KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ!
- ಟಿಸಿಗಳಿಂದ ಪ್ರತಿ ತಿಂಗಳು ₹1000 ಲಂಚ ಸಂಗ್ರಹಿಸಿ ತಮಗೆ ಕೊಡುತ್ತಿದ್ದವನ್ನೇ ಅಮಾನತು ಮಾಡಿದರು
- ತಮ್ಮ ಲಂಚಬಾಕತನ ಎಲ್ಲಿ ಬಯಲಾಗುತ್ತದೋ ಎಂದು ಹೆದರಿದ ತುಮಕೂರು ಡಿಸಿ, ಡಿಟಿಒಗಳು!
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಅಧಿಕಾರಿಗಳು ಹೇಳಿದಂತೆ ಪ್ರತಿ ತಿಂಗಳು ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಎಲ್ಲ ಸಂಚಾರ ನಿಯಂತ್ರಕರಿಂದ ಅಧಿಕಾರಿಗಳು ತಲಾ 1000 ರೂಪಾಯಿ ವಸೂಲಿ ಮಾಡುತ್ತಿದ್ದ ಬಗ್ಗೆ ವಿಜಯಪಥ ಕಳೆದ 2024ರ ಡಿಸೆಂಬರ್ 23ರಂದು ವರದಿ ಮಾಡಿತ್ತು.
ಈ ವರದಿಯಿಂದ ಎಚ್ಚೆತ್ತ ವಿಭಾಗದ ಅಧಿಕಾರಿಗಳು ನಾವೆಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೋ ಎಂಬ ಭಯದಲ್ಲಿ ತಮಗೆ ಹಣ ವಸೂಲಿ ಮಾಡಿಕೊಡುತ್ತಿದ್ದ ಅಮಾಯಕ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ಪುಟ್ಟರಾಜು ಎಂಬುವರನ್ನು ಅಮಾನತು ಮಾಡಿ ಜಾನ ನಡೆ ಅನುಸರಿಸಿದ್ದಾರೆ ಈ ವಿಭಾಗದ ಡಿಸಿ ಮತ್ತು ಡಿಟಿಒ.
ಡಿಸೆಂಬರ್ 23ರಂದು ತುಮಕೂರು ವಿಭಾಗದ ತುಮಕೂರಿನ ವಿಭಾಗದಲ್ಲಿರುವ ಉನ್ನತ ಅಧಿಕಾರಿಗಳಿಗೆ ಪ್ರತಿ ತಿಂಗಳು ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರು ಒಂದು ಸಾವಿರ ರೂ. ಲಂಚವನ್ನು ನೀಡಬೇಕೆಂದು ಒತ್ತಡ ಹಾಕುತ್ತಿದ್ದರು. ಈ ಕಾರಣದಿಂದ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ಪುಟ್ಟರಾಜು ಅವರು ಎಲ್ಲ ಸಂಚಾರ ನಿಯಂತ್ರಕರಿಂದ ಹಣ ವಸೂಲಿ ಮಾಡಿ ಕೊಡುತ್ತಿದ್ದರು. ಈ ಬಗ್ಗೆ ದಾಖಲೆಯ ಸಮೇತ ಕೇಂದ್ರ ಕಚೇರಿಗೆ ಗೂಳೂರು ನಾಗರಾಜ್ ಅವರು ದೂರು ಸಲ್ಲಿಸಿದ್ದಾರೆ.
ಇತ್ತ ವಿಜಯಪಥ ಮೀಡಿಯಾದಲ್ಲಿ ವರದಿ ಬಂದಿದ್ದು ಹಾಗೂ ನಾಗರಾಜು ಅವರು ದೂರು ನೀಡಿದ ಪರಿಣಾಮ ಅಧಿಕಾರಿಗಳಿಗೆ ನಿಯಂತ್ರಕರಿಂದ ಲಂಚ ವಸೂಲಿ ಮಾಡಿಕೊಡುತ್ತಿದ್ದ ಪುಟ್ಟರಾಜುವನ್ನೇ ಈಗ ಅದೇ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಈ ಮೂಲಕ ಪುಟ್ಟರಾಜುವನ್ನು ಬಲಿಪಶು ಮಾಡಲು ಹೊರಟಿದ್ದಾರೆ.
