Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಎಚ್ಚೆತ್ತ KSRTC ಅಧಿಕಾರಿಗಳು: ಬಸ್‌ ಮಾಳಿಗೆ ಸೋರಿದರೆ ಡಿಸಿಗಳ ವಿರುದ್ಧ ಕ್ರಮ- ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ಘಟಕದ ಬಸ್‌ ಮೇಲ್ಛಾವಣಿ ಮಳೆ ಬಂದು ಸೋರುತ್ತಿದ್ದರೂ ಬಸ್ಸನ್ನು ಚಾಲಕ ಕೊಡೆ ಹಿಡಿದುಕೊಂಡು ಓಡಿಸಿದ್ದರ ಬಗ್ಗೆ ವಿಜಯಪಥ ವರದಿ ಮಾಡಿತ್ತು, ಈ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶವೊಂದನ್ನು ಹೊರಡಿಸಿದ್ದಾರೆ.

ಈಗ ಮಳೆಗಾಲ ಆರಂಭಗೊಂಡಿದ್ದು, ಸಂಸ್ಥೆಯಿಂದ ಕಾರ್ಯಚರಣೆಗೆ ನಿಯೋಜಿಸುವ ವಾಹನಗಳಲ್ಲಿ ಮಳೆ ನೀರು ಸೋರುವಿಕೆ ಇಲ್ಲದಂತೆ, ಸುಸ್ಥಿತಿಯ ವಾಹನಗಳನ್ನು ಕಾರ್ಯಚರಣೆಗೆ ನಿಯೋಜಿಸಬೇಕು ಎಂದು ನಿಗಮ ಕೇಂದ್ರ ಕಚೇರಿಯ ಯಾಂತ್ರಿಕ ಇಲಾಖೆಯ ಮುಖ್ಯ ಅಭಿಯಂತರರು ಇಂದು (ಮೇ 24) ಆದೇಶ ಮಾಡಿದ್ದಾರೆ.

ಈ ವರ್ಷ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಈಗಾಗಲೇ 11.5.2024 ರಂದು ನಿರ್ದೇಶಕರ (ಸಿ ಮತ್ತು ಜಾ) ಅಧ್ಯಕ್ಷತೆಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಭೆಯಲ್ಲಿ ವಾಹನಗಳಲ್ಲಿ ಮಳೆ ನೀರು ಸೋರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ನಿಮಗೆ ತಿಳಿದ ವಿಷಯ.

ಆದಾಗ್ಯೂ ಹಲವಾರು ವಾಹನಗಳಲ್ಲಿ ಮಳೆ ನೀರು ಸೋರುವಿಕೆಯಾಗುತ್ತಿರುವ ಬಗ್ಗೆ ದೂರುಗಳು ಸ್ವೀಕರಿಸಲಾಗುತ್ತಿರುವುದು ವಿಷಾದನೀಯ ಸಂಗತಿ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತಂದು ಯಾವುದೇ ಪ್ರಯಾಣಿಕರ ವಾಹನಗಳಲ್ಲಿ ಮಳೆ ನೀರು ಸೋರುವಿಕೆ ಆಗದಂತೆ ಆಗತ್ಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತೊಮ್ಮೆ ಸೂಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೈಗೊಳ್ಳಬೇಕಾದ ಕ್ರಮಗಳೇನು? : 1) ಎಲ್ಲ ವಾಹನಗಳನ್ನು ಪರಿಶೀಲಿಸಿ, ವಾಹನಗಳ ಯಾವುದೇ ಭಾಗದಿಂದ ಅಂದರೆ ರೂಫ್, ವಿಂಡೋ ಗ್ಲಾಸ್, ತುರ್ತು ನಿರ್ಗಮನ ಬಾಗಿಲು, ಟಾಪ್ ವೆಂಟಿಲೇಟರ್ ಮತ್ತು ಪ್ರಯಾಣಿಕರ ಬಾಗಿಲುಗಳಿಂದ ಮಳೆ ನೀರು ಸೋರುವಿಕೆಯಾಗದಂತೆ ತಡೆಗಟ್ಟಬೇಕು.

