Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಮಸ್ತ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರು ನಾವು ಬೇರೆಬೇರೆ ಎಂದು ಭೇದಭಾವ ಮಾಡದೆ ಒಗ್ಗಟ್ಟಿನಿಂದ ದೃಢನಿರ್ಧಾರ ತೆಗೆದುಕೊಳ್ಳುವತ್ತ ಮಹತ್ವದ ಹೆಜ್ಜೆ ಇಡುತ್ತಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು- ನೌಕರರಲ್ಲದ ಸಂಘಟನೆಗಳನ್ನು ದೂರವಿಟ್ಟು ಸರ್ಕಾರಕ್ಕೆ ಈಗಾಗಲೇ ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ಚಿಂತನೆ ನಡೆಸಿದ್ದಾರೆ.

ಈ ಹಿಂದಿನಿಂದ ಅಂದರೆ  ಕಳೆದ 4 ದಶಕಗಳಿಂದಲೂ ಈವರೆಗೂ ಅಧಿಕಾರಿ ವರ್ಗ ನಮಗೆ ವೇತನ ಹೆಚ್ಚಳ ಮಾಡಿ ಎಂದು ಸರ್ಕಾರಕ್ಕಾಗಲಿ ಅಥವಾ ಆಡಳಿತ ಮಂಡಳಿಗಳಿಗಾಗಲಿ ಮನವಿ ಸಲ್ಲಿಸಿರಲಿಲ್ಲ. ಹೀಗಾಗಿ ಸಾರಿಗೆ ಚಾಲನಾ ಸಿಬ್ಬಂದಿ ಈ ವೇತನ ಹೆಚ್ಚಳಕ್ಕಾಗಿ ಪ್ರತಿ 4ವರ್ಷಕ್ಕೊಮ್ಮೆ 3-4ದಿನಗಳು ಮುಷ್ಕರ ಮಾಡಿದ ಬಳಿಕ ಒಂದಷ್ಟು ವೇತನ ಹೆಚ್ಚಳವಾಗುತ್ತಿದೆ.

ಈ ವೇತನ ಹೆಚ್ಚಳ ಮಾಡುವುದಕ್ಕೂ ಮೊದಲು ಧರಣಿ ನಿರತ ನೂರಾರು ನೌಕರರನ್ನು ಅದರಲ್ಲೂ ಮುಷ್ಕರದ ಮುಂದಾಳತ್ವ ವಹಿಸಿಕೊಂಡವರನ್ನು ಅಮಾನತು, ವಜಾ, ವರ್ಗಾವಣೆ ಮಾಡಿ ಅವರಿಗೆ ನೋವು ಕೊಟ್ಟು, ಅವರ ವೇತನಕ್ಕೆ ಮತ್ತು ಮುಂಬಡ್ತಿಯನ್ನು ಕಸಿದುಕೊಂಡು ಮತ್ತೆ ಡ್ಯೂಟಿ ಕೊಡುವ ಚಾಳಿ ಇದೆ.

ಹೀಗಾಗಿ ಈ ರೀತಿ ವೇತನ ಪರಿಷ್ಕಣೆಗಾಗಿ ನೂರಾರು, ಸಾವಿರಾರು ನೌಕರರು ಬೀದಿಗೆ ಬರುವುದು ಬೇಡ ಎಂದು ಕಳೆದ 2021ರ ಏಪ್ರಿಲ್‌ನಲ್ಲಿ ನಿರಂತವಾಗಿ 14ದಿನಗಳ ಕಾಲ ಮುಷ್ಕರ ಭಾರಿ ದೊಡ್ಡಮಟ್ಟದಲ್ಲೇ ನಡೆಯಿತು. ಆ ವೇಳೆ ಕೆಲ ಸಂಘಟನೆಗಳ ಮುಖಂಡರೆ ಮುಷ್ಕರ ನಿರತ ನೌಕರರನ್ನು ಅಮಾನತು, ವಜಾ, ವರ್ಗಾವಣೆ ಜತೆಗೆ ಪೊಲೀಸ್‌ ಕೇಸ್‌ಗಳನ್ನು ಹಾಕಿಸಿ ಒಂದು ರೀತಿ ನೌಕರರ ವಿರುದ್ಧವೇ ಸೇಡು ತೀರಿಸಿಕೊಳ್ಳುವಂತೆ ವರ್ತಿಸಿದರು.

ಆ ವೇಳೆ ಇದೇ ನಾಲ್ಕೂ ನಿಗಮಗಳ ಅಧಿಕಾರಿಗಳು ಕೂಡ ತಮಗೆ ವೇತನ ಹೆಚ್ಚಳವಾಗುತ್ತಿರುವುದೇ ಇವರ ಹೋರಾಟದಿಂದ ಎಂದು ತಿಳಿದಿದ್ದರೂ ಆ ಕೆಲ ಮುಖಂಡರ ಮಾತನ್ನು ಕೇಳಿ ನೌಕರರನ್ನು ಬಲಿಪಶು ಮಾಡಿದರು. ಆ ಬಳಿಕ ಅಂದರೆ ಈಗ ಅಧಿಕಾರಿಗಳಿಗೂ ತಾವು ಮಾಡಿದ ತಪ್ಪಿನ ಅರಿವಾಗಿದೆ. ಹೀಗಾಗಿ ಪ್ರಸ್ತುತ ನಾವು ಅಂದರೆ ಅಧಿಕಾರಿಗಳು- ನೌಕರರು ಬೇರೆಬೇರೆ ಅಲ್ಲ ನಾವೆಲ್ಲ ಸಂಸ್ಥೆಯ ಸಹೋದ್ಯೋಗಿಗಳು ಎಂದು ಅರಿತಿದ್ದಾರೆ.

ಹೀಗಾಗಿ ಈವರೆಗೂ ವೇತನ ಹೆಚ್ಚಳ ಸಂಬಂಧ ಯಾವುದೇ ಮನವಿಯನ್ನು ಕೊಡದಿದ್ದವರು ಈಗ ಮನವಿ ಪತ್ರವನ್ನು ಸಂಬಂಧಪಟ್ಟವರಿಗೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ನಮಗೂ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಅಂದರೆ 7ನೇ ವೇತನ ಆಯೋಗವನ್ನು ಅಳವಡಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ.

ಇದು ಸಾರಿಗೆ ನಿಗಮಗಳಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಂತಾಗಿದೆ. ಈವರೆಗೂ ನೌಕರರು ನಾವು ಬೇರೆಬೇರೆ ಎಂದುಕೊಂಡಿದ್ದ ಅಧಿಕಾರಿಗಳು ಕೂಡ ನಾವೆಲ್ಲರೂ ಒಂದೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಅಧಿಕಾರಿಗಳನ್ನು ಬೇರೆ ರೀತಿ ನೋಡುತ್ತಿದ್ದ ನೌಕರರು ಕೂಡ ಇಂದು ಅವರು ನಮ್ಮ ಮೇಲಧಿಕಾರಿಗಳು ಅವರು ನಮ್ಮವರೆ ಎನ್ನುತ್ತಿದ್ದಾರೆ.

ಇನ್ನು ಈ ಎಲ್ಲದರ ನಡುವೆ ನೌಕರರು ಮತ್ತು ಅಧಿಕಾರಿಗಳ  ಮಧ್ಯೆಯೇ ಭಾರಿ ಅಂದರೆ ದೊಡ್ಡ ಕಂದಕವನ್ನೇ ಸೃಷ್ಟಿಸಿ ಒಡೆದಾಳುತ್ತಿದ್ದ ಕೆಲ ಸಂಘಟನೆಗಳ ಮುಖಂಡರ ಮುಖವಾಡ ಈಗ ಕಳಚಿದ್ದು ಸಮಸ್ತ ಸಾರಿಗೆಯ 1.25 ಲಕ್ಷ ನೌಕರರು ಕಾಲಕಾಲಕ್ಕೆ ತಕ್ಕ ಸೌಲಭ್ಯಗಳನ್ನು ಪಡೆಯುವುದಕ್ಕೆ ಒಗ್ಗಟ್ಟಾಗಿದ್ದಾರೆ.

ಇನ್ನು ಈಗಲೂ ಸಾರಿಗೆಯ ಅಧಿಕಾರಿಗಳು- ನೌಕರರ ಸಲಹೆ ಕೇಳದೆ ಕೆಲ ಸಂಘಟನೆಗಳ ಮುಖಂಡರು ವೇತನ ಹೆಚ್ಚಳದ ಬೇಡಿಕೆಯನ್ನು ಸರ್ಕಾರ ಮುಂದೆ ಇಡುತ್ತಿದ್ದಾರೆ. ಅಲ್ಲದೆ ಒಂದು ರೀತಿ ಸರ್ವಾಧಿಕಾರಿ ಧೋರಣೆಯಲ್ಲಿ ನೌಕರರ ದೂರವಿಟ್ಟು ನಿರ್ಧಾರ ತೆಗೆದುಕೊಂಡು ಬಳಿಕ ನೌಕರರ ಬೆಂಬಲವಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುತ್ತಿದ್ದಾರೆ.

ಆದರೆ ಶೇ.99ರಷ್ಟು ನೌಕರರು ನೂರಕ್ಕೆ ನೂರರಷ್ಟು ಅಧಿಕಾರಿಗಳಿಗೆ ನಾಲ್ಕೂ ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ನಮಗೆ ಸರಿ ಸಮಾನ ವೇತನ ಆಗಬೇಕು ಆ ನಿಟ್ಟಿನಲ್ಲಿ ನಮ್ಮ ಪರವಾಗಿ ಹೋರಾಟ ಮಾಡುವುದಿದ್ದರೆ  ಬನ್ನಿ ಇಲ್ಲ ಸುಮ್ಮನಿರಿ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ.

ಈ ಎಲ್ಲದರ ನಡುವೆ ನಾವು ಯಾವ ಸಂಘಟನೆಗಳನ್ನು ನೆಚ್ಚಿಕೊಂಡರು ಪ್ರಯೋಜನವಿಲ್ಲ ಅಧಿಕಾರಿಗಳು-ನೌಕರರು ಒಗ್ಗಟ್ಟಿನಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದು ಈಗಾಗಲೇ ನಿರ್ಧಾರಕ್ಕೆ ಬಂದಿದ್ದು ಈ ಸಂಬಂಧ ಹಲವಾರು ಸುತ್ತಿನ ಮಾತುಕತೆಗಳು ಆಗಿವೆ. ಅದರಂತೆ ಸರ್ಕಾರ ಕೂಡ ನೂರಕ್ಕೆ ಇನ್ನೂರರಷ್ಟು ಅಧಿಕಾರಿಗಳು -ನೌಕರರ ಬೇಡಿಕೆ ಈಡೇರಿಸುವತ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೆಸರೇಳಲಿಚ್ಛಿಸದ ಅಧಿಕಾರೊಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್