CrimeNEWSನಮ್ಮರಾಜ್ಯ

KSRTC:ಹಲ್ಲೆಗೊಳಗಾದ ಬಸ್‌ ಚಾಲಕ ಕೊಟ್ಟ ದೂರು ಸ್ವೀಕರಿಸದೆ  4ದಿನಗಳಿಂದ ಅಲೆಸುತ್ತ ಆರೋಪಿಗಳ ಪರ ನಿಂತ ನೀಚ ಪೊಲೀಸರು 

ವಿಜಯಪಥ ಸಮಗ್ರ ಸುದ್ದಿ

ಕನಕಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಚಾಲಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ಕೂಡಲು ಹೋದರೆ ಚಾಲಕ ಮತ್ತು ಚಾಲಕನ ಜತೆಗೆ ಹೋಗಿದ್ದ ಸಾರಿಗೆ ಅಧಿಕಾರಿಯನ್ನೂ ಹೆದರಿಸಿ ಪೊಲೀಸರು ವಾಪಸ್‌ ಕಳುಹಿಸುವ ಘಟನೆ ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.

ಕನಕಪುರ -ಬೆಂಗಳೂರು ನಡುವೆ ಕಾರ್ಯಾಚರಣೆ ಮಾಡುತ್ತಿದ್ದ KSRTC ಬಸ್‌ಗೆ ಕಳೆದ ಭಾನುವಾರ ಅಂದರೆ ಮೇ 26ರಂದು ಆಟೋ ಚಾಲಕ ಬಲಗಡೆಯಿಂದ ಉಜ್ಜಿಕೊಂಡು ಹೋಗಿದ್ದು ಅಲ್ಲದೆ ಕೇಳಲು ಹೋದ ಚಾಲಕನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದರೆ ಕೆಎಸ್‌ಅರ್‌ಟಿಸಿ ಚಾಲಕನನ್ನೇ ಹೆದರಿಸಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಪಸ್‌ ಕಳುಹಿಸಿದ್ದು, ಈವರೆಗೂ ಅಂದರೆ ಮೇ 30ರ ಬೆಳಗ್ಗೆ 11ಗಂಟೆ ವರೆಗೂ ಆರೋಪಿ ವಿರುದ್ಧ ದೂರು ತೆಗೆದುಕೊಳ್ಳದೆ ಪೊಲೀಸರು ದರ್ಪ ಮೆರೆಯುತ್ತಿದ್ದಾರೆ.

ಘಟನೆ ವಿವರ: ಅಂಧು ಭಾನುವಾರ ರಾತ್ರಿ 7.30ರ ಸುಮಾರಿಗೆ ಕನಕಪುರ ಬಸ್‌ ನಿಲ್ದಾಣ ಬಿಟ್ಟು ಬೆಂಗಳೂರಿಗೆ ಬರುತ್ತಿದ್ದಾಗ ರವಿಶಂಕರ್‌ ಗುರೂಜಿ ಆಶ್ರಮದ ಬಳಿ ಆಟೋವೊಂದು ಬಸ್‌ ಉಜ್ಜಿಕೊಂಡು ಹೋಗಿದೆ. ಈ ವೇಳೆ ಚಾಲಕ ಕಂ ನಿರ್ವಾಹಕರಾದ ಪಿ. ಪ್ರತಾಪ್‌ ಅವರು ಬಸ್‌ ನಿಲ್ಲಿಸಿ ಬಸ್‌ಗೆ ಏಕೆ ಉಜ್ಜಿಕೊಂಡು ಬಂದೆ ಎಂದು ಕೇಳಿದ್ದಾರೆ. ಅದಕ್ಕೆ ಆಟೋ ಚಾಲಕ ಸೇರಿ ಇಬ್ಬರು ಬಸ್‌ ಚಾಲಕ ಪ್ರತಾಪ್‌ ಮೇಲೆ ಹಲ್ಲೆ ಮಾಡಿದ್ದಾರೆ.

