Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು – ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲಕ ಮತ್ತು ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಕಾರ್ಮಿಕರಲ್ಲ ಅವರು ಸರ್ಕಾರವೇ ನೇಮಿಸಿಕೊಂಡಿರುವ ನೌಕರರು. ಅವರನ್ನು ಪದೇಪದೆ ಕಾರ್ಮಿಕರು ಎಂದು ದಿನಗೂಲಿಗಾರರಂತೆ ಬಿಂಬಿಸುವುದು ಕೆಲ ಸಂಘಟನೆಗಳ ನಾಯಕರಿಗೆ ಶೋಭೆ ತರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ AITUC ಅಧ್ಯಕ್ಷ ಅನಂತ ಸುಬ್ಬರಾವ್‌ ಅವರು ಕೂಡ ಈ ಬಗ್ಗೆ ಸಾರಿಗೆ ನೌಕರರನ್ನು ಎಲ್ಲಿಯೂ ಕಾರ್ಮಿಕರು ಎಂದು ಸಂಬೋಧಿಸುವುದಿಲ್ಲ ಕಾರಣ ಅವರಿಗೆ ನೌಕರರಿಗೂ ಕಾರ್ಮಿಕರಿಗೂ ಇರುವ ವ್ಯತ್ಯಾಸದ ಬಗ್ಗೆ ಮೈಸೂರು ವಿಭಾಗದ ನಿವೃತ್ತ ಮಹಿಳಾ ನೌಕರರೊಬ್ಬರು ವಿವರವಾಗಿ ತಿಳಿಸಿದ್ದರಿಂದ ಅನಂತ ಸುಬ್ಬರಾವ್‌ ಅವರು ನೌಕರರು ಎಂದು ಕರೆಯುತ್ತಿದ್ದಾರೆ.

ಇನ್ನು ನೌಕರರು ಎಂದರೆ ಯಾರು ಕಾರ್ಮಿಕರು ಎಂದರೆ ಯಾರು ಎಂದು 2020ರಿಂದಲೂ ಪ್ರತಿ ಸಂಘಟನೆಗಳ ಮುಖಂಡರಿಗೆ ವಿಜಯಪಥ ವಿವರಣೆ ನೀಡುತ್ತಲೇ ಬಂದಿದೆ. ಅದನ್ನು ನಿವೃತ್ತ ಮಹಿಳಾ ನೌಕರರೊಬ್ಬರು ಚಾಲನಾ ಸಿಬ್ಬಂದಿಗಳನ್ನು ಕಾರ್ಮಿಕರು ಎಂದು ಕರೆದಿದ್ದಕ್ಕೆ ಇದು ತಪ್ಪು ಅವರು ನೌಕರರು ಎಂದು ವಿವರಣೆ ಸಹಿತ ತಿಳಿಸಿತ್ತು. ಹೌದು ಇದು ನಮಗೆ ಗೊತ್ತಾಗಿರಲಿಲ್ಲ ಎಂದು ಈಗ ನೌಕರರು ಎಂದೆ ಹೆಮ್ಮೆಯಿಂದ ಹೇಳುತ್ತಿದ್ದಾರೆ.

ಆದರೂ ಪ್ರಸ್ತುತ ಸಾರಿಗೆಯ ನೌಕರರಾಗಿರುವ ಕೆಲವರು ತಮ್ಮನ್ನು ತಾವೇ ಕಾರ್ಮಿಕರು ಎಂದು ಕರೆದುಕೊಳ್ಳುತ್ತಿದ್ದಾರೆ. ಜತೆಗೆ ಸಹೋದ್ಯೋಗಿಗಳನ್ನು ಕಾರ್ಮಿಕರು ಎಂದೇ ಹೇಳುತ್ತಾರೆ. ಅದರಲ್ಲೂ ನೌಕರರ ಪರವಾಗಿ ಹುಟ್ಟಿಕೊಂಡಿರುವ ಕೆಲ ನೌಕರರ ಪರ ಸಂಘಟನೆಗಳ ಮುಖಂಡರೂ ಕೂಡ ಕಾರ್ಮಿಕರು ಎಂದು ಪದೇಪದೆ ಕೆರೆಯುವುದು ಭಾರಿ ಮುಜುಗರವನ್ನು ಉಂಟು ಮಾಡುತ್ತಿದೆ.

ನೋಡಿ ಸ್ಪಷ್ಟವಾಗಿ ತಿಳಿದುಕೊಳ್ಳಿ ದಿನಗೂಲಿ ಕೆಲಸ ಮಾಡುವವರು ಮಾತ್ರ ಕಾರ್ಮಿಕರು. ಒಂದು ಸಂಸ್ಥೆಯಿಂದ ಅದೂಕೂಡ ಸರ್ಕಾರದ ಅಧೀನದಲ್ಲಿ ಬರುವ ಸಾರಿಗೆ ನಿಗಮದಲ್ಲಿ ನೇಮಕಗೊಂಡ ಬಳಿಕ ಅವರು ಕಾಯಂ ಕೆಲಸಗಾರರಾಗಿದ್ದರೆ ಅವರು ನೌಕರರಾಗಿರುತ್ತಾರೆ. ಇಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರು ನೌಕರರೆ.

