KSRTC 4 ನಿಗಮಗಳ ಬಸ್ ಚೀಟಿ ದರ ಪರಿಷ್ಕರಣೆಯಿಂದ ತಲೆದೋರಿದ ಚಿಲ್ಲರೆ ಸಮಸ್ಯೆ-ನಿರ್ವಾಹಕರು ಪ್ರಯಾಣಿಕರ ನಡುವೆ ಫೈಟ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿ ಇದೇ ಜ.5ರಿಂದ ಜಾರಿಗೆ ಬಂದಿದೆ. ಆದರೆ ಈ ಪರಿಷ್ಕೃತ ದರ ನಿರ್ವಾಹಕರಿಗೆ ಭಾರಿ ತಲೆನೋವಾಗಿ ಪರಿಣಮಿಸಿದ್ದು ಪ್ರಯಾಣಿಕರೊಂದಿಗೆ ಚಿಲ್ಲರೆಗಾಗಿ ಜಗಳವಾಡಿಕೊಂಡೆ ಡ್ಯೂಟಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಗಳೂರು ಮಹಾನರಗ ಸಾರಿಗೆ ನಿಗಮದ ನೂತನ ಚೀಟಿ ದರ 6, 12, 18, 23, 24, 28 ರೂಪಾಯಿ ಮಾಡಲಾಗಿದೆ. ಇದರಿಂದ ಪ್ರಯಾಣಿಕರು 6 ರೂಪಾಯಿ ಬದಲಿಗೆ 10 ರೂಪಾಯಿ ಹಾಗೂ 12 ರೂ. ಬದಲಿಗೆ 15 ಅಥವಾ 20 ರೂ. ಹಾಗೂ 24-28 ರೂ. ಬದಲಿಗೆ 30 ರೂ. ಇಲ್ಲ 40 ರೂ. ಕೊಡುತ್ತಿದ್ದಾರೆ. ಇದರಿಂದ ನಿರ್ವಾಹಕರು ಚಿಲ್ಲರೆ ಸಮಸ್ಯೆ ಎದುರಿಸುವಂತಾಗಿದೆ.
ಇತ್ತ ಪ್ರಯಾಣಿಕರು ಚಿಲ್ಲರೆ ತೆಗೆದುಕೊಂಡು ಬರುವ ಮೂಲಕ ನಿರ್ವಾಹಕರಿಗೆ ಸಾಥ್ ನೀಡಬೇಕಿದೆ. ಹೀಗೆ ಮಾಡಿದರೆ ಸಮಸ್ಯೆ ಇಲ್ಲ. ಆದರೆ ಬಹುತೇಕ ಪ್ರಯಾಣಿಕರು 10, 20, 25, 30 ಇಲ್ಲ 40 ರೂಪಾಯಿ ನೀಡುತ್ತಿರುವುದರಿಂದ ಅವರಿಗೆ 1, 2, 3, 4, 7, 8, ರೂಪಾಯಿ ಚಿಲ್ಲರೆ ವಾಪಸ್ ನೀಡುವುದಕ್ಕೆ ಆಗುತ್ತಿಲ್ಲ.
ಹೌದು! ಚಿಲ್ಲರೆ ತರಬೇಕಾದದ್ದು ಪ್ರಯಾಣಿಕರ ಕರ್ತವ್ಯವೇ. ಆದರೆ ಪ್ರಯಾಣಿಕರು ನಿರ್ವಾಹಕರಿಗೆ ಕೇಳುವ ಪ್ರಶ್ನೆ ಚಿಲ್ಲರೆ ಎಲ್ಲಿಂದ ತರಲಿ ಎಂದು. ಇದರಿಂದ ನಿರ್ವಾಹಕರಿಗೆ ಈ ಎರಡು ದಿನದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಅಲ್ಲದೆ ಪ್ರಯಾಣಿಕರೊಂದಿಗೆ ದಿನವಿಡೀ ಜಗಳ ಮಾಡಿಕೊಂಡೇ ಕರ್ತವ್ಯ ನಿರ್ವಹಿಸುವಂತಾಗಿದೆ.
ಇನ್ನು ಇದರಿಂದ ಕೆಲ ನೌಕರರು ಈ ದಿನ ಕರ್ತವ್ಯಕ್ಕೆ ಹೋಗಬೇಕೇ ಬೇಡವೇ ಎಂದು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೌಕರರು ಚೀಟಿದರವನ್ನು ಚಿಲ್ಲರೆ ಮುಕ್ತಗೊಳಿಸುವ ರೀತಿಯಲ್ಲಿ ಮಾಡಬೇಕು. ಇಲ್ಲ ಇದು ಹೀಗೆಯೇ ಮುಂದುವರಿದರೆ ನಿರ್ವಾಹಕರಿಗೆ ಮುಂದಿನ ದಿನಗಳಲ್ಲಿ ಪೈಲ್ಸ್, ಬಿಪಿ, ಶುಗರ್ ಎಲ್ಲ ರೋಗಗಳು ಬರುತ್ತವೆ.
ದಯಮಾಡಿ ಮೇಲಧಿಕಾರಿಗಳು ಈ ಚಿಲ್ಲರೆ ಸಮಸ್ಯೆಗೆ ಪರಿಹಾರ ನೀಡಿ. ಆದಷ್ಟೂ ಬೇಗ ನಗದು ರಹಿತ ಅಂದರೆ UPI ಪದ್ಧತಿ ಜಾರಿಯಾದಲ್ಲಿ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯಾಗುತ್ತದೆ ಎಂದು ನೌಕರರು ಮನವಿ ಮಾಡಿದ್ದಾರೆ.