NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು – ವಕೀಲ ನಟರಾಜ ಶರ್ಮಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದರೆ ಅದು ಕ್ಯಾನ್ಸರ್‌ಆಗಿ ಬದಲಾಗುತ್ತದೆ. ಆದೇ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಮಸ್ಯೆಗಳನ್ನು ಹಿಂದಿನ ಸರ್ಕಾರಗಳು ಬಗೆಹರಿಸದ ಪರಿಣಾಮ ಅವು ಕ್ಯಾನ್ಸರ್‌ನಂತೆ  ಬದಲಾಗಿದ್ದರಿಂದ 2021ರಲ್ಲಿ 10ದಿನಗಳ ವರೆಗೆ ರಾಜ್ಯದಲ್ಲಿ ಸಾರಿಗೆ ಬಸ್‌ಗಳು ಸ್ತಬ್ದವಾಗಿದ್ದವು ಎಂದು ವಕೀಲ ನಟರಾಜ ಶರ್ಮಾ ಹೇಳಿದರು.

ಸಾರಿಗೆ ನೌಕರರ ಒಕ್ಕೂಟ ನಗರದ ಟೌನ್‌ಹಾಲ್‌ನಲ್ಲಿ ಇಂದು ಆಯೋಜಿಸಿದ್ದ ಸಾಧಕರಿಗೆ ಮತ್ತು ಮುಷ್ಕರ ವೇಳೆ ನಿವೃತ್ತರಾದ ನೌಕರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೌಕರರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರಿಗೆ ನೌಕರರ ಯಾವುದೇ ರೀತಿಯ ಸಮಸ್ಯೆಗಳು ಬಗೆಹರಿದಿಲ್ಲ ಎಂದರೆ ಅವು ಕ್ಯಾನ್ಸರ್‌ಆಗಿ ಬದಲಾಗುತ್ತವೆ. ಆದರಿಂದಲೇ ಬೆಂಗಳೂರು 10 ದಿನ ಸ್ತಬ್ದವಾಗಿತ್ತು. ಅದು ಮತ್ತೆ ಆಗುವುದು ಬೇಡ ಮತ್ತೆ ನೌಕರರು ಆ ನೋವು ಅನುಭವಿಸುವುದು ಬೇಡ ಹೀಗಾಗಿ ಸರಿ ಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ಹಿಂದಿನ ಸಂಘಟನೆಗಳು ಸರ್ಕಾರ ಮತ್ತು ಆಡಳಿತ ಮಂಡಳಿಗಳ ಮುಂದೆ ಬೇಡಿಕೆಗಳನ್ನು ಇಟ್ಟಿದ್ದವು. ಇದನ್ನು ತಿಳಿದ ಚಂದ್ರು ಸಾರಿಗೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿ ಸರ್‌ ಎಂದು ಹೇಳಿದರು. ಆದರೆ ನಾನು ಮಾತನಾಡುವುದಲ್ಲ ನೌಕರರ ಮುಖಂಡನಾಗಿ ನೀವು ಮಾತನಾಡಬೇಕು ಎಂದು ಹೇಳಿ ರಾಮಲಿಂಗಾರೆಡ್ಡಿ ಸಾಹೇಬರ ಬಳಿ ಕರೆದುಕೊಂಡು ಹೋದೆ ಎಂದು ವಿವರಿಸಿದರು.

ಇನ್ನು ಈ ಸಂಘಟನೆಗಳು ಯಾವ ಕಾರಣಕ್ಕಾಗಿ ಅಗ್ರಿಮೆಂಟ್‌ ಮಾಡಿ ಸೆಟಲ್‌ಮೆಂಟ್‌ ಮಾಡುತ್ತಿದ್ದವೋ ಗೊತ್ತಿಲ್ಲ. ಇದರಿಂದ ಯಾರಿಗೆ ಸೆಟಲ್‌ಮೆಂಟ್‌ ಆಗುತ್ತಿತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಈ ಸೆಟಲ್‌ಮೆಂಟ್‌ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಸಾರಿಗೆ ನೌಕರರು ವೇತನಕ್ಕಾಗಿ ಮುಷ್ಕರಕ್ಕೆ ಹೋಗದಂತಹ ವಾತಾವರಣ ನಿರ್ಮಾಣವಾಗಬೇಕು. ಒಬ್ಬ ಕಳ್ಳತನ ಮಾಡುತ್ತಾನೆ ಎಂದರೆ ಆತ ಹೊಟ್ಟೆಗಾಗಿ ಮಾಡುತ್ತಾನೆ. ಆದರೆ ಆತನಿಗೆ ಹೊಟ್ಟೆ ತುಂಬ ಊಟ ಹಾಕಿದರೆ ಕಳ್ಳತವನ್ನೇಕೆ ಮಾಡುತ್ತಾನೆ ಹೇಳಿ ಎಂದು ಪ್ರಶ್ನಿಸಿದರು.

