KSRTC: ಬಸ್ ಕಂಪನಿಯೇ ಪ್ರಮಾಣಪತ್ರ ಕೊಟ್ಟಿಲ್ಲ- ಕೆಎಂಪಿಎಲ್ ಕಡಿಮೆ ಅಂತ ನೌಕರರಿಗೆ ಮೆಮೋ ಕೊಡುವ ಅಧಿಕಾರಿಗಳು !?
ಬೆಂಗಳೂರು: ಅತ್ಯಂತ ಹೆಚ್ಚಿನ ಕೆಎಂಪಿಎಲ್ ಸಾಧನೆ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ದೊರೆತ್ತಿದೆ ಈಗಲು ದೊರೆಯುತ್ತಿದೆ. ಇದು ಸಂಸ್ಥೆಗೆ ಮತ್ತು ನೌಕರರಿಗೆ ಖಷಿಯವಿಷಯವೆ.
ಆದರೆ, ಗುಜರಿಗೆ ಹೋಗುವ ಬಸ್‌ಗಳನ್ನು ಚಾಲಕರಿಗೆ ಕೊಟ್ಟು ಕೆಎಂಪಿಎಲ್ ತರಬೇಕು ಎಂದು ಪೀಡಿಸಿದರೆ ಆ ಚಾಲಕರು ಬಸ್‌ಗಳನ್ನು ಓಡಿಸಬೇಕಾ ಇಲ್ಲ ಯಾವುದಾದರು ಜನ ಕಡಿಮೆ ಇರುವ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸಿಕೊಂಡು ಬಳಿಕ ಡಿಪೋಗಳಿಗೆ ತರಬೇಕಾ ಎಂಬ ಪ್ರಶ್ನೆಯೂ ಮೂಡುತ್ತಿದೆ.
ಹೌದು! ಬಸ್‌ಗಳ ತಯಾರಿಕ ಕಂಪನಿಗಳೆ ಒಂದು ಲೀಟರ್ ಡೀಸೆಲ್‌ಗೆ ಇಷ್ಟೇ ಕಿಲೋ ಮೀಟರ್ ಈ ಬಸ್ ಓಡುತ್ತದೆ ಎಂದು ಪ್ರಮಾಣ ಪತ್ರ ಕೊಡುವುದಿಲ್ಲ. ಹೀಗಿರುವಾಗ ಚಾಲಕರಿಗೆ ಇಷ್ಟೇ ಕೆಎಂಪಿಎಲ್ ತರಬೇಕು ಎಂದು ಮಾನಸಿಕವಾಗಿ ಒತ್ತಡ ಹಾಕುವುದು ಏಕೆ ಎಂಬುದಕ್ಕೆ ಈವರೆಗೂ ಸಾರಿಗೆ ನಿಗಮಗಳ ತಾಂತ್ರಿಕ ವಿಭಾಗದ ಅಧಿಕಾರಿಗಳು ಸಮಂಜಸವಾದ ಉತ್ತರವನ್ನೇ ಕೊಟ್ಟಿಲ್ಲ.
ಈ ಬಗ್ಗೆ ಆರ್‌ಟಿಐ ಅಡಿ ಹಲವಾರು ನೌಕರರು ಕೇಳಿದ್ದು ಅದಕ್ಕೆ ನಿಗಮದಗಳ ತಾಂತ್ರಿಕ ವಿಭಾಗದ ಅಧಿಕಾರಿಗಳು ಬಸ್ ಕಂಪನಿಯಿಂದ ಕೆಎಂಪಿಎಲ್ ಬಗ್ಗೆ ಯಾವುದೇ ಕಂಪನಿಗಳು ಪ್ರಮಾಣ ಪತ್ರ ಕೊಟ್ಟಿಲ್ಲ ಎಂದೇ ಲಿಖಿತವಾಗಿಯೇ ತಿಳಿಸಿದ್ದಾರೆ. ಆದರೂ ಕೆಎಂಪಿಎಲ್ ತರಬೇಕು ಎಂದು ಚಾಲಕರನ್ನು ಹಿಂಸೆಗೆ ದೂಡಲಾಗುತ್ತಿದೆ.
ಜತೆಗೆ ಚಾಲಕರಿಗೆ ನೀವು ಕೆಎಂಪಿಎಲ್ ತಂದಿಲ್ಲ ಎಂದು ವೇತನ ಕಡಿತ ಮಾಡುವುದು, ಅವರ ರೂಟ್ ಬದಲಾಯಿಸುವುದು ಜತೆಗೆ ಕಿರುಕುಳ ಕೊಡುವುದು ನಡೆಯುತ್ತಲೇ ಇದೆ. ಇದರಿಂದ ನೌಕರರು ಮಾನಸಿಕವಾಗಿ ಕಿನ್ನತೆ ಜಾರುತ್ತಿದ್ದಾರೆ.