ಈ ವೇಳೆ KSRTC ಬಸ್‌ ಚಾಲಕನ ಮುಖದ ಮೇಲೆ ತುಟಿಯಮೇಲೆ ಕತ್ತಿನ ಮುಂಭಾಗ ಮತ್ತು ಹಿಂಭಾಗದಲ್ಲಿ ರಕ್ತ ಬಂದಿದೆ. ಅಷ್ಟರ ಮಟ್ಟಿಗೆ ಆಟೋ ಚಾಲಕರು ಹಲ್ಲೆ ಮಾಡಿದ್ದಾರೆ. ಬಳಿಕ ಅವರು ಪರಾರಿಯಾಗಲು ಯತ್ನಿಸಿದ್ದಾರೆ, ಈ ವೇಳೆ ಅದೇ ಬಸ್‌ನಲ್ಲಿ ಚಾಲಕ ಪ್ರತಾಪ್‌  ಹಲ್ಲೆಕೋರರನ್ನು  ಹಿಂಬಾಲಿಸಿದ್ದಾರೆ. ಆದರೆ ಅವರು ತಲಘಟ್ಟಪುರ ಸಮೀಪ ಅಡ್ಡರಸ್ತೆಯೊಂದಕ್ಕೆ ಆಟೋ ತಿರುಗಿಸಿಕೊಂಡು ಪರಾರಿಯಾದ್ದಾರೆ.

ಬಳಿಕ ಪ್ರಯಾಣಿಕರ ಸಹಿತ ಪ್ರಯಾಣಿಕರ ಒತ್ತಾಯದ ಮೇರೆಗೆ ತಲಘಟ್ಟಪುರ ಪೊಲೀಸ್‌ ಠಾಣೆಗೆ ಬಸ್‌ ತೆಗೆದುಕೊಂಡು ಹೋಗಿ ನಡೆದ ಘಟನೆಯನ್ನು ಚಾಲಕ ಮತ್ತು ಪ್ರಯಾಣಿಕರು ಪೊಲೀಸರಿಗೆ ವಿವರಿದ್ದಾರೆ. ಆ ವೇಳೆ ತಲಘಟ್ಟಪುರ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನೀವು ಕಗ್ಗಲೀಪುರ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದಾರೆ.

ಕೂಡಲೇ ಚಾಕಲ ಪ್ರತಾಪ್‌ ಅವರು ಕಗ್ಗಲೀಪುರ ಪೊಲೀಸ್‌ ಠಾಣೆಗೆ ಫೋನ್‌ ಮಾಡಿದ್ದಾರೆ. ಈ ವೇಳೆ ಹೌದು! ನೀವು ಎಲ್ಲ ಪ್ರಯಾಣಿಕರನ್ನು ಬೇರೊಂದು ಬಸ್‌ಗೆ ಹತ್ತಿಸಿ ಬಳಿಕ ವಾಪಸ್‌ ಕಗ್ಗಲಿಕಪುರ ಪೊಲೀಸ್‌ ಠಾಣೆಗೆ ಬಸ್‌ ಸಮೇತ ಬನ್ನಿ ಎಂದು ಹೇಳಿದ್ದಾರೆ. ಪೊಲೀಸರು ಹೇಳಿದಂತೆ ಚಾಲಕ ಪ್ರತಾಪ್‌ ಮಾಡಿದ್ದಾರೆ.

ಬಳಿಕ ಕಗ್ಗಲೀಪುರ ಪೊಲೀಸ್‌ ಠಾಣೆಗೆ ಭಾನುವಾರ ರಾತ್ರಿ ಸುಮಾರು 8.30ರಷ್ಟರಲ್ಲಿ ಹೋಗಿದ್ದು, ಆ ವೇಳೆ ಪೊಲೀರು ಸರಿ ಒಂದು ಮೇಡಿಕಲ್‌ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಆಗ ಸಮೀಪದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ತೆರಳಿ ಮೇಡಿಕಲ್‌ ಮಾಡಿಸಿಕೊಂಡು ಬಂದಿದ್ದಾರೆ. ಈ ಎಲ್ಲವನ್ನು ಮಾಡಿಸಿಕೊಂಡು ಬರುವಷ್ಟರಲ್ಲಿ ಸಮಯ ಸುಮಾರು ರಾತ್ರಿ 9.30 ಆಗಿತ್ತು.