ಅದೇ ರೀತಿ ಚಾಲನಾ ಸಿಬ್ಬಂದಿಗೆಳಿಗೆ ವೇತನ ಸಾಲುತ್ತಿಲ್ಲ. ಅದಕ್ಕಾಗಿ ಅವರು  ಎನ್‌ಇಎನ್‌ಸಿ ಸುಳಿಗೆ ಸಿಲುಕುತ್ತಾರೆ. ಅದರಿಂದ ಕಳ್ಳತನ ಎಂಬ ಹಣೆಪಟ್ಟಿ ಬೀಳುತ್ತದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದರೆ ಸರ್ಕಾರ ಮತ್ತು ಆಡಳಿತ ಮಂಡಳಿಗಳನ್ನು ಮಾಡಬೇಕು. ಇವೇ ಈ ಹೊಣೆ ಹೊರಬೇಕು. ಕಾರಣ ನೌಕರರಿಗೆ ಸರಿಯಾದ ವೇತನ ಸೌಲಭ್ಯ ನೀಡದಿರುವುದು ಎಂದು ಹೇಳಿದರು.

ಒಬ್ಬ ವ್ಯಕ್ತಿ ಕೂಲಿ ಮಾಡಿದರು ತಿಂಹಗಳಿಗೆ 15000ದಿಂದ 30000 ರೂ.ಗಳವರಗೂ ದುಡಿಯುತ್ತಾನೆ. ಆದರೆ, ಸಾರಿಗೆ ನೌಕರರಿಗೆ ತರಬೇತಿ ಹೆಸರಿನಲ್ಲಿ ಕೇವಲ 11200 ರೂಪಾಯಿ ವೇತನ ಕೊಡಲಾಗುತ್ತಿದೆ, ಇದು ಸರಿಯಾದ ಕ್ರಮವಲ್ಲ. ಹೀಗಾಗಿ ಈ ಬಗ್ಗೆ ತಾವು ಒಳ್ಳೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಾರಿಗೆ ಸಚಿವರನ್ನು ಒತ್ತಾಯಿಸಿದರು.

ಸಾರಿಗೆ ನೌಕರರ ಬೇಡಿಕೆ ಕೇವಲ 4 ಮಾತ್ರ, ಪ್ರಥಮವಾಗಿ ಮಾಸ್ಟರ್‌ ಪೇ ಸ್ಕೇಲ್‌ ಏನಿದೆ ಅದನ್ನು ಮಾಡಬೇಕು. ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಅದು ತಪ್ಪಬೇಕು. ಕಿರುಕುಳದ ಬಗ್ಗೆ ಹೇಳುವುದಾದರೆ ಸಾರಿಗೆ ಬಸ್‌ ತೊಳೆಯುವುದಕ್ಕೆ ನೀರು ತೆಗೆದುಕೊಂಡು ಹೋದ ಚಾಲಕನನ್ನು ವರ್ಗಾವಣೆ, ಅಮಾನತು ಮಾಡಿದ್ದಾರೆ. ಚಾಲಕನ ಕೆಲಸ ಬಸ್‌ ತೊಳೆಯುವುದೆ? ಆದರೂ ಆತ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಬಸ್‌ ತೋಳೆದಿದ್ದಕ್ಕೆ ವರ್ಗಾವಣೆ ಶಿಕ್ಷೆ ಇದು ಅಧಕಾರಿಗಳ ಕಿರುಕುಳ. ಮೊದಲು ಇದು ನಿಲ್ಲ ಬೇಕು.

ನೌಕರರಿಗೆ ಇರುವ ರಜೆಗಳನ್ನು ತೆಗೆದುಕೊಳ್ಳುವುದಕ್ಕೂ ಬಿಡದೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ. ಮನೆಯಲ್ಲಿ ರಕ್ತ ಸಂಬಂಧಿಗಳು, ಸ್ನೇಹಿತ ಮನೆಯಲ್ಲಿ ಸಾವಾದರೆ ಹೋಗುವುದಕ್ಕೆ ರಜೆ ಕೊಡುವುದಿಲ್ಲ. ಇದು ಮೊಸಲು ತೊಲಗಬೇಕು. ಅವರಿಗೂ ರಜೆ ಪಡೆಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡಬೇಕು.