ಆದರೆ, ಅವರವರ ಕೆಲಸ ಗುರುತಿಸುವುದಕ್ಕೆ ಸುಲಭವಾಗಲಿ ಎಂಬ ದೃಷ್ಟಿಯಿಂದ ಅಧಿಕಾರಿಗಳು ನೌಕರರು ಎಂದು ವರ್ಗೀಕರಣ ಮಾಡಲಾಗಿದೆ. ಅಧಿಕಾರಿಗಳು ಎಂದರೆ ಎ,ಬಿ,ಸಿ ಗ್ರೂಪ್‌ನ ನೌಕರರು. ಡಿ ಗ್ರೂಪ್‌ನ ನೌಕರರನ್ನು ಅಧಿಕಾರಿಗಳ ಗ್ರೂಪಿಗೆ ಸೇರಿಸಿಲ್ಲ ಕಾರಣ ಅವರು ಅಧಿಕಾರ ಚಲಾಯಿಸಲು ಬರುವುದಿಲ್ಲ ಮೇಲಧಿಕಾರಿಗಳು ಹೇಳಿದ ಕೆಲಸ ಮಾಡುವವರು ಎಂಬುವುದು.

ಇಲ್ಲಿ ಅಧಿಕಾರಿಗಳು ಎಂದರೆ ತಮ್ಮ ಕೆಳ ಹಂತದ ನೌಕರರಿಗೆ ಈ ಕೆಲಸ ಅಥವಾ ಆ ಕೆಲಸ ಮಾಡಿ ಎಂದು ಸೂಚನೆ ನೀಡುವವರು. ಹೀಗಾಗಿಯೇ ಎ,ಬಿ,ಸಿ ಗ್ರೂಪ್‌ನ ನೌಕರರನ್ನು ಅಧಿಕಾರಿಗಳ ವರ್ಗಕ್ಕೆ ಸೇರಿಸಲಾಗಿದೆ. ಇಲ್ಲಿ ಚಾಲನಾ ಸಿಬ್ಬಂದಿಗಳೂ ಕೂಡ ಒಂದು ದೃಷ್ಟಿಯಲ್ಲಿ ನೋಡಿದರೆ ಅಧಿಕಾರಿಗಳೆ. ಆದರೆ, ಅವರಿಗೆ ತಮ್ಮ ಕೆಳಹಂತದ ನೌಕರರಿಗೆ ಸೂಚನೆ ನೀಡಿ ಕೆಲಸ ಮಾಡಿಸುವ ಅವಕಾಶ ನೀಡದಿರುವುದರಿಂದ ಅವರನ್ನು ನೌಕರರು ಎಂದು ಕರೆಯಲಾಗುತ್ತದೆ.

ಇನ್ನು ಸಾರಿಗೆ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಗಳನ್ನು ಒಳಗೊಂಡತೆ ಇನ್ನು ಹಲವಾರು ಹುದ್ದೆಗಳಲ್ಲಿ ಸಿ ಗ್ರೂಪ್‌ ನೌಕರರು ಇದ್ದಾರೆ ಉದಾ: ಡಿಎಂ, ಎಟಿಎಸ್‌, ಎಟಿಐ, ಟಿಸಿ ಹೀಗೆ ಹಲವಾರು ಹುದ್ದೆಗಳು ಇವೆ. ಇವರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದು ಕೆರೆಯುತ್ತಾರೆ. ಕಾರಣ ಎ ಮತ್ತು ಬಿ ಗ್ರೂಪ್‌ ನೌಕರರು ಇವರಿಗೆ ಈ ಕೆಲಸ ಮಾಡಬೇಕು ಎಂದು ಸೂಚನೆ ನೀಡುತ್ತಾರೆ. ಅವರು ನೀಡಿದ ಸೂಚನೆಯಂತೆ ಇವರು ನಡೆದುಕೊಳ್ಳಬೇಕಿದೆ. ಹೀಗಾಗಿ ಇವರನ್ನು ಸಿಬ್ಬಂದಿಗಳು ಎಂದು ಕರೆಯುವರು.

ಇನ್ನು ಮುಖ್ಯವಾಗಿ ಸಾರಿಗೆ ನಿಗಮಗಳಲ್ಲಿ ಯಾರು ಕೂಡ ಕಾರ್ಮಿಕರು ಇಲ್ಲ. ಎಲ್ಲ ಅವರವರ ವಿದ್ಯಾರ್ಹತೆಗೆ ತಕ್ಕುದಾಗಿ ನೌಕರಿಗೆ ನೇಮಕಗೊಂಡು ಬಂದಿರುವವರು. ಅವರು ದಿನಗೂಲಿಗೆ ಸೇರಿರುವವರಲ್ಲ, ಹೀಗಾಗಿ ಚಾಲನಾ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗಳು ಕೂಡ ನೌಕರರೆ ಹೊರತು ಕಾರ್ಮಿಕರಲ್ಲ. ಇನ್ನಾದರೂ ಈ ಪದ ಬಳಕೆಯನ್ನು ಬದಲಾಯಿಸಿಕೊಳ್ಳಿ.

ಈ ಮೊದಲೇ ಹೇಳಿದಂತೆ ಅನಂತ ಸುಬ್ಬರಾವ್‌ ಅವರಿಗೆ ನಿವೃತ್ತ ಮಹಿಳಾ ನೌಕರರೊಬ್ಬರು ವಿವರಿಸಿದ ಬಳಿಕ ಅವರು ಸಾರಿಗೆ ಸಿಬ್ಬಂದಿಯನ್ನು ಅದರಲ್ಲೂ ಚಾಲನಾ ಸಿಬ್ಬಂದಿಯನ್ನು ಕಾರ್ಮಿಕರು ಎಂದು ಕರೆಯದೆ ಇತ್ತೀಚಿನ ದಿನಗಳಲ್ಲಿ ನೌಕರರು ಎಂದು ಹೇಳುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಹುದ್ದೆಗೆ ತಕ್ಕ ಗೌರವದಿಂದ ನಡೆದುಕೊಳ್ಳಬೇಕಿದೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್