ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗನಗಳ ಶೇ.99 ಹಾಗೂ ಎಲ್ಲ 799 ಅಧಿಕಾರಿಗಳ ಬೇಡಿಕೆ ಒಂದೆ 7ನೇ ವೇತನ ಆಯೋಗ ಮಾದರಿಯಲ್ಲೇ ವೇತನ ಜಾರಿ ಮಾಡಿ ಎನ್ನುವುದು. ಅಂದರೆ ನಮಗೆ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಈ ಅಗ್ರಿಮೆಂಟ್ ಎಂಬುವುದು ಬೇಡವೇಬೇಡ ಎನ್ನುವುದು.
ಆದರೆ, ಈ ಸಮಸ್ತ ಅಧಿಕಾರಿಗಳು/ನೌಕರರ ಬೇಡಿಕೆಯ ಬಗ್ಗೆ ಚಕಾರವೆತ್ತದೆ ಇವರ ಅಭಿಪ್ರಾಯಕ್ಕೆ ಮನ್ನಣೆಕೊಡದೆ ಏಕ ಪಕ್ಷೀಯವಾಗಿ ನಮಗೆ ಅಗ್ರಿಮೆಂಟೇ ಆಗಬೇಕು ಎಂಬ ಬೇಡಿಕೆಯನ್ನು ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿಗಳ ಮುಂದೆ ಮಂಡಿಸುತ್ತಿದ್ದಾರಲ್ಲ ನಿಜವಾಗಲು ಇವರು ನೌಕರರ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದೀರಾ ಹೇಳಿ.
ಇನ್ನು ಸಾರಿಗೆ ನಿಗಮದಲ್ಲಿ ಬಚ್ಚ ಅದಕ್ಕೆ ನೇರವಾಗಿ ಅಧಿಕಾರಿಗಳು ಮತ್ತು ಸಚಿವರ ಬಳಿ ಒಂದು ಅಭಿಪ್ರಾಯವನ್ನು ಮಂಡಿಸುವಷ್ಟು ಯೋಗ್ಯತೆ ಕೂಡ ಇಲ್ಲ. ಅದು ವಿಜಯಪಥ ಮೀಡಿಯಾ ಬಗ್ಗೆ ಇಲ್ಲ ಸಲ್ಲದನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟಿಯಾಗಿ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಡುತ್ತದೆ.
ಅದಕ್ಕೆ ನೌಕರರು ಅದೇ ಸೋಶಿಯಲ್ ಮೀಡಿಯಾದಲ್ಲೇ ಚೆಳಿ ಬಿಡಿಸಿದ್ದಾರೆ ಬಿಡಿ. ಆದರೂ ಮಾನ ಮರ್ಯಾದೆ ನಾಚಿಕೆ ಬಿಟ್ಟು ನೌಕರರು ನಮ್ಮ ಪರ ಇದ್ದಾರೆ ಎಂದು ಹೇಳಿಕೊಂಡು ಘಟಕ ಘಟಕಗಳನ್ನು ಸುತ್ತುತ್ತಿರುತ್ತದೆ ಅದಕ್ಕೆ ಸ್ವಂತ ಬುದ್ಧಿ ಎನ್ನುವುದೆ ಇಲ್ಲ.
ಇನ್ನು ಸಾರಿಗೆ ನೌಕರರನ್ನು ಕಾರ್ಮಿಕರು ಎಂದು ಕರೆಯುವ ಈ ತಿ*ಬೋಕಿಗೆ ಕಾರ್ಮಿಕರು ಮತ್ತು ನೌಕರರ ಬಗೆಗಿನ ವ್ಯತ್ಯಾಸವೇ ಗೊತ್ತಿಲ್ಲ. ಇದು ಒಂದು ಸಂಘಟನೆಯ ಪದಾಧಿಕಾರಿ. ಇದರ ಹಿಂದೆ ನೂರಾರು ಮಂದಿ ಇದ್ದಾರೆ ಎಂದು ಕೊಚ್ಚಿಕೊಳ್ಳುತ್ತದೆ. ವಾಸ್ತವವಾಗಿ ಇದು ಡಿಪೋಗಳಿಗೆ ಹೋದರೆ ಮಾತನಾಡಿಸುವವರೆ ಇಲ್ಲ. ಆದರೂ ಉತ್ತರನ ಪೌರುಷ ತೋರಿಸುತ್ತಿರುತ್ತದೆ.