ಇನ್ನು ನೌಕರರ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶೇ.10ರಷ್ಟು ಶೀಟುಗಳ ಉಚಿತ ಸೌಲಭ್ಯ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಚಾಲನಾ ಸಿಬ್ಬಂದಿ ಹೃದಯಾಘಾತಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವುಯುವುದಕ್ಕೆ ಕೂಡಲೆ ವೈದ್ಯಕೀಯ ಸೌಲಭ್ಯ ಸಿಗುವಂತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನು ಸಾರಿಗೆ ಪೇ ಸ್ಕೇಲ್‌ ಬೋರ್ಡ್‌ ಮಾಡಿದರೆ ಅನುಕೂಲವಾಗುತ್ತದೆ. ಈ ಬೋರ್ಡ್‌ ಮಾಡುವ ಮೂಲಕ ನೌಕರರು 4ವರ್ಷಕ್ಕೊಮ್ಮೆ ಆಗುವ ಮುಷ್ಕರ ತಪ್ಪುತದೆ. ಜತೆಗೆ ನಿಗಮಳಿಗೆ ಆಗುತ್ತಿರುವ ಲಾಸ್‌ಅನ್ನು ತಡೆಯಬಹುದು. ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಈಗಾಗಲೇ ಸಾರಿಗೆ ಪೇ ಸ್ಕೇಲ್‌ ಬೋರ್ಡ್‌ ಇದೆ ಅದೇರೀತಿ ನಮ್ಮಲ್ಲೂ ಆಗಬೇಕು ಎಂದು ಕೇಳಿಕೊಂಡರು.

ಇನ್ನು ಪ್ರಮುಖವಾಗಿ 2020-21ರ ವೇಳೆ ಆದ ಮುಷ್ಕರದ ವೇಳೆ ಆಗಿರುವ ಕೆಲ ಚಾಲಕರ ವಜಾ ಪ್ರಕರಣ ಕಳಹಂತದ ನ್ಯಾಯಾಲಯದಲ್ಲಿ ನೌಕರರ ಪರವಾಗಿ ಬಂದಿದೆ. ಆದರೆ ಕೆಲ ಅಧಿಕಾರಿಗಳು ಅದನ್ನು ಹೈ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಹೊರಟಿದ್ದಾರೆ. ಇದರಿಂದ ಸಂಸ್ಥೆಗೂ ಲಾಸ್‌ ಏಕೆಂದರೆ ವಕೀಲ ಫೀ ಇತರೆ ಖರ್ಚುಗಳು ಬರುತ್ತವೆ. ಅಲ್ಲದೆ ನೌಕರರು ಕೆಲಸ ಹೋಗದೆ ಕೋರ್ಟ್‌ ತೀರ್ಪಿಗಾಗಿ ಕಾಯುತ್ತಾರೆ. ಹೀಗಾಗಿ ಇದಕ್ಕೆ ಕೆಲ ಅಧಿಕಾರಿಗಳು ಅಪೀಲ್‌ಹೋಗುವುದಕ್ಕೆ ಮುಂದಾಗಿರುವುದು ಕೈ ಬಿಡಬೇಕು. ಈ ಬಗ್ಗೆ ತಾವು ಗಮನಹರಿಸಿ ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದರು.

Leave a Reply

error: Content is protected !!
LATEST
ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್: 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ಘೋಷಣೆ ಅ.6ರಂದು ನಿವೃತ್ತ ನೌಕರರ ಸಭೆ: BMTC & KSRTC ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTC ತುಮಕೂರು: ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ... ಕರ್ನಾಟಕ - ಆಂಧ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಹೆಚ್ಚಿಸಿ: ಎರಡೂ ನಿಗಮಗಳ ಎಂಡಿಗಳಿಗೆ ಪ್ರಯಾಣಿಕರ ಒತ್ತಾಯ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ KSRTC ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಅನುಷ್ಠಾನ ಶೀಘ್ರ ಜಾರಿಗೊಳಿಸಿ: ಕೇಂದ್ರದ ರಾಜ್ಯ ಕಾರ್ಮಿಕ ಸಚಿವರಿಗೆ ಸಂಸದ... ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ! BMTC ಚಾಲನಾ ಸಿಬ್ಬಂದಿಗಳಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು: ಲಿಖಿತವಾಗಿ ಎಂಡಿಗೆ ಮನವಿ ಸಲ್ಲಿಸಿದ ನೌಕರ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತ ಕೆಂಪಣ್ಣ ಆಯೋಗದ ವರದಿ ತಕ್ಷಣ ಬಹಿರಂಗ ಪಡಿಸಿ, ಸದನದಲ್ಲಿ ಮಂಡಿಸಿ: ಎಎಪಿ ಒತ್...