ಇನ್ನೊಂದು ಭಾರಿ ಕುತೂಹಲಕಾರಿ ವಿಷಯವೆಂದರೆ ಈ ಪ್ರಕರಣದ ಬಗ್ಗೆ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ದೂರುದಾರರಾದ ಗೂಳೂರು ಸಿ.ನಾಗರಾಜ ಅವರಿಗೆ ತುಮಕೂರು ಬಸ್ ನಿಲ್ದಾಣದ ಸಹಾಯಕ ಸಂಚಾರಿ ನಿರೀಕ್ಷಕ ನಾಗರಾಜ್ ಅವರ ಮೂಲಕ ಇದೆ ವಿಭಾಗೀಯ ನಿಯಂತ್ರಣಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗಿಯ ಸಂಚಲನಾಧಿಕಾರಿ ಬಸವರಾಜ್ ಅವರು 20 ಸಾವಿರ ರೂಪಾಯಿ ಲಂಚಕೊಟ್ಟು ಬಾಯಿ ಮುಚ್ಚಿಸಲು ಯತ್ನಿಸಿದರು ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿರಿ: KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..!
ಕೆಎಸ್‌ಅರ್‌ಟಿಸಿ ವಿಭಾಗೀಯ ನಿಯಂತ್ರಣಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗಿಯ ಸಂಚಲನಾಧಿಕಾರಿ ಬಸವರಾಜ್ ಅವರು 20000 ಹಣ ನೀಡಿ ನನ್ನನ್ನು ಕೊಂಡುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಅದಕ್ಕೆ ಬಗ್ಗಲಿಲ್ಲ ನ್ಯಾಯ ಸಿಗಬೇಕು ಅಷ್ಟೇ ಎಂದು ಹೇಳಿದ್ದಾಗಿ ವಿಡಯೋ ಸಹಿತ ಗೂಳೂರು ನಾಗರಾಜ್ ಅ ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಈ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ವಿಭಾಗ ನಿಯಂತ್ರಣ ಅಧಿಕಾರಿ ಹಾಗೂ ವಿಭಾಗೀಯ ಸಂಚಲನಾಧಿಕಾರಿಗಳ ಲಂಚಗುಳಿತನ ಹಾಗೂ ಭ್ರಷ್ಟಾಚಾರ ಮಿತಿ ಮೀರಿದ್ದುಈ ಬಗ್ಗೆ ಈಗಾಗಲೇ ಕೇಂದ್ರ ಕಚೇರಿ ಅಧಿಕಾರಿಗಳಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ KSRTC ತುಮಕೂರು ವಿಭಾಗಕ್ಕೆ ಬರುವ ಅಧಿಕಾರಿಗಳು ಲಂಚ, ಭ್ರಷ್ಟಾಚಾರಕ್ಕೆ ಭಾರಿ ಹೆಸರುವಾಸಿ ಆಗುತ್ತಿದ್ದಾರೆ. ಆದರೂ ಇಂಥ ಭ್ರಷ್ಟರ ಹೆಡೆಮುರಿ ಕಟ್ಟುವುದಕ್ಕೆ ಮಾತ್ರ ಸಾರಿಗೆ ಸಚಿವರು ಹಾಗೂ ಎಂಡಿ ಹಿಂದೆಟುಹಾಕುತ್ತಿದ್ದಾರೆ. ಹೀಗೆ ಏಕೆ ಮಾಡುತ್ತಿದ್ದಾರೆ ಇವರು ಎಂಬುವುದು ಈವರೆಗೂ ಗೊತ್ತಾಗುತ್ತಿಲ್ಲ. ಇನ್ನಾದರೂ ಇಂಥ ಭ್ರಷ್ಟ ಅಧಿಕಾರಿಗಳಿಗೆ ಕಾನೂನಿನ ರೀತಿ ತಕ್ಕ ಪಾಠ ಕಲಿಸಬೇಕು ಎಂದು ಗೂಳೂರು ನಾಗರಾಜ ಆಗ್ರಹಿಸಿದ್ದಾರೆ.
