NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ₹3ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರು

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಮರೆತು ಹೋಗಿದ್ದ ಮಹಿಳೆಗೆ ಹಿಂದಿರುಗಿಸುವ ಮೂಲಕ ಸಂಸ್ಥೆಯ ಬಸ್ ಚಾಲಕ ಹಾಗೂ ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.

ಕರ್ನೂಲ್ ಜಿಲ್ಲೆಯ ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮೂರು ಲಕ್ಷ ರೂ. ಬೆಲೆಬಾಳುವ ಒಡವೆಗಳಿದ್ದ ಬ್ಯಾಗನ್ನು ಮರೆತು ಹೋಗಿದ್ದರು. ಅದನ್ನು ಗಮನಿಸಿದ ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ಅವರು ಒಡವೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಹೊಸಪೇಟೆ ಬಳ್ಳಾರಿ ಹಾಗೂ ಶಿರಾ ಡಿಪೋಗಳ ಸಹಕಾರದೊಂದಿಗೆ ಮಹಿಳೆ ಪತ್ತೆ ಮಾಡಿ ಶಿರಾ ಘಟಕದಲ್ಲಿದ್ದ ಒಡವೆ ವಾಪಸ್ ನೀಡಲಾಗಿದೆ. ಚಾಲಕ ಹಾಗೂ ನಿರ್ವಾಹಕರ ಮಾನವೀಯತೆಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಇನ್ನು ಕಳೆದುಕೊಂಡಿದ್ದ ಒಡೆವೆಗಳನ್ನು ಪಡೆದುಕೊಂಡ ಮಹಿಳೆ ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ಅವರಿಗೆ ಕೈ ಮುಗಿದು ನಿಮ್ಮಂಥವರು ಸಂಸ್ಥೆಯಲ್ಲಿ ಇರುವುದರಿಂದಲೇ ನಮ್ಮಂಥವರಿಗೆ ಒಳ್ಳೆಯದಾಗುತ್ತಿದೆ ಎಂದು ಭಾವುಕರಾಗಿ ಅಭಿನಂದನೆ ತಿಳಿಸಿದರು.

ಇನ್ನು ನಾನು ಆರ್ಥಿಕವಾಗಿ ಅಷ್ಟು ಶಕ್ತಳಲ್ಲ ಇಂಥ ವೇಳೆ 3 ಲಕ್ಷ ರೂ.ಮೌಲ್ಯದ ಒಡವೆ ಕಳೆದುಹೋದರೆ ಅಷ್ಟು ಹಣ ದುಡಿಯುವುದಕ್ಕೆ ನಮಗೆ ವರ್ಷಗಳೇ ಬೇಕಾಗುತ್ತಿದೆ. ನಾನು ಬ್ಯಾಗ್‌ ಕಳೆದು ಹೋದಾಗ ತುಂಬ ಆಘಾತವಾಗಿತ್ತು. ಮತ್ತೆ ಸಿಗುತ್ತವೋ ಇಲ್ಲವೋ ಎಂಬ ಭಯವಿತ್ತು. ಆದರೆ ಸಂಸ್ಥೆಯ ನಮ್ಮ ಅಣ್ಣಂದಿರುವ ವಾಪಸ್‌ ಕೊಟ್ಟಿರುವುದರಿಂದ ನನಗೆ ತುಂಬ ಸಂತೋಷವಾಗುತ್ತಿದೆ ಎಂದು ಹೇಳಿದರು.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