ಅಧಿಕಾರಿಗಳಾದ ನೀವು ಕೆಎಂಪಿಎಲ್ ತರಲೇಬೇಕು ಎಂದು ಒಂದು ಗುರಿ ಇಟ್ಟುಕೊಂಡಿದ್ದರೆ ಅದಕ್ಕೆ ತಕ್ಕಂತೆ ರಸ್ತೆಗಳಿಗೆ ಹೊಂದಿಕೊಳ್ಳುವ ಬಸ್‌ಗಳನ್ನು ಕೊಡಬೇಕು ಅಲ್ಲವೇ? ನೀವು ಹಳೇ ಮತ್ತು ಗುಜರಿಗೆ ಹೋಗುವಂಥ ಬಸ್‌ಗಳನ್ನು ಕೊಟ್ಟು ಡೀಸೆಲ್ ಕುಡಿಸಿಕೊಂಡು ಬಂದಿದ್ದೀಯೇ ಎಂದು ಚಾಲಕರಿಗೆ ಮೆಮೋ ಕೊಟ್ಟರೆ ಅವರು ಏನು ಮಾಡಲು ಸಾಧ್ಯ?
ಚಾಲಕರು ಹೆಚ್ಚು ಡೀಸೆಲ್ ವ್ಯಯಿಸಿಕೊಂಡು ಬಂದಿದ್ದಾರೆ ಎಂದು ನಿಮಗೆ ಅನುಮಾನವಿದ್ದರೆ ಅದೇ ಚಾಲಕನನ್ನು ಅದೇ ಬಸ್‌ನಲ್ಲಿ ಕರೆದುಕೊಂಡು ಜತೆಗೆ ನೀವೆ ( ಯಾರು ತಾಂತ್ರಿಕ ಅಧಿಕಾರಿ/ ಸಿಬ್ಬಂದಿ) ಬಸ್ ಓಡಿಸಿಕೊಂಡು ಹೋಗುವ ಮೂಲಕ ಕೆಎಂಪಿಎಲ್ ಇಷ್ಟು ಬರಬೇಕು ಎಂಬುದನ್ನು ತೋರಿಸಿಕೊಡಿ. ನೀವು ಓಡಿಸಿದಾಗ ಆ ಬಸ್ ಕಡಿಮೆ ಡೀಸೆಲ್ ಕುಡಿದು ಈ ಚಾಲಕ ಓಡಿಸುವಾಗ ಹೆಚ್ಚು ಕುಡಿದಿದ್ದರೆ ಆಗ ಆತನಿಗೆ ಕಾರಣ ಕೇಳಿ ಮೆಮೋ ಕೊಡಬಹುದು.
ಆದರೆ ನಿತ್ಯ ಸಾಮರ್ಥ್ಯಕಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಚಾಲಕರು ಬಸ್ ಚಲಾಯಿಸುವುದು ಎಷ್ಟು ತ್ರಾಸದಾಯಕವಾಗಿದೆ ಎಂಬುವುದು ಬಸ್ ಓಡಿಸುವವರಿಗೇ ಗೊತ್ತು. ಅದನ್ನು ಬಿಟ್ಟು ಡಿಪೋಗಳಲ್ಲಿ, ಕೇಚೇರಿಗಳಲ್ಲಿ ಫ್ಯಾನ್/ ಎಸಿ ಕೆಳಗೆ ಕುಳಿತುಕೊಂಡು ಕೆಎಂಪಿಎಲ್ ತಂದಿಲ್ಲ ಎಂದು ಮೆಮೋ ಕೊಟ್ಟರೆ ಅಮಾಯಕ ಚಾಲಕರು ಏನು ಮಾಡಬೇಕು. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ನೌಕರರು ಅನುಭವಿಸುತ್ತಿರುವ ಕಿರುಕುಳಗಳನ್ನು ತಪ್ಪಿಸುವತ್ತ ಗಮನಹರಿಸಬೇಕಿದೆ.
ಇನ್ನು ನೌಕರರು ತಪ್ಪು ಮಾಡಿದರೆ ಶಿಕ್ಷೆಕೊಡಿ. ಆದರೆ ಇತ್ತೀಚೆಗೆ ಬರುತ್ತಿರುವ ಎಲ್ಲ ಚಾಲಕರು ಮತ್ತು ನಿರ್ವಾಹಕರು ಬಹುತೇಕ ಎಲ್ಲರೂ ಪದವೀಧರೆ ಇರುತ್ತಾರೆ. ಅವರಿಗೆ ತಕ್ಕುದಾದ ಕೆಲಸ ಸಿಗದಿರುವುದಕ್ಕೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಒಂದು ಕೆಲಸ ಬೇಕು ಅದು ಯಾವುದಾದರೇನು ಎಂಬ ಲೆಕ್ಕಚಾರದಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಈಗಿನ ನೌಕರರು ನಿಮ್ಮಷ್ಟೇ ಓದಿರುತ್ತಾರೆ. ಹೀಗಾಗಿ ಅವರಿಗೂ ಗೌರವ ಕೊಡುವುದನ್ನು ರೋಢಿಸಿಕೊಳ್ಳಬೇಕಿದೆ.