ಈಗ ನಿಮಗೆ ಆಗಿರುವುದೆಲ್ಲವನ್ನು ನೋಡಿದ್ದೇವೆ. ಅಲ್ಲದೆ ಈಗ ರಾತ್ರಿಯಾಗಿದೆ ಹೀಗಾಗಿ ನೀವು ಒಂದು ಕೆಲಸ ಮಾಡಿ ಸೋಮವಾರ ಬೆಳಗ್ಗೆ ಬನ್ನಿ ಎಫ್‌ಐಆರ್‌ ಮಾಡಿಬಿಡೋಣ ಎಂದು ಚಾಲಕ ಪ್ರತಾಪ್‌ ಅವರಿಗೆ ಹೇಳಿ ಕಳುಹಿಸಿದ್ದಾರೆ. ಸರಿ ಎಂದು ಸೋಮವಾರ ಬೆಳಗ್ಗೆ ಅಂದರೆ ಮೇ 27ರಂದು ಕಗ್ಗಲೀಪುರ ಪೊಲೀಸ್‌ ಠಾಣೆಗೆ ಚಾಲಕ ಪ್ರತಾಪ್‌ ಮತ್ತು ತಮ್ಮ ಮೇಲಧಿಕಾರಿಯೊಬ್ಬರಿಗೆ ಹೋಗಿದ್ದಾರೆ.

ಈ ವೇಳೆ ಸಾಹೇಬರಿಲ್ಲ ಕಾಯಿರಿ.. ಕಾಯಿರಿ ಎಂದು ಸಂಜೆ 6.30ರ ವರೆಗೂ ಪೊಲೀಸ್‌ ಠಾಣೆಯಲ್ಲೇ ಕೂರಿಸಿಕೊಂಡಿದ್ದಾರೆ. ಬಳಿಕ ಇವತ್ತು ಸಾಹೇಬರು ಬಂದಿಲ್ಲ ನಾಳೆ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ. ಅದಕ್ಕೂ ಒಪ್ಪಿಕೊಂಡು ಮತ್ತೆ ಮಂಗಳವಾರ ಅಂದರೆ ಮೇ 28ರಂದು ಮತ್ತೆ ಹೋಗಿದ್ದಾರೆ. ಆಗಲು ಪೊಲೀಸ್‌ ಠಾಣೆ ಸಿಬ್ಬಂದಿಗಳು ಸಾಹೇಬರು ಇಲ್ಲ ಎಂಬ ಸಬೂಬು ಹೇಳಿಕೊಂಡು ಸಂಜೆವರೆಗೂ ಕಾಯಿಸಿದ್ದಾರೆ.

ಈ ನಡುವೆ ಚಾಕಲ ಪ್ರತಾಪ್‌ ಮೇಲೆ ಹಲ್ಲೆ ಮಾಡಿದವರ ಪರವಾಗಿ ಇಬ್ಬರು ಬಂದಿದ್ದಾರೆ. ಈ ವೇಳೆ ಪೊಲೀಸರು ಚಾಲಕ ಪ್ರತಾಪ್‌ ಅವನ್ನು ಕರೆದು ನೀನು ರಾಜೀಮಾಡಿಕೊ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಾಪ್‌ ಒಪ್ಪಿಕೊಳ್ಳಲಿಲ್ಲ. ಆಗ ಒಬ್ಬ ಮಹಿಳೆಯನ್ನು ಪೊಲೀಸ್‌ ಠಾಣೆಗೆ ಪೊಲೀಸರೆ ಕರೆಸಿ ಈಕೆ ಆಟೋ ಚಾಲಕನ ಹೆಂಡತಿ ಈಕೆಯ ದುಪ್ಪಟ ಹಿಡಿದು ಎಳೆದೆಯಂತೆ ಎಂದು ಪ್ರತಾಗೆ ಅವಾಜ್‌ ಹಾಕಿದ್ದಾರೆ.

ಅಲ್ಲದೆ ಈಕೆ ನಿನ್ನ ವಿರುದ್ಧ ದೂರುಕೊಡುತ್ತಿದ್ದಾಳೆ ಎಂದು ಹೇಳಿದ್ದಾರೆ. ಈ ವೇಳೆ ನಾನು ಹಾಗೆ ಮಾಡಿಲ್ಲ ಎಂದು ಪ್ರತಾಪ್‌ ಹೇಳಿದ್ದಾರೆ. ಸರಿ ನೀನು ಕೊಟ್ಟ ದೂರನ್ನಷ್ಟೇ ಸ್ವೀಕರಿಸುವುದಕ್ಕೆ ಆಗುವುದಿಲ್ಲ ಈಕೆ ಕೊಟ್ಟ ದೂದರನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆಯಿತು ನಾನು ಕಾನೂನು ಹೋರಾಟ ಮಾಡುವುದಕ್ಕೆ ಸಿದ್ಧನಿದ್ದೇನೆ ಎಂದು ಪ್ರತಾಪ್‌ ಹೇಳಿದ್ದಾರೆ.