Related
You Might Also Like
ನಾನು ಕಾದು ಕುಳಿತಿದ್ದರೂ ಬಸ್ ನಿಲ್ಲಿಸಿಲ್ಲ – ಚಾಲಕ, ಕಂಡಕ್ಟರ್ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತಾಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ಹೋಗಿದೆ. ಹೀಗಾಗಿ ನನಗೆ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. ಆದ್ದರಿಂದ ಒಂದು ತಿಂಗಳ...
ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಡಿಕೆಗೆ ಮಣಿದಿರುವ ಸಹಕಾರ ಇಲಾಖೆಯು ಏಳನೇ ವೇತನ ಆಯೋಗದ ವರದಿ ಪ್ರಕಾರ...
KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್
ನ್ಯೂಡೆಲ್ಲಿ: ಬಸ್ ಕಾರ್ಯಾಚರಣೆಗಳ ಮೇಲಿನ KSRTCಯ ಏಕಸ್ವಾಮ್ಯವನ್ನು ಕಿತ್ತು ಹಾಕಿ, ಕರ್ನಾಟಕ ಸರ್ಕಾರ 2003ರಲ್ಲಿ ಜಾರಿಗೆ ತಂದಿದ್ದ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಸಂಬಂಧ...
ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ
ಬೆಂಗಳೂರು: 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ “ಸ್ಮಶಾನಕ್ಕೆಂದು ಮೀಸಲಿಟ್ಟಿರುವ ಸರ್ಕಾರಿ ಸ್ವತ್ತನ್ನು ಪ್ರಭಾವೀ ವ್ಯಕ್ತಿಯೊಬ್ಬರ ಖಾಸಗಿ ಬಡಾವಣೆಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಸರ್ಕಾರಿ ಅಧಿಕಾರಿ...
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್
ಮೈಸೂರು: ಪ್ರತಿಭಾನ್ವಿತ ಆಟಗಾರರಿಗೆ ಗುರುತಿಸಿ ಕೇಂದ್ರ ಸರ್ಕಾರ ಅರ್ಜುನ್ ಪ್ರಶಸ್ತಿಯನ್ನು ನೀಡುತ್ತದೆ ಅದೇ ರೀತಿ ರಾಜ್ಯ ಸರ್ಕಾರ ಕೂಡ ಏಕಲವ್ಯ ಪ್ರಶಸ್ತಿಯನ್ನು ನಿಲ್ಲಿಸಿರುವುದನ್ನು ಮುಂದುವರಿಸಲಿ ಎಂದು ಅರ್ಜುನ್...
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್ ಬರೆ ಗ್ಯಾರಂಟಿ
ಬೆಂಗಳೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದ ದಾರಿಯನ್ನು ಬಿಡದಿಯಿಂದ ಮುಂದೆ ಬುಧವಾರದಿಂದ ದಿಢೀರ್ ಮುಚ್ಚಿದ್ದು ಇದರಿಂದ ಸರ್ವಿಸ್ ರಸ್ತೆಗೆ ಹೋಗಬಹುದೆಂದು ಬರುವ ವಾಹನಗಳ ಸವಾರರು...
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು
ಬಿಡದಿ: ಬೆಂಗಳೂರಿನಿಂದ ರಾಮನಗರಕ್ಕೆ ಹೊತ್ತಿದ್ದ ಸ್ಕಾರ್ಪಿಯೋ ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ಬಿಡದಿ ಸಂಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು...
KSRTC ಕನಕಪುರ ಬಸ್ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್ ಆರೋಪ
ಕನಕಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನಕಪುರ ಬಸ್ ನಿಲ್ದಾಣದಲ್ಲಿ ಪ್ರಸ್ತುತ ಸಂಚಾರ ನಿಯಂತ್ರಕರಾಗಿರುವ ಗೋಪಾಲಯ್ಯ ನಿರ್ವಾಹಕರಿಂದ 10-10 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದು ವಿಡಿಯೋದಲ್ಲಿ...
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ
ಬೆಂ.ಗ್ರಾ: ನೊಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕರ್ನಾಟಕ ಲೇವಾದೇವಿ ಅಧಿನಿಯಮದಡಿ ಸಾರ್ವಜನಿಕರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇಕಡಾ 14 ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ...