ಬೆಂಗಳೂರು: ಸಂಘಟನೆಗಳ ಅಸ್ತಿತ್ವದ ಉಳಿವಿಗಾಗಿ ಅ.9ರ ಬುಧವಾರ ನಡೆಯಲಿರುವ ವಿಧಾನಸೌಧದ ಸಭೆಯಲ್ಲಿ ನೌಕರರ ಭವಿಷ್ಯದ ಬದುಕಲ್ಲಿ ಚೆಲ್ಲಾಟವಾಡ ಬೇಡಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನುಕೊಡಿಸುವ ನಿಟಾಟಿನಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಎಲ್ಲ ಸಂಘಟನೆಗಳ ಮುಖಂಡರಲ್ಲಿ ರುದ್ರೇಶ್ ಎಸ್. ನಾಯಕ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಲ್ಲ ಸಂಘಟನೆಗಳ ಪ್ರಮುಖ ಮುಖಂಡರಲ್ಲಿ ನನ್ನ ಮನವಿ ಏನೆಂದರೆ ಸಾರಿಗೆ ನೌಕರರಿಗೆ 38 ತಿಂಗಳ ಹಿಂಬಾಕಿ ಹಣ ಮತ್ತು 2024ರ ಜನವರಿ ತಿಂಗಳಲ್ಲಿ ಸಾರಿಗೆ ನೌಕರರಿಗೆ ವೇತನ ಜಾರಿ ಗೊಳಿಸದ ಸರ್ಕಾರ ಮತ್ತು ಆಡಳಿತ ಮಂಡಳಿಯ ವಿರುದ್ಧ ನೌಕರರು ಬಹಳ ಕೆಂಡಾಮಂಡಲಾವಾಗಿರುವುದು ನೂರಕ್ಕೆ ನೂರರಷ್ಟು ಸತ್ಯ.
ಅದು ನಿಮ್ಮಗಳಿಗೂ ಅರಿವಿದೆ ಆದಾಗ್ಯೂ ನಿಮ್ಮ ನಿಮ್ಮ ಸ್ವ ಪ್ರತಿಷ್ಠೆ ನೋಡಿದರೆ ನೌಕರರ ಬಾಳಲ್ಲಿ ಚೆಲ್ಲಾಟವಾಡುತ್ತಿರುವುದು ಸ್ಪಷ್ಟವಾಗಿ ನೌಕರರಿಗೆ ಎದ್ದು ಕಾಣುತ್ತದೆ. ನಿಮ್ಮ ವೈಯಕ್ತಿಕ ಸಂಘಟನೆಗಳನ್ನು ಉಳಿಸಿಕೊಳ್ಳವ ನೀವುಗಳು ನೀವು ನೀವೆ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೀವು ನಿಂದಿಸುವುದು ನಿಮ್ಮನ್ನು ಅವರು ನಿಂದಿಸುವುದು ನೋಡಿದರೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬುದಾಗಿದೆ.
ನಮ್ಮ ಸಾರಿಗೆ ನೌಕರರ ಬದುಕು ಇಂದಿನ ಈ ಪರಿಸ್ಥಿತಿಯಲ್ಲಿ ನೌಕರರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ. ಇವತ್ತಿನ ದಿನಮಾನದಲ್ಲಿ ದಿನಬಳಕೆಯ ವಸ್ತುಗಳು ದಿನೇದಿನೇ ಬೆಲೆ ಏರಿಕೆ ಜಾಸ್ತಿ ಆಗುತ್ತಲೆ ಇವೆ. ಮಕ್ಕಳ ವಿದ್ಯಾಭ್ಯಾಸದ ಶಾಲೆ ಫೀಸ್ ಗಳನ್ನು ಸಹ ಇನ್ನೂ ಪೂರ್ಣ ಕಟ್ಟಿಲ್ಲ.
ಏಕೆಂದರೆ ವೇತನ ಈ ತಿಂಗಳಲ್ಲಿ ಜಾಸ್ತಿ ಆಗುತ್ತದೆ ಆ ತಿಂಗಳಲ್ಲಿ ಜಾಸ್ತಿ ಆಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಾರಿಗೆ ನೌಕರರ ಜೀವನದ ಜೊತೆಯಲ್ಲಿ ಚೆಲ್ಲಾಟ ಆಡುತ್ತಿರುವ ಸಂಘಟನೆಯ ಮುಖಂಡರೇ ನೌಕರರ ನೋವು ನಲಿವುಗಳನ್ನು ಗಮನಿಸಿ ಇಲ್ಲವೇ ಡಿಪೋ ಡಿಪೋಗಳ ಬಳಿ ಬಂದು ಸಮಸ್ಯೆಗಳನ್ನು ಆಲಿಸಿ.
ಮಾತು ಎತ್ತಿದರೇ ನಮ್ಮದು ನಲವತ್ತು ವರ್ಷದ ಸಂಘಟನೆ ನಾವು ನೌಕರರಿಗೆ ಬೃಷ್ಟಾನ್ನ ಭೋಜನ ಕೊಡಿಸಿದ್ದೇವೆ ಎಂದು ಹೇಳಿಕೊಳ್ಳುವ ಒಂದು ಸಂಘಟನೆ ಸುಮಾರು ನಾಲ್ಕೈದು ವರ್ಷದಿಂದ ನೌಕರರಿಗೆ ನಿಮ್ಮ ಬಾಳು ಹಸನು ಮಾಡುತ್ತೇನೆ ಎಂದು ಸುಮಾರು ಮೂರು ಸಾವಿರ ನೌಕರರ ಬಾಳಲ್ಲಿ ಚೆಲ್ಲಾಟ ಆಡಿ ದೊಂಬರಾಟ ಆಡಿದ ಇನ್ನೊಂದು ನಾಟಕದ ಕಂಪನಿ ನಿಮ್ಮ ಈರ್ವರ ಡ್ರಾಮಾ ಕಂಪನಿಗಳನ್ನು ಸಾರಿಗೆ ನೌಕರರ ಗಮನಾರ್ಹ ಎದುರು ನೋಡುತ್ತಿದ್ದಾರೆ.
ದಯವಿಟ್ಟು ನಿಮ್ಮ ನಿಮ್ಮ ಸಂಘಟನೆಯ ಪ್ರತಿಷ್ಠೆಗೆ ಸರ್ಕಾರ ಮತ್ತು ಆಡಳಿತ ಮಂಡಳಿ ನಿಮ್ಮನ್ನು ಕರೆದಿಲ್ಲ ಸೌಜನ್ಯಕ್ಕಾಗಿ ನಿಮ್ಮನ್ನು ಕರೆದಿದೆ ಅದನ್ನು ಮನದಟ್ಟು ಮಾಡಿಕೊಂಡು ನೌಕರರ ಹಿತ ಕಾಪಾಡಿ ಬುಧವಾರ ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ ನೌಕರರಿಗೆ ಕಿಂಚಿತ್ತಾದರೂ ಒಳಿತು ಮಾಡುವ ಉದ್ದೇಶವಿದ್ದರೆ ಸಭೆಯಲ್ಲಿ ಪಾಲ್ಗೊಳ್ಳಿ ಇಲ್ಲ ಎಂದರೆ ಸರ್ಕಾರ ಮತ್ತು ಆಡಳಿತ ಮಂಡಳಿಗೆ ಬಿಟ್ಟು ನೆಮ್ಮದಿಯಿಂದ ಸೇವೆಯಿಂದ ವಜಾಗೊಂಡದ್ದೀರಾ ಮನೆಯಲ್ಲಿ ಇರಬೇಕು.
ಸರ್ಕಾರ ಮತ್ತು ನಮ್ಮ ಸಂಸ್ಥೆಯ ಆಡಳಿತ ಮಂಡಳಿಯು ಎರಡು ಕಣ್ಣುಗಳು ಇದ್ದಂತೆ ಅವರು ನಮ್ಮನ್ನು ನೀರಲ್ಲಿ ಆದರೂ ಹಾಕಲಿ ಇಲ್ಲ ವಿಷವನ್ನಾದರು ನೀಡಲಿ ಬಿಟ್ಟುಬಿಡಿ ಎಂದು ತಮ್ಮ ಮನದಾಳವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ರೇಶ್ ಎಸ್. ನಾಯಕ ಹೊರಹಾಕಿದ್ದಾರೆ.
ಹೀಗಾಗಿ ಸಂಘಟನೆಗಳ ಮುಖಂಡರು ತಮ್ಮ ಉಳಿಗಾಗಿ ಹೋರಾಟ ಮಾಡುವ ಬದಲು ನೌಕರರಿಗೆ ಸಿಗಬೇಕಿರುವ ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿ ಕೊಡುವತ್ತ ಗಮನ ಹರಿಸಿ ಹೀಗೆ ನೀವುಮಾಡಿದೆ ನೌಕರರು ನಿಮ್ಮ ಕೈ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.