Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಡಿ.31ರ ಮುಷ್ಕರ ಬೆಂಬಲಿಸುವಂತೆ ಕೂಟಕ್ಕೆ ಜಂಟಿ ಕ್ರಿಯಾ ಸಮಿತಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳ ಈಡೇರಿಕಗಾಗಿ ಜಂಟಿ ಕ್ರಿಯಾ ಸಮಿತಿ ಇದೇ ಡಿ.31ರಂದು ಮುಷ್ಕರಕ್ಕೆ ಕರೆ ನೀಡಿದೆ.

ಅದರ ಮುಂದುವರಿದ ಭಾಗವಾಗಿ ಇಂದು ಡಿ.13ರಂದು ಜಂಟಿ ಕ್ರಿಯಾ ಸಮಿತಿಯ ಪರವಾಗಿ ಫೆಡರೇಷನ್ ಜಂಟಿ ಕಾರ್ಯದರ್ಶಿ  ಹಾಗೂ ಡಿಆರ್‌ಬಿಎಫ್ ಸೆಕ್ರೆಟರಿ ಮಂಜುಳಾ ಮತ್ತು ಭವಿಷ್ಯ ನಿಧಿ ಧರ್ಮದರ್ಶಿ ಶಶಿರೇಖಾ ಅವರು ಕೂಟದ ಕಚೇರಿಗೆ ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕೂಟದ ಕಚೇರಿಗೆ ಭೇಟಿ ನೀಡಿದಾಗ ಕಚೇರಿಯು ಬಾಗಿಲು ಹಾಕಿದ ಕಾರಣ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಅವರಿಗೆ ಫೋನ್‌ ಮೂಲಕ ಕರೆ ಮಾಡಿ ವಿಷಯವನ್ನು ತಿಳಿಸಿದ್ದು, ಆ ವೇಳೆ ಚಂದ್ರು ಕಚೇರಿಯ ಕಿಟಕಿಯ ಮೂಲಕ ಒಳಗೆ ಹಾಕಿ ಹೋಗಿ ಎಂದು ಹೇಳಿದ ಕಾರಣ ಅದೇ ರೀತಿ ಮಾಡಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಇತ್ತ ಜಂಟಿ ಕ್ರಿಯಾ ಸಮಿತಿ ಡಿ.31ರಂದು ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಇವರು ಮಾಡಿಸಲು ಹೊರಟಿರುವ ನಾಲ್ಕೂ ವರ್ಷಕ್ಕೊಮ್ಮೆ ಅಗ್ರಿಮೆಂಟ್‌ಗೆ ನಮ್ಮ ಬೆಂಬಲವಿಲ್ಲ ಎಂದು ನಾಲ್ಕೂ ಸಾರಿಗೆಯ ಬಹುತೇಕ ನೌಕರರು ಹಾಗೂ 100ಕ್ಕೆ 100ರಷ್ಟು ಅಧಿಕಾರಿಗಳು ಈಗಾಗಲೇ ಮಾಧ್ಯಮಗಳಲ್ಲಿಯೇ ಹೇಳಿಕೆ ನೀಡಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ ಡಿ.31ಕ್ಕೆ ಹಮ್ಮಿಕೊಂಡಿರುವ ಮುಷ್ಕರ ನಡೆಯುವ ಡೌಟು ಎಂದು ಜಂಟಿ ಕ್ರಿಯಾ ಸಮಿತಿಯ  ಕೆಲ ಪದಾಧಿಕಾರಿಗಳೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.  ಇನ್ನೊಂದೆಡೆ ಅಧಿಕಾರಿಗಳ ಬಿಟ್ಟು ನೌಕರರಿಗಷ್ಟೇ ವೇತನ ಹೆಚ್ಚಳವಾಗುತ್ತದೆ ಎಂಬಂತೆ ಮುಷ್ಕರ ನಡೆಯಲಿದೆ ಎಂದು ಹೇಳಿಕೊಂಡು ಹೊರಟಿರುವ ಸಮಿತಿಯ ನಡೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಈವರೆಗೂ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಹೋರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ಭಾಗವಾಗಿರುವ ಅನಂತ ಸುಬ್ಬರಾವ್‌ ಅವರು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಅವರು ಏಕೆ ಹೋರಾಟ ಮಾಡಬಾರದು ಎಂಬುದಕ್ಕೆ ಸಮಂಜವಾದ ಉತ್ತರ ಕೊಡುತ್ತಿಲ್ಲ.

