CrimeNEWSನಮ್ಮರಾಜ್ಯ

KSRTC: ನೆಪ ಮಾತ್ರಕ್ಕೆ ಘಟಕಕ್ಕೆ ಬಂದು ಹೋಗುವ ಅರಸೀಕೆರೆ ಡಿಪೋ ಪ್ರಭಾರ ವ್ಯವಸ್ಥಾಪಕನ ವಿರುದ್ಧ ಡಿಸಿಗೆ ದೂರು

ವಿಜಯಪಥ ಸಮಗ್ರ ಸುದ್ದಿ

ಹಾಸನ: ಚಿಕ್ಕಮಂಗಳೂರು ವಿಭಾಗದ ಅರಸೀಕೆರೆ ಘಟಕದ ಪ್ರಭಾರ ವ್ಯವಸ್ಥಾಪಕನನೂ ಆಗಿರುವ ಸಹಾಯಕ ಸಂಚಾರಿ ಅಧೀಕ್ಷಕರು (ATS) ನೆಪ ಮಾತ್ರಕ್ಕೆ ಘಟಕಕ್ಕೆ ಬಂದು ಹೋಗುತ್ತಿದ್ದು, ಯಾವುದೇ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಚಿಕ್ಕಮಂಗಳೂರು ವಿಭಾಗ ವಿಭಾಗೀಯ ನಿಯಂತ್ರಣ ಅಧಿಕಾರಿಗಳನ್ನು ಎಸ್.ಎಲ್.ಲೋಕೇಶ್ ಹುಳಿಯಾರು ಒತ್ತಾಯಿಸಿದ್ದಾರೆ.

16.7.2024ರಂದು ಅರಸೀಕೆರೆ ಘಟಕದ ಸಾಯಕ ಸಂಚಾರಿ ಅಧೀಕ್ಷಕ ರವಿಕುಮಾರ್ ಅವರು ವಾರದ ರಜೆ ಪಡೆಯುವ ಮುಂಚಿನ ದಿನ ಬೇಗ ಘಟಕದಿಂದ ಹೋಗುತ್ತಿದ್ದು ವಾರದ ರಜೆಯ ನಂತರ ಮಧ್ಯಾಹ್ನದ ಮೇಲೆ ಘಟಕಕ್ಕೆ ಆಗಮಿಸುತ್ತಿರುವುದಾಗಿ ತಮ್ಮ ಗಮನಕ್ಕೆ ಅಂಚೆ ಮುಖಾಂತರ ಒಂದು ದೂರನ್ನು ನಾವು ಈಗಾಗಲೇ ಸಲ್ಲಿಸಿದ್ದೇವೆ.

ಆದರೂ ಸಹ 26.7.2024ರ ಶನಿವಾರ ಕೂಡ ಅರಸೀಕೆರೆ ಘಟಕದ ಸಾಯಕ ಸಂಚಾರಿ ಅಧೀಕ್ಷಕ ರವಿಕುಮಾರ್ ಸಂಜೆ 5:30ಕ್ಕೆ ಘಟಕಕ್ಕೆ ಆಗಮಿಸಿದ್ದರು. ಈ ಬಗ್ಗೆಯೂ ನಾವು ಬೆಳಗ್ಗೆ 10:30ಕ್ಕೆ ಸರಿಯಾಗಿ ನಿಮಗೆ ಮತ್ತು ಸಂಚಲನಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ.

ಈ ವೇಳೆ ವಿಭಾಗಿಯ ಸಂಚಾಲನಾಧಿಕಾರಿಗಳು ನನಗೆ ದೂರವಾಣಿ ಮುಖಾಂತರ ಸಂಪರ್ಕಿಸಿದ್ದು ಅವರು ಸಹಾಯಕ ಸಂಚಾರಿ ಅಧೀಕ್ಷಕರು ಶನಿವಾರದ ದಿನ ಪೊಲೀಸ್ ಠಾಣೆಗೆ ತೆರಳಿದ್ದರು ಆದ ಕಾರಣ ಅವರು ತಡವಾಗಿ ಘಟಕಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದರು.

