಸಿಯನ್ನು ಪಾವತಿಸದಿದ್ದರೆ ಪಾಲಿಸಿಯು ಲ್ಯಾಪ್ಸ್ ಆಗುತ್ತದೆ. ಇದನ್ನು ಲ್ಯಾಪ್ಸ್ಡ್ ಪಾಲಿಸಿ ಎಂದು ಕರೆಯಲಾಗುತ್ತದೆ.

ಇನ್ನು ಪಾಲಿಸಿ ಪಾಲಿಸಿ ಲ್ಯಾಪ್ಸ್ ಆದ ಬಳಿಕ ಅದರಿಂದ ಬರಬೇಕಾದ ಪ್ರಯೋಜನಗಳು ಬರುವುದಿಲ್ಲ. ಇದುವರೆಗೆ ಮಾಡಿದ ಪ್ರೀಮಿಯಂ ಮತ್ತು ಶ್ರಮ ವ್ಯರ್ಥವಾಗುತ್ತದೆ. ಅದಕ್ಕಾಗಿಯೇ ಜೀವ ವಿಮಾ ಪಾಲಿಸಿದಾರರು ಪ್ರೀಮಿಯಂ ಅನ್ನು ನಿಗದಿತ ದಿನಾಂಕದೊಳಗೆ ಪಾವತಿಸುವುದು ಉತ್ತಮ.

ನಿಗದಿತ ದಿನಾಂಕದೊಳಗೆ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ನಮಗೆ ಲಭ್ಯವಿರುವ ಗ್ರೇಸ್ ಅವಧಿಯಲ್ಲಿ, ನಾವು ಪ್ರೀಮಿಯಂ ಪಾವತಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಪಾಲಿಸಿ ರದ್ದಾಗುತ್ತದೆ. ಇನ್ನು ಪಾಲಿಸಿ ಲ್ಯಾಪ್ಸ್ ಆದ ಬಳಿಕ ನಾನು ಅದನ್ನು ಪುನಃ ಸಕ್ರಿಯಗೊಳಿಸಬಹುದಾ? ಹೇಗೆ ಎಂದು ತಿಳಿದುಕೊಳ್ಳುವುದಾದರೆ..

ಲ್ಯಾಪ್ಸ್ ಆದ ಪಾಲಿಸಿಯನ್ನು ಪುನರುಜ್ಜೀವನಗೊಳಿಸಲು ನೀವು ಬಾಕಿಯಿರುವ ಪ್ರೀಮಿಯಂಗಳನ್ನು ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ. ಅಲ್ಲದೆ ಕೆಲವು ಆರೋಗ್ಯ ಅವಶ್ಯಕತೆಗಳನ್ನು ಪೂರೈಸಬೇಕು. ಯೋಜನೆಯ ನಿಯಮಗಳ ಪ್ರಕಾರ ಲ್ಯಾಪ್ಸ್ ಆದ ಪಾಲಿಸಿಯನ್ನು ಪುನರುಜ್ಜೀವನಗೊಳಿಸಬಹುದು.

ಇದಕ್ಕಾಗಿ ನೀವು LIC ಗ್ರಾಹಕ ಸೇವಾ ಸಂಖ್ಯೆ, ಇ-ಮೇಲ್ ಅಥವಾ ನಿಮ್ಮ ಹತ್ತಿರದ ಶಾಖಾ ಕಚೇರಿಯನ್ನು ಸಂಪರ್ಕಿಸಬಹುದು. LICಗೆ ವೈದ್ಯಕೀಯ ಘೋಷಣೆಯನ್ನು ಸಲ್ಲಿಸಬೇಕಾಗಬಹುದು. ಅಲ್ಲದೆ ಬಾಕಿ ಇರುವ ಪ್ರೀಮಿಯಂಗಳನ್ನು ನಿರ್ದಿಷ್ಟ ಬಡ್ಡಿಯೊಂದಿಗೆ ಪಾವತಿಸಬೇಕು.

ನೀವು ಸಲ್ಲಿಸಿದ ದಾಖಲೆಗಳು ಮತ್ತು ಪಾವತಿಯನ್ನು ಸ್ವೀಕರಿಸಿದ ನಂತರ, LIC ನಿಮ್ಮ ನವೀಕರಣ ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತದೆ. ಹೊಸ ಪಾಲಿಸಿ ಡಾಕ್ಯುಮೆಂಟ್ ಅನ್ನು ನೀಡುತ್ತದೆ. ನಂತರ ನೀವು ನಿಮ್ಮ ಪಾಲಿಸಿಯನ್ನು ಪುನರಾರಂಭಿಸಬಹುದು.

ಆದ್ದರಿಂದ ಯಾವುದೇ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು, ಪಾಲಿಸಿ ಮುಕ್ತಾಯ ದಿನಾಂಕಗಳು, ಮುಕ್ತಾಯ ದಿನಾಂಕ, ಪ್ರೀಮಿಯಂ ಪಾವತಿಯ ಅಂತಿಮ ದಿನಾಂಕ, ಗ್ರೇಸ್ ಅವಧಿಯನ್ನು ಪರಿಶೀಲಿಸಬೇಕು. ಜೀವ ವಿಮೆ ಭದ್ರತೆಗಾಗಿಯೇ ಇದು ಮುಖ್ಯವಾಗಿರುವುದರಿಂದ ಪಾಲಿಸಿಯು ಎಷ್ಟು ಸಾಧ್ಯವೋ ಅಷ್ಟು ನಷ್ಟವಾಗದಂತೆ ನೋಡಿಕೊಳ್ಳುವುದು ಉತ್ತಮ.