ಈ ವೇಳೆ ಪೊಲೀಸರು ದೂರು ಸ್ವೀಕರಿಸುವ ಬದಲಿಗೆ ಚಾಲಕ ಪ್ರತಾಪ್‌ಗೆ ಭಯ ಹುಟ್ಟಿಸಿ ದೂರು ನೀಡಿದರೆ ನಿನ್ನ ಮೇಲೆಯೆ ಬಲವಾಗಿ ಎಫ್‌ಐಆರ್‌ ಮಾಡಬೇಕಾಗುತ್ತದೆ. ಇಲ್ಲ ಸುಮ್ಮನೇ ರಾಜಿ ಮಾಡಿಕೊಂಡು ಹೋಗು ನೀನು ಸರ್ಕಾರಿ ಕೆಲಸದಲ್ಲಿರುವೆ ಕೆಲಸ ಕಳೆದುಕೊಳ್ಳಬೇಡ ಎಂದು ಹೆದರಿಸಿ ಅಂದು ಕೂಡ ಚಾಲಕ ಪ್ರತಾಪ್‌ ಅವರಿಂದ ದೂರು ತೆಗೆದುಕೊಂಡು ಎಫ್‌ಐಆರ್‌ ಮಾಡದೆ ವಾಪಸ್‌ ಕಳುಹಿಸಿದ್ದಾರೆ.

ಈ ಎಲ್ಲದರಿಂದ ನೊಂದ ಪ್ರತಾಪ್‌ ಒಂದು ವಿಡಿಯೋ ಮಾಡಿ ನಡೆದ ಎಲ್ಲವನ್ನು ವಿವರಿಸಿದ್ದಾರೆ. ಅಲ್ಲದೆ ಮೇ 29ರಂದು ಕೂಡ ಪೊಲೀಸ್‌ ಠಾಣೆಗೆ ಹೋಗಿದ್ದಾರೆ. ಆದರೆ ನಿನ್ನೆಯೂ ಕೂಡ ಪ್ರತಾಪ್‌ ಅವರನ್ನೇ ಆರೋಪಿ ಎಂಬಂತೆ ಈ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದುಕೊಂಡು ವಾಪಸ್‌ ಕಳುಹಿಸಿದ್ದಾರೆ.

ಇನ್ನು ಇಂದು ಅಂದರೆ ಮೇ 30ರ ಗುರುವಾರ ಕೂಡ ಪೊಲೀಸ್‌ ಠಾಣೆಗೆ ಹೋಗಿದ್ದು, ಈಗ ಕನಕಪುರ ಡಿಪೋ ವ್ಯವಸ್ಥಾಪಕರು ಪೊಲೀಸ್‌ ಠಾಣೆಯಲ್ಲಿ ಕುಳಿತಿದ್ದಾರೆ. ಆದರೂ ಈವರೆಗೂ ದೂರು ಸ್ವೀಕರಿಸಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೆ ಪೊಲೀಸರು ದರ್ಪ ಮರೆಯುತ್ತಿದ್ದಾರೆ.

ಪೊಲೀಸರೆ ಹೀಗೆ ಮಾಡಿದರೆ ಹಲ್ಲೆಗೊಳಗಾದವರು ಎಲ್ಲಿಗೆ ಹೋಗಬೇಕು. ಈ ರೀತಿ ಎಂಜಲಿಗೆ ಆಸೆಪಡುವ ಇಂಥ ನೀಚರಿಗೆ ಮೇಲಧಿಕಾರಿಗಳು ಬುದ್ಧಿಕಲಿಸಬೇಕು ಅಂದರೆ ಮೊದಲು ಈ ರೀತಿ ನಡೆದುಕೊಂಡು ಕಳೆದ ನಾಲ್ಕು ದಿನದಿಂದಲೂ ಪೊಲೀಸ್‌ ಠಾಣೆಗೆ ಅಲೆಸುತ್ತಿರುವ ಠಾಣಾಧಿಕಾರಿ ಮತ್ತು ಸಂಬಂಧಪಟ್ಟ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ನೌಕರರು ಆಗ್ರಹಿಸಿದ್ದು, ಒಂದು ವೇಳೆ ಈ ಅಧಿಕಾರಿಗಳನ್ನು ಅಮಾನತು ಮಾಡದೆ ಹೋದರೆ ಠಾಣೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