ಇನ್ನು ರವಿಕುಮಾರ್ ಅವರು ಯಾವ ಪೊಲೀಸ್ ಠಾಣೆಗೆ ಹೋಗಿದ್ದರು ಯಾವ ಪ್ರಕರಣದ ಬಗ್ಗೆ ದೂರು ದಾಖಲಿಸಿದ್ದಾರೆ. ಆ ಪೊಲೀಸ್ ಠಾಣೆಯು ಅರಸೀಕೆರೆಯಿಂದ ಎಷ್ಟು ಕಿಲೋಮೀಟರ್ ದೂರದಲ್ಲಿದೆ ಎಂಬ ಮಾಹಿತಿಯು ಬೇಕಾಗಿದ್ದು ಆ ಸಮಯದಲ್ಲಿ ಅವರು ಪೊಲೀಸ್‌ ಠಾಣೆಯಲ್ಲಿರುವ ದೃಶ್ಯಾವಳಿಗಳನ್ನು ಪಡೆದು ತನಿಖೆ ನಡೆಸುವುದು ಮುಖ್ಯವಾಗಿದೆ.

ಏಕೆಂದರೆ ಅದು ಮುಂದಿನ ದೂರು ದಾಖಲಿಸಲು ಅನುಕೂಲವಾಗುತ್ತದೆ. ಇಲ್ಲಿ ಮೇಲ್ನೋಟಕ್ಕೆ ಈ ವ್ಯಕ್ತಿಗೆ ವಿಭಾಗ ಮಟ್ಟದ ಅಧಿಕಾರಿಗಳೇ ಪರೋಕ್ಷವಾಗಿ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ವಿಭಾಗಿಯ ಸಂಚಲನಾಧಿಕಾರಿಗಳು ಈ ವ್ಯಕ್ತಿಯು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಹಾಗೂ ಅವರು ಪ್ರಭಾರ ಘಟಕ ವ್ಯವಸ್ಥಾಪಕರಾಗಿರುವುದರಿಂದ ಅವರಿಗೆ ನಿಗದಿತ ಸಮಯ ಕೆಲಸ ನಿರ್ವಹಿಸುವ ನಿರ್ದೇಶನ ವಿರುವುದಿಲ್ಲ. ಅವರು ದಿನದ ಎಲ್ಲ ಸಮಯದಲ್ಲೂ ಘಟಕದ ಕೆಲಸ ನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

ಅದಲ್ಲದೆ ಈ ರವಿಕುಮಾರ್ ಘಟಕದ ಹತ್ತಿರವೇ ಮನೆ ಮಾಡಿಕೊಂಡಿದ್ದು ಪದೇಪದೆ ಘಟಕದಿಂದ ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಯಾರಾದರೂ ವಿಚಾರಿಸಿದರೆ ಆ ವೇಳೆ ನಾನು ಬಸ್ ನಿಲ್ದಾಣದಲ್ಲಿ ಕೆಲಸ ನಿರ್ವಹಿಸಲು ಹೋಗಿದ್ದೆ ಎಂದು ತಿಳಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಬಸ್ ನಿಲ್ದಾಣದಲ್ಲಿರುವ ಇರುವ ಸಮಯದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೂಲಂಕಶವಾಗಿ ತನಿಖೆಗೆ ಒಳಪಡಿಸುವ ಅಗತ್ಯವಿದೆ.

ಇದಲ್ಲದೆ ಈ ರವಿಕುಮಾರ್ ತನ್ನ ಕೈ ಕೆಳಗಿನ ಸಿಬ್ಬಂದಿಗಳನ್ನು ನಡೆಸಿಕೊಳ್ಳುವ ರೀತಿಯು ತುಂಬಾ ಭಯಂಕರವಾಗಿದೆ ಸಿಬ್ಬಂದಿಯು ಘಟಕದಲ್ಲಿ ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಇವರ ಭಯಕ್ಕಾಗಿ ಯಾವುದೇ ಸಿಬ್ಬಂದಿಯು ಇವರ ಮೇಲೆ ಸಾಕ್ಷಿ ಹೇಳಲು ಹಾಗೂ ದೂರು ನೀಡಲು ಮುಂದಾಗುವುದಿಲ್ಲ.

ಇಂಥ ನೌಕರ ವಿರೋಧಿ ಮತ್ತು ಮೈಗಳ್ಳ ಅಧಿಕಾರಿಯನ್ನು ಕೂಡಲೇ ಅರಸೀಕೆರೆ ಘಟಕದಿಂದ ವರ್ಗಾವಣೆ ಮಾಡಿ ಅರಸೀಕೆರೆ ಘಟಕದ ಚಾಲನಾ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಉತ್ತಮ ರೀತಿಯ ವಾತಾವರಣ ನಿರ್ಮಿಸಿ ಕೊಡಬೇಕು ಹಾಗೂ ರವಿಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಲೋಕೇಶ್‌ ಲಿಖಿತ ದೂರು ದಾಖಲಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