ಆದರೆ, ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಪಾಲಿಸಿದಾರ ನೌಕರರ ವೇತನದಲ್ಲಿ ಸಮಯಕ್ಕೆ ಸರಿಯಾಗಿ ಕಡಿತಮಾಡುತ್ತಿದ್ದರೂ ಅದನ್ನು ಸರಿಯಾಗಿ ಪಾವತಿ ಮಾಡುತ್ತಿಲ್ಲ. ಇದರಿಂದ ಸಾವಿರಾರು ನೌಕರರಿಗೆ ಕೋಟೆ ಕೋಟಿ ಹಣ ಲಾಸ್‌ ಆಗುತ್ತಿದೆ. ಇನ್ನು ಈ ಬಗ್ಗೆ ಸಾರಿಗೆ ಸಚಿವರು ನೇರವಾಗಿ ನಮಗೇ ದೂರು ಕೊಡಿ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಧಿಕಾರಿಗಳ ಭಯದಿಂದ ಈವರೆಗೂ ಯಾವ ನೌಕರರು ದೂರು ಕೊಡಲು ಮುಂದಾಗಿಲ್ಲ ಇದು ಕಳ್ಳಾಧಿಕಾರಿಗಳಿಗೆ ವರವಾಗುತ್ತಿದೆ.

ಇನ್ನು  ಎಲ್‌ಐಸಿ ಪ್ರೀಮಿಯಂ ಅನ್ನು  ನಿಯಮಿತವಾಗಿ ಪಾವತಿಸಿದರೆ ಪಾಲಿಸಿ ಲ್ಯಾಪ್ಸ್ ಆಗುವುದು ಪಕ್ಕ. ಆದರೆ ಸಾರಿಗೆ ಅಧಿಕಾರಿಗಳ ಕಳ್ಳಾಟಕ್ಕೆ 6-7 ಪ್ರೀಮಿಯಂ ಪಾವತಿ ಮಾಡದಿದ್ದರೂ ಅದು ಲ್ಯಾಪ್ಸ್‌ ಆಗುತ್ತಿಲ್ಲ. ಇದಕ್ಕೆ ಎಲ್‌ಐಸಿ ಅಧಿಕಾರಿಗಳು ಸಾಥ್‌ ನೀಡುತ್ತಿರುವುದು ಪಕ್ಕ ಎಂಬುವುದು ಇದರಿಂದಲೇ ಸಂಪೂರ್ಣವಾಗಿ ಅರ್ಥವಾಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ಎಲ್‌ಐಸಿ ಮೇಲಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಜತೆಗೆ ನೌಕರರ ವೇತನದಲ್ಲಿ ಹಣ ಕಟ್‌ ಮಾಡಿಕೊಂಡು ಎಲ್‌ಐಸಿ ಪ್ರೀಮಿಯಂ ಕಟ್ಟದ ಅಧಿಕಾರಿಗಳ ವಿರುದ್ಧವೂ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಬೇಕು. ಈಗಾದರೆ ಮಾತ್ರ ಪಾಲಿಸಿದಾರ ನೌಕರರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಎಲ್‌ಐಸಿ ಅಧಿಕಾರಿಯೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹಿಂದಿನಿಂದ ವೇಗವಾಗಿ ಬಂದ ಕಾರು ಮುಂದೆ ಹೋಗುತ್ತಿದ್ದ ಕಾರ್‌ ಮೇಲೇರಿತು! ರೈತ ನಾಯಕ ಕುರುಬೂರು ಶಾಂತಕುಮಾರ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಸಿಎಂ ಸಿದ್ದರಾಮಯ್ಯ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ 18 ಮಂದಿ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತ ಮಳೆ ನೀರು ಕೊಯ್ಲಿನಿಂದ ಅಂತರ್ಜಲ ವೃದ್ಧಿ: ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕಕ್ಕೆ ಅರ್ಜಿ ಆಹ್ವಾನ ಬಿಬಿಎಂಪಿ: ಕಸ ಬಿಸಾಡುವ ಸ್ಥಳ ನಿರ್ಮೂಲನೆ ಜತೆ ಜೆತೆಗೆ ಸ್ವಚ್ಛತಾ ಅಭಿಯಾನ KSRTC ರಿಯಾಯಿತಿ ದರದ ಪಾಸ್‌ ಇದ್ದರೂ ತಾರತಮ್ಯತೆ: ನಿವೃತ್ತರಾದ ಮೇಲೆ ಅಧಿಕಾರಿಗಳಿಗೆ ಬಡತನ- ನೌಕರರಿಗೆ ಸಿರಿತನ !! ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್ ಇದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು ಬಿಬಿಎಂಪಿ: 1.84 ಲಕ್ಷ ಬೀದಿ ನಾಯಿಗಳಿಗೆ "ಸಂಯುಕ್ತ ಲಸಿಕೆ" ಹಾಕುವ ಗುರಿ- ತುಷಾರ್ ಗಿರಿನಾಥ್ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