ನೌಕರರು ಮತ್ತು ಕಾರ್ಮಿಕರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ ಇದಕ್ಕೆ ಒಂದು ಸಂಘಟನೆಯಲ್ಲಿ ಗುರುತರ ಜವಾಬ್ದಾರಿ ಕೊಟ್ಟಿದ್ದಾರೆ ಎಂದರೆ ಏನೇಳಬೇಕು? ಮೊದಲಿ ಈ ಎರಡರ ನಡುವಿನ ವ್ಯತ್ಯಾಸ ತಿಳಿದಿಕೋ ಅದನ್ನು ಬಿಟ್ಟು ಬೀದಿ ನಾಯಿಯ ತರ ಸಿಕ್ಕ ಸಿಕ್ಕಹಾಗೆ ಬೊಗಳುವುದಲ್ಲ. ಇನ್ನಾದರೂ ಸಂಘಟನೆ ಎಂದರೆ ನೌಕರರ ಬೇಡಿಕೆ ಸಮಸ್ಯೆಗೆ ಸ್ಪಂದಿಸುವುದು, ತಮ್ಮ ಪ್ರತಿಷ್ಠೆಗಾಗಿ ಅಲ್ಲ ಎಂಬುದನ್ನು ತಿಳಿದುಕೊಂಡು ನಡೆದರೆ ಉತ್ತಮ ಇಲ್ಲದಿದ್ದರೆ ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎಂಬುವುದು ….
ಇನ್ನು ಸಾರಿಗೆ ಅಧಿಕಾರಿಗಳು/ನೌಕರರ ಬೇಡಿಕೆ ಏನು ಎಂದು ತಿಳಿದುಕೊಂಡು ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಆಡಳಿತ ಮಂಡಳಿಯಲ್ಲಿ ಚರ್ಚೆ ಮಾಡಿದರೆ ಒಳ್ಳೆಯದು. ಇಲ್ಲ ನೌಕರರ ಮುಖ್ಯ ಬೇಡಿಕೆಯನ್ನೇ ಬದಿಗೊತ್ತಿ ನಿಮ್ಮ ಸ್ವ ಪ್ರತಿಷ್ಠೆಗಾಗಿ ನಿಮಗೆ ಅನಿಸಿದಂತೆ ನೀವು ಬೇಡಿಕೆ ಇಟ್ಟರೆ ಅದರಿಂದ ನೀವು ನಿಮ್ಮ ಗೌರವ ಕಳೆದುಕೊಳ್ಳುತ್ತೀರಿ ಎಂಬುದನ್ನು ನೌಕರರೇ ಬಹಿರಂಗವಾಗಿ ಹೇಳುತ್ತಿದ್ದಾರೆ.
ಆದರೂ ನೀವು ನೌಕರರ/ಅಧಿಕಾರಿಗಳ ಬೇಡಿಕೆಗೆ ಸ್ಪಂದಿಸದೆ ಈರೀತಿ ಹುಚ್ಚಾಟವನ್ನೇಕೆ ಮುಂದುವರಿಸುತ್ತಿದ್ದೀರಿ ಎಂಬುವುದು ತಿಳಿಯುತ್ತಿಲ್ಲ. ನೌಕರರ ಸಮಾಧಿಕಟ್ಟಿ ನೀವು ಸಾಧಿಸುವುದಾದರೂ ಏನು? ಇಲ್ಲ ಈ ಸಂಘಟನೆಯವರು ಸರಿ ಸಮಾನ ವೇತನ ಕೇಳುತ್ತಿದ್ದಾರೆ. ಹೀಗಾಗಿ ನಾವು ಅಗ್ರಿಮೆಂಟ್ ಕೇಳುತ್ತಿದ್ದೇವೆ ಎಂಬ ಜಿದ್ದಿಗೆ ಬಿದ್ದು ಈ ರೀತಿ ನೌಕರರು ವಿರೋಧಿಸುತ್ತಿರುವುದನ್ನೇ ಕೇಳುತ್ತಿದ್ದೀರಾ?