2) ವಾಹನಗಳಲ್ಲಿ ರೂಫ್‌ ಲೀಕೇಜ್‌ ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ವಾಹನವನ್ನು ಕಾರ್ಯಚರಣೆಗೆ ನೀಡದೆ, Cold Applied Self- Adhesive polymer modified Bituminous Composite membrane with Aluminium Foil at the top felt ಅನ್ನು ಅಂಟಿಸಿ ದೃಢೀಕರಿಸಿಕೊಳ್ಳಬೇಕು.

3) ವಾಹನಗಳಲ್ಲಿ ಕಿಟಕಿ ಗಾಜುಗಳು ಮತ್ತು ಲೂವರ್‌ ಗಾಜುಗಳು ಕಡ್ಡಾಯವಾಗಿ ಇರಬೇಕು. ಕಿಟಕಿ ಗಾಜುಗಳ ರೈಲಿಂಗ್ಸ್‌, ಫೆಲ್ಟ್‌ ಮತ್ತು ವಿಂಡೋ ಹ್ಯಾಚಸ್ ಸುಸ್ಥಿತಿಯಲ್ಲಿರಬೇಕು.

4) ಟಾಪ್ ವೆಂಟಿಲೇಟರ್ ಸುಸ್ಥಿತಿಯಲ್ಲಿರಬೇಕು. ರಿಟರ್ನ್ ಗ್ಯಾಸ್ ಸ್ಟ್ರಿಂಗ್ ಉತ್ತಮವಾಗಿದ್ದು, ಪೂರ್ಣವಾಗಿ ವೆಂಟಿಲೇಟರ್ ತೆರೆಯಲು ಹಾಗೂ ಮುಚ್ಚಲು ಸಾಧ್ಯವಾಗುವಂತಿರಬೇಕು.

5) ವಾಹನಗಳ ವೈಪರ್, ಹೆಡ್ ಲೈಟ್, ಇಂಡಿಕೇಟರ್ ಲೈಟ್, ಪಾರ್ಕಿಂಗ್ ಲೈಟ್ ಸದಾಕಾಲ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಿರಬೇಕು.

ವಾಹನದಲ್ಲಿ ಮಳೆ ನೀರು ಸೋರುವಿಕೆಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಸರಿಪಡಿಸುವುದರ ಜತೆಗೆ ಚಾಲಕರು ತಮ್ಮ ಲಾಗ್ ಶೀಟ್ ದೋಷಪಟ್ಟಿಯಲ್ಲಿ ಬರೆಯುವ ದೋಷಗಳನ್ನು/ ಮಾರ್ಗದಿಂದ ಬರುವ ವಾಹನಗಳ ನಿರ್ವಾಹಕರನ್ನು ಮಾತನಾಡಿಸಿ, ಮಳೆ ನೀರು ಸೋರುವಿಕೆಯ ಬಗ್ಗೆ ನೈಜ ಮಾಹಿತಿ ಪಡೆದು ಅಗತ್ಯ ದುರಸ್ಥಿ ಮಾಡಬೇಕು.

ಒಟ್ಟಾರೆ ಮಳೆ ನೀರು ಸೋರುವಿಕೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಆಗುವ ಕಸಿವಿಸಿ/ ತೊಂದರೆಯನ್ನು ಅಲ್ಲದೇ ಅಪಘಾತ/ ಅನಾಹುತಗಳನ್ನು ನಿಯಂತ್ರಿಸಲು ಮಳೆ ನೀರು ಸೋರುವಿಕೆ ಇಲ್ಲದ ಸುಸ್ಥಿತಿಯ ವಾಹನಗಳನ್ನು ಸಾರ್ವಜನಿಕ ಪ್ರಯಾಣಿಕರ ಸುಗಮ ಸಾರಿಗೆ ವ್ಯವಸ್ಥೆಗೆ ನಿಯೋಜಿಸುವಂತೆ ಈ ಮೂಲಕ ತಿಳಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಮಳೆ ನೀರು ಸೋರುವಿಕೆಯ ದೋಷ ಕಂಡುಬಂದು ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲವಾಗಿ, ದೂರುಗಳು ಬಂದಲ್ಲಿ ಸಂಬಂಧಪಟ್ಟವರನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಯಾಂತ್ರಿಕ ಅಭಿಯಂತರರು ಹೊರಡಿಸಿರುವ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್