ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗದ ಸಾಗರ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಸಾರಿಗೆ ಸಿಬ್ಬಂದಿ 50 ವರ್ಷದ ರವಿ ನಾಗೇಶ್ ನಾಯ್ಕ್ ಅವರ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಿದೆ.
ಸಾಗರ ಬಸ್ಟ್ಯಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ನಾಗೇಶ್ ನಾಯ್ಕ್ ಅವರು ಆರೋಗ್ಯದಲ್ಲಿ ಏರುಪೇರಾಗುತ್ತಿದ್ದರೂ ಕೆಲಸಕ್ಕೆ ಪ್ರಾಮಾಣಿಕವಾಗಿ ಹಾಜರಾಗುತ್ತಿದ್ದರು. ಈ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಮೇಲೆ ದೈಹಿಕ ಕ್ಷಮತೆ ಕಳೆದುಕೊಂಡರೂ ಮಾನಸಿಕವಾಗಿ ಕುಗ್ಗದೆ ಎಲ್ಲರ ಜತೆಗೂ ನಸುನಗುತ್ತಾ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಿದ್ದರು.
ಇಂಥ ಪ್ರಾಮಾಣಿಕ ನೌಕರ ರವಿ ನಾಗೇಶ್ ನಾಯ್ಕ್ ಅವರಿಗೆ ಕೆಲಸದ ವೇಳೆಯೇ ಬ್ರೈನ್‌ಸ್ಟ್ರೋಕ್ ಆಗಿ ಕುಸಿದುಬಿದ್ದಿದ್ದಾರೆ. ಅದನ್ನು ಗಮನಿಸಿದ ಸಹೋದ್ಯೋಗಿಗಳು ತಕ್ಷಣ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲರಿಗೂ ಗೊತ್ತಿರುವಂತೆ ಮಣಿಪಾಲ ಆಸ್ಪತ್ರೆಯಲ್ಲಿ ಉತ್ಸಮ ಚಿಕಿತ್ಸೆಯೇನೋ ದೊರೆಯುತ್ತದೆ. ಇದರ ಹೊರತಾಗ್ಯೂ ಹಣ ಸಾಕಷ್ಟು ಖರ್ಚು ಮಾಡಲೇಬೇಕಾಗುತ್ತದೆ. ಆದರೆ ಸಾಮಾನ್ಯ ನೌಕರನಾದ ರವಿ ನಾಗೇಶ್ ನಾಯ್ಕ್ ಮತ್ತು ಕುಟುಂಬದವರಿಗೆ ಆ ಆಸ್ಪತ್ರೆಗೆ ಹಣ ಭರಿಸುವಷ್ಟು ಶಕ್ತಿಯಿಲ್ಲ. ಹೀಗಾಗಿ ಅವರಿಗೆ ಹೆಚ್ಚಿನ ಆರ್ಥಿಕ ನೆರವಿನ ಅಗತ್ಯವಿದೆ.
ಆಶ್ಚರ್ಯ ಎಂದರೆ ನೌಕರರು ಮತ್ತು ಸಾರ್ವಜನಿಕರಲ್ಲಿ ಮನುಷ್ಯತ್ವ ಇನ್ನೂ ಇದೇ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಅವರ ಖಾತೆಗೆ ಈಗಾಗಲೇ ಹಣ ಸಂದಾಯವಾಗಿದೆ. ಗೂಗಲ್ ಪೇ-ಫೋನ್ ಪೇ ಮೂಲಕ ಹಣ ನೀಡುತ್ತಿದ್ದಾರೆ. ಆದರೆ ಆ ಹಣ ಸಾಲುತ್ತಿಲ್ಲ. ಆದ್ದರಿಂದ ಸಾರಿಗೆ ನೌಕರರು ಮತ್ತು ಸಾರ್ವಜನಿಕರು ತಮ್ಮ ಕೈಲಾದ ಸಹಾಯವನ್ನು ಮಾಡಬೇಕಿದೆ.
ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದೆ. ಹೀಗಾಗಿ ಅವರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಮೂಲಕ ಅವರ ಆರೋಗ್ಯ ಚೇತರಿಕೆಗೆ ಸಹಾಯ ಬೇಕಿದೆ. IFSC : SBIN0007906 A/c No: 41394848648 SBI Ashoka road Sagara ಬ್ರಾಂಚ್ ಈ ಖಾತೆಗೆ ನೆರವು ನೀಡುವವರು ಹಣ ಸಂದಾಯ ಮಾಡಬಹುದು.