ಅಂದರೆ ನಾವು ಸರಿ ಸಮಾನ ವೇತನ ಕೇಳುವುದಕ್ಕೆ ನಮ್ಮ ಈಗೊ ಅಡ್ಡಬರುತ್ತಿದೆ ಎಂದು ಅಧಿಕಾರಿಗಳು/ನೌಕರರ ಬೇಡಿಕೆಯನ್ನು ಬಿಟ್ಟು ಅವರು ಬೇಡ ಎನ್ನುತ್ತಿರುವ ಅಗ್ರಿಮೆಂಟ್ ಅನ್ನೇ ಕೇಳುತ್ತಿದ್ದೀರಾ? ಈ ಮೂಲಕ ಸಾರಿಗೆ ನೌಕರರ ವಿರೋಧ ಕಟ್ಟಿಕೊಳ್ಳಲು ಹೊರಟಿದ್ದೀರಾ? ಇದಕ್ಕೆ ಸ್ಪಷ್ಟ ಉತ್ತರ ಕೊಡಿ ಎಂದು ಕೆಎಸ್ಆರ್ಟಿಸಿ ಡಿಟಿಒ ಒಬ್ಬರು ಕೇಳುತ್ತಿದ್ದಾರೆ.
ಇನ್ನು ವಿಜಯಪಥ ನೌಕರರು ಬೇಡಿಕೆ ಇಟ್ಟಿಲ್ಲದ ಮತ್ತು ಸಾರಿಗೆ ಸಚಿವರ ಬಳಿ ಚರ್ಚೆ ಆಗದ ವಿಷಯವನ್ನೆ ವರದಿ ಮಾಡುತ್ತಿದೆ ಎಂದು ಯಾವನೋ ಒಬ್ಬ ಕಿಡಿಗೇಡಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾನೆ. ಈ ಕಿಡಿಗೇಡಿಯನ್ನು ನೌಕರರು ಗುರುತಿಸುವಂತೆ ಮಾಡಿರುವುದೇ ವಿಜಯಪಥ. ಇದನ್ನೇ ಮರೆತು ಈಗ ವಿಜಯಪಥ ಅಂದರೆ ಗೊತ್ತೆಯಿಲ್ಲ ಅಂತ ಹೇಳುತ್ತಿದ್ದಾನೆ. ಅಂದರೆ ತಿಂದ ಮನೆಗೆ ಎರಡು ಬಗೆದಂತೆ ಎಂಬ ಗಾದೆ ಈ ಮೂರ್ಖನಿಗೆ ಹೇಳಿ ಮಾಡಿಸಿದಂತಿದೆ.
ಇಲ್ಲಿ ಇನ್ನೊಂದು ಹೇಳಿದ್ದಾನೆ ಜಂಟಿಯವರು ಒಂದೂವರೆ ಗಂಟೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಆದರೆ ಒಕ್ಕೂಟದವರು ಕೇವಲ 45 ನಿಮಿಷದಲ್ಲೇ ಸಭೆ ಮುಗಿಸಿದರೂ ಎಂದು. ಈ ಮೂರ್ಖನಿಗೆ ಒಂದನ್ನು ಹೇಳ ಬಯಸುತ್ತೇವೆ. ಸಭೆ ಎಷ್ಟು ಗಂಟೆ ನಡೆಯಿತು ಎನ್ನುವುದು ಮುಖ್ಯವಲ್ಲ ಏನು ನಿರ್ಧಾರ ತೆಗೆದುಕೊಂಡರು ಎಂಬುವುದು ಮುಖ್ಯ. ಅಂದರೆ ನೈಜವಾಗಿರುವುದನ್ನು ಚರ್ಚಿಸುವುದಕ್ಕೆ ಸಮಯ ಹೆಚ್ಚಿಗೆ ಬೇಕಿಲ್ಲ ಸುತ್ತಿ ಬಳಸಿ ಕೆಲಸಕ್ಕೆ ಬಾರದಿರುವುದು ಚರ್ಚಿಸಿದರೆ ಅದು ದಿನ ಪೂರ್ತಿ ನಡೆದರೂ ಪ್ರಯೋಜನವಿಲ್ಲ. ಇದರಿಂದ ಬರಿ ಸಮಯ ವೇಸ್ಟ್ ಅಷ್ಟೆ ಇದನ್ನು ತಿಳಿಯದ ಮೂರ್ಖ ಇನ್ನೊಬ್ಬರ ಬಗ್ಗೆ ಮಾತನಾಡುತ್ತಾನೆ ಎಂದರೆ ಇವನ ಯೋಗ್ಯತೆ ಏನು ಎಂಬುವುದು ನೌಕರರಿಗೆ ಅರ್ಥವಾಗದೆ ಇರದು.