NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಹೊಸ ಇಟಿಎಂಗಳಿಂದ ಡ್ಯೂಟಿ ಮಾಡಲಾಗುತ್ತಿಲ್ಲ – ಹಳೇ ಇಟಿಎಂಗಳನ್ನೇ ಕೊಡಿ: ಎಂಡಿಗೆ ನಿರ್ವಾಹಕರ ಮನವಿ

ವಿಜಯಪಥ ಸಮಗ್ರ ಸುದ್ದಿ

*ರಾಮನಗರ ಘಟಕ ವ್ಯವಸ್ಥಾಪಕರಿಂದಲೂ ಡಿಸಿಗೆ ಸಮಸ್ಯೆ ವಿವರಣೆ
* ಇಟಿಎಂಗಳ ಸಮಸ್ಯೆ * ಸಂಸ್ಥೆಗೆ ಸ್ವಂತ ಹಣ ಕಟ್ಟುತ್ತಿರುವ ನಿರ್ವಾಹಕರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕರಿಗೆ ಕರ್ತವ್ಯ ನಿರ್ವಹಿಸಲು ಹೊಸ ಇಟಿಎಂ ಮಷಿನ್‌ಗಳಿಂದ ಭಾರಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಇದರ ಬದಲು ಹಳೆ ಇಟಿಎಂ ಮಷಿನ್ ಕೊಡಿ ಅಥವಾ ಈ ಹೊಸ ಮಷಿನ್‌ಗಳ ವಿನ್ಯಾಸ ಬದಲಿಸಿ ಕೊಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಚಾ ಕಂ ನಿರ್ವಾಹಕ ಆ‌ರ್.ಪರಶುರಾಮಪ್ಪ ಮನವಿ ಮಾಡಿದ್ದಾರೆ.

ಸಂಸ್ಥೆಯ ಚಿತ್ರದುರ್ಗ ಘಟಕ ಪರಶುರಾಮಪ್ಪ ಅವರು ಅ.4ರಂದು ಬೆಂಗಳೂರು ಶಾಂತಿನಗರದಲ್ಲಿರುವ ಎಂಡಿ ಅವರಿಗೆ ಲಿಖಿತವಾಗಿ ಮನವಿ ಮಾಡಿದ್ದು, ಚಿತ್ರದುರ್ಗ ಘಟಕದ ಎಲ್ಲ ನಿರ್ವಾಹಕರ ಪರವಾಗಿ ಆ‌ರ್.ಪರಶುರಾಮಪ್ಪ ಚಾಲಕ ಕಂ ನಿರ್ವಾಹಕ (ಬಿಲ್ಲೆ ಸಂಖ್ಯೆ 10670) ಆದ ನಾನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿ ಕೊಳ್ಳುತ್ತಿದ್ದೇನೆ.

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿ ಕೊಟ್ಟಾಗಿನಿಂದ ಶಕ್ತಿ ಯೋಜನೆ ಜಾರಿಗೆ ತಂದಾಗಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವೇಗದೂತ ಗ್ರಾಮೀಣ ಮತ್ತು ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ.

ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವೇಗದಲ್ಲಿ ಟಿಕೆಟ್‌ ವಿತರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೇಗದೂತ, ನಗರ, ಗ್ರಾಮೀಣ, ಭಾಗದ ಬಸ್ಸುಗಳನ್ನು ದಾರಿ ಮಧ್ಯ ಮತ್ತು ಅಲ್ಲಲ್ಲಿ ನಿಲ್ಲಿಸಿ ಹೊಸ ಇಟಿಎಂ ಮಷಿನ್ನಿಂದ ಟಿಕೆಟ್ ವಿತರಿಸಬೇಕಾಗಿದೆ. ಇನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ಟೇಜ್‌ಗಳು ತುಂಬ ಹತ್ತತ್ತಿರ ಇರುವುದರಿಂದ ಹೊಸ ಇಟಿಎಂ ಮಷಿನ್ನಿಂದ ಬೇಗ ಬೇಗ ಟಿಕೆಟ್‌ ಕೊಡಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಈ ಹೊಸ ಇಟಿಎಂ ಮಷಿನಲ್ಲಿ ಆಪ್ಷನ್‌ಗಳು ಹೆಚ್ಚಾಗಿರುವುದರಿಂದ ರಾಜಹಂಸ, ನಾನ್ ಸ್ಟಾಪ್ ಮಲ್ಟಿಆಕ್ಸೆಲ್, ವೋಲ್ವೋ ಸ್ವೀಪರ್ ಕೋಚ್ ಇಂತಹ ಬಸ್ಸುಗಳಲ್ಲಿ ಪ್ರಯಾಣಿಕರು ಸೀಟ್ ಲೆವೆಲ್ ಗಿಂತ ಜಾಸ್ತಿ ಮತ್ತು ಕಡಿಮೆ ಇರುತ್ತಾರೆ ಸ್ಟೇಜ್‌ಗಳು ದೂರ ದೂರ ಇರುವುದರಿಂದ ಹೊಸ ಇಟಿಎಂ ಮಷಿನ್‌ನಲ್ಲಿ ಟಿಕೆಟ್ ಮಾಡುವುದು ತುಂಬಾ ಸುಲಭ.

ಆದರೆ, ವೇಗದೂತ ನಗರ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಹೊಸ ಇಟಿಎಂ ಮಷಿನಲ್ಲಿರುವ ಎಲ್ಲ ಆಪ್ಷನ್‌ಗಳನ್ನು ಆಯ್ಕೆ ಮಾಡಿ ಬೇಗ ಬೇಗ ಟಿಕೆಟ್ ಕೊಡುವುದೂ ನಿರ್ವಾಹಕರಿಗೆ ತುಂಬಾ ಕಷ್ಟವಾಗುತ್ತಿದೆ ಮತ್ತು ತಡವಾಗುತ್ತಿದೆ ಈ ಇಟಿಎಂ ಮಷಿನ್ನಲ್ಲಿ ಬಸ್ಸಿನೊಳಗೆ ಮಹಿಳೆಯರು, ಮಕ್ಕಳು, ವಯಸ್ಸಾದವರು, ಪುರುಷರು ಎಷ್ಟು ಜನ ಇದ್ದಾರೆ ಅಂತ ತೋರಿಸುವುದಿಲ್ಲ.

ಆಪ್ಷನ್‌ಗಳು ಹೆಚ್ಚಾಗಿವೆ, ಡಿಸ್ ಪ್ಲೆ ಸಣ್ಣದಾಗಿದೆ ಅಕ್ಷರಗಳು ನಂಬರ್‌ಗಳು ಹತ್ತಿರತ್ತಿರ ಇರುವುದರಿಂದ ಒಂದು ಮಹಿಳೆ, ಮಕ್ಕಳು, ಪುರುಷರು ಅಂತ ಅಯ್ಕೆ ಮಾಡುವುದಕ್ಕೆ ಹೋಗಿ ಎರಡು ಮೂರು ಟಿಕೆಟ್ ಬರುತ್ತಿದ್ದು ಇದರಿಂದ ಕಳೆದ ಎರಡು ಮೂರು ದಿನದಲ್ಲಿ ಸಾಕಷ್ಟು ನಿರ್ವಾಹಕರು ಹಣವನ್ನು ತಮ್ಮ ಕೈಯಿಂದ ಸಂಸ್ಥೆಗೆ ಕಟ್ಟಿದ್ದಾರೆ.

ಇದರಿಂದ ನಿರ್ವಾಹಕರು ಲಾಸ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳು ಇದ್ದಾವೆ. ಜತೆಗೆ ವಯಸ್ಸಾದ ನಿರ್ವಾಹಕರು ಸೇರಿದಂತೆ ಎಲ್ಲ ನಿರ್ವಾಹಕರಿಗೆ ಕಣ್ಣುನೋವು ಬರುತ್ತಿದ್ದು ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಇನ್ನೊಂದೆಡೆ ಪ್ರಯಾಣಿಕರಿಗೆ ಈ ಚಿಕ್ಕ ಟಿಕೆಟ್ ವಿತರಿಸುತ್ತಿರುವುದರಿಂದ ಅವರು ಉಪಾಹಾರಕ್ಕೆ ಇಳಿದಾಗ, ವಾಸ್‌ ರೂಂಗೆ ಹೋದಾಗ ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇದೆ.

ಅದರಿಂದ ನಿರ್ವಾಹಕರ ಮೇಲೆ ದಿನೇದಿನೆ ಕೇಸ್‌ಗಳು ದಾಖಲಾಗುವ ಮತ್ತು ನೌಕರಿ ಕಳೆದುಕೊಳ್ಳುವ ಸಾಧ್ಯತೆ ಇರುವದರಿಂದ ಕರ್ತವ್ಯ ನಿರತ ನಿರ್ವಾಹಕರಿಗೆ ಹಳೆ ಇ.ಟಿ.ಎಂ ಮಷಿನ್ ಕೊಡಬೇಕಾಗಿ ಅಥವಾ ವೇಗದೂತ ನಗರ ಗ್ರಾಮೀಣ ಭಾಗದಲ್ಲಿ ಡ್ಯೂಟಿ ಮಾಡುವ ನಿರ್ವಾಹಕರಿಗೆ ಬೇಗ ಬೇಗ ಟಿಕೆಟ್ ಕೊಡಲು ಸುಲಭವಾಗುವಂತೆ ಹೊಸ ಇಟಿಮ್ ಮಷಿನ್ ಗಳನ್ನ ವಿನ್ಯಾಸಗೊಳಿಸಿ ಕೊಡಬೇಕಾಗಿ ತಮ್ಮಲ್ಲಿ ಮತ್ತೊಮ್ಮೆ ವಿನಯಪೂರ್ವಕವಾಗಿ ವಿನಂತಿಸಿ ಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇವರಷ್ಟೇ ಅಲ್ಲದೆ ರಾಮನಗರ ಘಟಕದ ಡಿಎಂ ಅವರು ಕೂಡ ಈ ಈ ಸಮಸ್ಯೆ ನಿವಾರಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದ್ದಾರೆ. ಅಲ್ಲದೆ ಇಟಿಎಂ ಹೇಗೆ ಕೆಲಸ ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.

ಇನ್ನು ಈ ಹೊಸ ಇಟಿಎಂಗಳಿಂದ ನಿರ್ವಾಹಕರು ಸಮಸ್ಯೆ ಎದುರಿಸುತಿರುವುದನ್ನು ನಾವು ಸ್ವತಃ ಪರೀಕ್ಷಿಸಿದ್ದು ಈ ಬಗ್ಗೆ ತಾವು ಶೀಘ್ರದಲ್ಲೇ ಕ್ರಮ ತೆಗೆದುಕೊಂಡು ಇಟಿಎಂಗಳ ಸಮಸ್ಯೆಯನ್ನು ಸರಿಪಡಿಸಿಕೊಡಬೇಕು ಎಂದು ವಿವರಿಸಿದ್ದಾರೆ.

ಈ ಹೊಸ ಇಟಿಎಂಗಳು ಇದೇ ಅ.1ರಿಂದ ಸಂಸ್ಥೆಯ ಬಸ್‌ಗಳಲ್ಲಿ ಬಳಸುತ್ತಿದ್ದು, ಒಂದು ಇಟಿಎಂಗೆ ತಿಂಗಳಿಗೆ 650 ರೂಪಾಯಿ ಬಾಡಿಗೆ ಕೊಡಬೇಕಿದೆ. ಇದರ ಬದಲಿಗೆ ಸಂಸ್ಥೆಯಿಂದಲೇ ಖರೀದಿಸಿದರೆ ತಿಂಗಳ ಬಾಡಿಗೆಯ ಕೋಟಿ ಕೋಟಿ ಹಣ ಉಳಿತಾಯವಾಗುವುದಿಲ್ಲವೇ ಎಂದು ನೌಕರರು ಹೇಳುತ್ತಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಾಪಾರ ವಹಿವಾಟು ಹೆಚ್ಚಿಸಿ, ಉತ್ಪಾದನೆ ಉತ್ತೇಜಿಸುವ ಸರ್ಕಾರದ ಬದ್ಧತೆ ಶ್ಲಾಘನೀಯ: ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕರಡಿಗೆ ನಾಗರೀಕರಿಂದ ಬರುವ ಸಲಹೆಗಳ ಸೇರಿಸಿ ಅಂತಿಮ: ರಿಜ್ವಾನ್ ಹರ್ಷದ್ ಎಸ್ಸಿಎಸ್‌ಪಿ, ಟಿಎಸ್ಪಿ ವಿಶೇಷ ಯೋಜನೆ ಫೆ. ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಿರಬೇಕು: ಅಧಿಕಾರಿಗಳಿಗೆ ಡಿಸಿ ಆ... ರೈತರ ನಿರಂತರ ಹೋರಾಟಕ್ಕೆ ನಾಳೆಗೆ ವರ್ಷ: ಆದರೂ ಕಿವಿಗೊಡದ ಸರ್ಕಾರ KSRTC: ಫೇಕ್ ಫೋನ್‌ ಪೇ/ UPI ಆಪ್‌ಗಳಿಂದ ದಿನನಿತ್ಯ ನಿರ್ವಾಹಕರಿಗೆ ಆರ್ಥಿಕ ಬರೆ!! KKRTC ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ನಿಂದ ದೂರು ಹಿಂಪಡೆಯುವಂತೆ ಬೆದರಿಕೆ-ಆರೋಪ KSRTC ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ - ಸಿಎಂ ಜತೆ ಸಚಿವ ರಾಮಲಿಂಗಾರೆಡ್ಡಿ ಚರ್ಚೆ ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