ನಮ್ಮ ಭಾರತ ಸಂವಿಧಾನವೇ ಹೇಳುತ್ತದೆ ನಿಮ್ಮ ಹಕ್ಕು ಪಡೆಯುವುದಕ್ಕೆ ಹೋರಾಟ ಅನಿವಾರ್ಯವಾದರೆ ನೀವು ಹೋರಾಟಕ್ಕೆ ಇಳಿಯ ಬಹುದು ಎಂದು. ಆದರೆ ಅನಂತ ಸುಬ್ಬರಾವ್‌ ಅವರು ಮಾತ್ರ ಅಧಿಕಾರಿಗಳು ಹೋರಾಟ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ.

ಇನ್ನು ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರು ಒಟ್ಟಾಗಿ ಹೋರಾಟಕ್ಕೆ ಕರೆ ನೀಡಿದ್ದರಿದಲೇ ಸರ್ಕಾರ ಅವರಿಗೆ ಶೇ.27.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿದ್ದು ಅದು ಕೂಡ ತರಾತುರಿಯಲ್ಲಿ ವೇತನ ಹೆಚ್ಚಳದ ಆದೇಶ ಮಾಡಿದ್ದು ನಮ್ಮ ಮುಂದೆಯೇ ಇದೆ. ಸರ್ಕಾರಿ ಅಧಿಕಾರಿಗಳು/ನೌಕರರಿಗೆ ಮುಷ್ಕರ ಮಾಡಲು ಹಕ್ಕಿದೆ ಎಂದ ಮೇಲೆ ಸಾರಿಗೆ ಅಧಿಕಾರಿಗಳು ಏಕೆ ಮುಷ್ಕರ ಮಾಡಬಾರದು?

ಇದನ್ನು ನೋಡಿದರೆ ಎಲ್ಲೋ ಅಧಿಕಾರಿಗಳ ದಾರಿ ತಪ್ಪಿಸುವ ಕೆಲಸಕ್ಕೆ ಅನಂತ ಸುಬ್ಬರಾವ್‌ ಅವರು ಮುಂದಾಗಿದ್ದಾರೆ ಎನಿಸುತ್ತಿದೆ. ಅಲ್ಲದೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರಕ್ಕೆ ಬಹುತೇಕ ನೌಕರರ ವಿರೋಧವಿದೆ. ಆದರೂ ಯಾವ ಧೈರ್ಯದ ಮೇಲೆ ಇರುವ ಕೆರೆ ನೀಡಿದ್ದಾರೋ ಗೊತ್ತಿಲ್ಲ. ಇದು ಗೊತ್ತಾಗಬೇಕಾದರೆ ಎಲ್ಲರೂ ಡಿ.31ರವರೆಗೂ ಕಾಯಬೇಕಿದೆ.

Leave a Reply

error: Content is protected !!
LATEST
ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿದ್ದ ಆರೋಪಿ ಸೆರೆ ಬೀದರ್: ಸಿಬ್ಬಂದಿ ಹತ್ಯೆಮಾಡಿ 93 ಲಕ್ಷ ದೋಚಿ ಪರಾರಿಯಾಗಿದ್ದ ಖದೀಮರ ಬಂಧನ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ನಟ ಸೈಫ್‌ ಅಲಿ ಖಾನ್‌ ಪ್ರಾಣಾಪಾಯದಿಂದ ಪಾರು ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಸಿಬ್ಬಂದಿ ಮೇಲೆ ಖದೀಮರಿಂದ ಗುಂಡಿನ ದಾಳಿ- ಓರ್ವ ಸಾವು, ₹93 ಲಕ್ಷ ದೋಚಿ ಪರಾರಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ ವಿತರಣೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ ₹390 ಕೋಟಿ ಹೂಡಿಕೆಯ ಬ್ಯಾಟರಿ ಫ್ಯಾಕ್ಟರಿಗೆ ಶಂಕುಸ್ಥಾಪನೆ : ಸಚಿವ ಪಾಟೀಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ವಿಧಿವಶ ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ BMTC ಕಂಡಕ್ಟರ್‌: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ - ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನು...